ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ನಲ್ಲಿ ಬ್ರೇಕ್‌ಡ್ಯಾನ್ಸ್‌ಗೆ ಮಾನ್ಯತೆ!

ಬ್ರೇಕ್‌ಡ್ಯಾನ್, ಸ್ಕೇಟ್‌ ಬೋರ್ಡಿಂಗ್‌, ಸ್ಪೋರ್ಟ್‌ ಕ್ಲೈಬಿಂಗ್‌ ಮತ್ತು ಸರ್ಫಿಂಗ್‌ಗಳಿಗೆ ಒಲಿಂಪಿಕ್ಸ್‌ ಕ್ರೀಡೆಗಳ ಮಾನ್ಯತೆಯನ್ನು ನೀಡಲಾಗಿದ್ದು, ಮುಂದಿನ ಒಲಿಂಲಿಕ್ಸ್‌ನಲ್ಲಿ ಈ ಆಟಗಳನ್ನ ಆಡುವ ಸ್ಪರ್ಧಿಗಳಿಗೂ ಅವಕಾಶ ನೀಡಲಾಗಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು(ಐಎಂಸಿ) ತಿಳಿಸಿದೆ.

2024ರಲ್ಲಿ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ ನಡೆಯಲಿದ್ದು, ಈ ಮೂಲಕ ಬ್ರೇಕ್‌ಡ್ಯಾನ್ಸ್, ಸ್ಕೇಟ್‌ ಬೋರ್ಡಿಂಗ್‌, ಸ್ಪೋರ್ಟ್‌ ಕ್ಲೈಬಿಂಗ್‌ ಮತ್ತು ಸರ್ಫಿಂಗ್‌ ಕೂಡ ಒಲಿಂಪಿಕ್ಸ್‌ ಕ್ರೀಡಾ ಕೂಟದ ಭಾಗವಾಗಲಿವೆ.

ಬ್ರೇಕ್‌ ಡ್ಯಾನ್ಸಿಂಗ್ ಅನ್ನು ಒಲಂಪಿಕ್ಸ್‌ನಲ್ಲಿ ಬ್ರೇಕಿಂಗ್‌ ಎಂದು ಕರೆಯಲಾಗುವುದು. 2018ರಲ್ಲಿ ಬ್ಯೂನಸ್ ಐರಿಸ್‌ನಲ್ಲಿ ನಡೆದ ಯುವ ಒಲಿಂಪಿಕ್ಸ್‌ನಲ್ಲಿ ಬ್ರೇಕ್‌ ಡ್ಯಾನ್ಸಿಂಗ್ ಪ್ರಯೋಗಗಳ ಬಳಿಕ ಪ್ಯಾರಿಸ್‌ ಆಯೋಜಕರು ಈ ಬಗ್ಗೆ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿದ್ದರು. 2019 ರಲ್ಲಿ ಅನುಮೋದನೆ ನೀಡಲಾಯಿತು.


ಇದನ್ನೂ ಓದಿ: ರೈತ ಪ್ರತಿಭಟನೆಯನ್ನು ಮೋದಿ ಸರ್ಕಾರ ಮಣಿಸಲಾಗದು: 05 ಕಾರಣಗಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights