ಏಷ್ಯಾದಲ್ಲೇ ಅತ್ಯಂತ ಭ್ರಷ್ಟ ರಾಷ್ಟ್ರ ಭಾರತ: ಸಮೀಕ್ಷಾ ವರದಿ
ಏಷ್ಯಾದಲ್ಲೇ ಭಾರತವು ಅತಿ ಹೆಚ್ಚು ಭಷ್ಟಾಚಾರ ಹೊಂದಿರುವ ದೇಶವಾಗಿದೆ. ಇಲ್ಲಿ ಸಾರ್ವಜನಿಕ ಸೇವೆಗಳನ್ನು ಪಡೆಯಲು ಲಂಚ ಮತ್ತು ವೈಯಕ್ತಿಕ ಸಂಪರ್ಕಗಳನ್ನು ಬಳಸಿಕೊಳ್ಳುವ್ರ ಸಂಖ್ಯೆ ಹೆಚ್ಚು ಎಂದು ಟ್ರಾನ್ಸ್‌ಪರೆನ್ಸಿ ಇಂಟರ್ ನ್ಯಾಷನಲ್ ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ,.
ಲಂಚ ಪಾವತಿಸಿದ ಸುಮಾರು 50% ದಷ್ಟು ಜನರಲ್ಲಿ 32% ರಷ್ಟು ಜನರು ವೈಯಕ್ತಿಕ ಸಂಪರ್ಕಗಳನ್ನು ಬಳಸದೆ ತಾವು ಸೇವೆಯನ್ನು ಪಡೆಯಲು ಸಾಧ್ಯವಿರಲಿಲ್ಲ ಎಂದು ಹೇಳಿದ್ದಾರೆ. ಈ ವರ್ಷದ ಜೂನ್ 17 ಮತ್ತು ಜುಲೈ 17 ರ ನಡುವೆ ಭಾರತದಲ್ಲಿ 2,000 ಮಾದರಿ ಗಾತ್ರದೊಂದಿಗೆ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ಸಮೀಕ್ಷಾ ವರದಿ ತಯಾರಾಗಿದೆ.
ಭ್ರಷ್ಟಾಚಾರದ ಪ್ರಕರಣಗಳನ್ನು ತಡೆಯಲು ದೂರು ನೀಡುವುದು ಅಗತ್ಯವೆನಿಸಿದರೂ ಭಾರತದ ಬಹುಪಾಲು ನಾಗರಿಕರು (ಶೇಕಡಾ 63) ಭ್ರಷ್ಟಾಚಾರದ ಬಗ್ಗೆ ದೂರು ನೀಡಿದರೆ ಪ್ರತೀಕಾರಕ್ಕೆ ಒಳಗಾಗುತ್ತಾರೆ ಎಂದು ವರದಿ ಹೇಳಿದೆ.
ಭಾರತ, ಮಲೇಷ್ಯಾ, ಥೈಲ್ಯಾಂಡ್, ಶ್ರೀಲಂಕಾ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವಾರು ದೇಶಗಳಲ್ಲಿ ಲೈಂಗಿಕ ಸುಲಿಗೆ ಪ್ರಮಾಣವೂ ಹೆಚ್ಚಾಗಿದೆ ಮತ್ತು ಇದನ್ನು ತಡೆಗಟ್ಟಲು ಹಾಗೂ ನಿರ್ದಿಷ್ಟ ಲಿಂಗಭೇದದ ಭ್ರಷ್ಟಾಚಾರವನ್ನು ಪರಿಹರಿಸಲು ಹೆಚ್ಚಿನದನ್ನು ಮಾಡಬೇಕು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿ ಮೊಬೈಲ್ ಪಡೆದಿದ್ದು ಹೇಗೆ? ಸುಶೀಲ್ ಮೋದಿ ಪ್ರಶ್ನೆ!
ಲೈಂಗಿಕ ಸುಲಿಗೆ ಎನ್ನುವುದು ಫೋಟೋಗಳನ್ನು ತಿದ್ದಿ ಆ ಮೂಲಕ ಲೈಂಗಿಕ ಚಟುವಟಿಕೆಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುವ ಮೂಲಕ ಹಣ ಅಥವಾ ಲೈಂಗಿಕ ನೆರವು ಪಡೆಯುವುದಾಗಿದೆ.
ಭಾರತದಲ್ಲಿ, 89% ರಷ್ಟು ಜನರು ಸರ್ಕಾರದ ಭ್ರಷ್ಟಾಚಾರವು ಒಂದು ದೊಡ್ಡ ಸಮಸ್ಯೆ ಎಂದು ಭಾವಿಸುತ್ತಾರೆ, 18% ಜನರು ಮತಗಳಿಗಾಗಿ ಲಂಚ ಪಡೆಯುತ್ತಾರೆ ಮತ್ತು 11% ಲೈಂಗಿಕ ಸುಳಿಗೆಯ ಅನುಭವ ಹೊಂದಿದ್ದಾರೆ ಅಥವಾ ಅದು ನಡೆಸುವವರನ್ನು ತಿಳಿದಿದ್ದಾರೆ.
ಸಮೀಕ್ಷೆಯಲ್ಲಿ 63% ದಷ್ಟು ಜನರು ಭ್ರಷ್ಟಾಚಾರವನ್ನು ನಿಭಾಯಿಸುವಲ್ಲಿ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರೆ, 73% ಜನರು ದೇಶದ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
17 ದೇಶಗಳಲ್ಲಿ ನಡೆಸಿದ ಕ್ಷೇತ್ರಕಾರ್ಯದ ಆಧಾರದ ಮೇಲೆ, ಸಂಸ್ಥೆಯೂ ಒಟ್ಟು 20,000 ನಾಗರಿಕರನ್ನು ಸಮೀಕ್ಷೆ ಮಾಡಿದೆ.
ಇದನ್ನೂ ಓದಿ: ಸಚಿವ ಸ್ಥಾನಕ್ಕಾಗಿ ಲಾಬಿ : ಕೂಡಿಬರುತ್ತಾ ಸಿ.ಪಿ ಯೋಗೇಶ್ವರ್ ಗೆ ಯೋಗ..?