ಭಾರತ್ ಬಂದ್‌: ರೈತರಿಗೆ‌ ನಟಿ ಪ್ರಿಯಾಂಕ ಚೋಪ್ರಾ ಮತ್ತು ಸೋನಮ್‌ ಕಪೂರ್‌ ಸಾಥ್‌

ಕೇಂದ್ರ ಸರ್ಕಾರ ಕೃಷಿ ನೀತಿಗಳ ವಿರುದ್ಧ ಪ್ರತಭಟನೆ ನಡೆಸುತ್ತಿರುವ ರೈತರು ಕರೆಕೊಟ್ಟಿರುವ ಇಂದಿನ ಭಾರತ್‌ ಬಂದ್‌ಗೆ ದೇಶಾದ್ಯಂತ ಬೆಂಬಲ ದೊರೆಯುತ್ತಿದೆ. ಹಲವು ಸಂಘ-ಸಂಘಟನೆಗಳು ರೈತರ ಕರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಮತ್ತು ಸೋನಮ್‌ ಕಪೂರ್‌ ಕೂಡ ರೈತ ಹೋರಾಟಕ್ಕೆ ಸಾಥ್‌ ನೀಡಿದ್ದಾರೆ.

ಟ್ವಿಟ್ಟರ್‌‌ನಲ್ಲಿ ಗಾಯಕ-ನಟ ದಿಲ್‌ಜಿತ್ ದೋಸಾಂಜ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ನಟಿ ಪ್ರಿಯಾಂಕ ಚೋಪ್ರಾ, “ನಮ್ಮ ರೈತರು ಭಾರತದ ಆಹಾರ ಸೈನಿಕರು. ಅವರ ಆತಂಕಗಳನ್ನು ನಿವಾರಿಸಬೇಕಾಗಿದೆ. ಅವರ ಆಶಯಗಳನ್ನು ಈಡೇರಿಸಬೇಕಾಗಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಜಾಪ್ರಭುತ್ವವಾಗಿ, ಈ ಬಿಕ್ಕಟ್ಟುಗಳು ಶೀಘ್ರದಲ್ಲೇ ಬಗೆಹರಿಯುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು” ಎಂದು ಬರೆದಿದ್ದಾರೆ.

ಬಾಲಿವುಡ್ ನಟಿ ಸೋನಮ್ ಕಪೂರ್, ಗಾಯಕ ದಿಲ್ಜಿತ್ ದೋಸಾಂಜ್, ಹರ್ಭಜನ್ ಮನ್, ಜಸ್ಬೀರ್ ಜಾಸ್ಸಿ, ರೀತೇಶ್ ದೇಶ್ಮುಖ್, ನಿರ್ದೇಶಕ ಹನ್ಸಾಲ್ ಮೆಹ್ತಾ ಹಾಗೂ ಇತರರು ಈಗಾಗಲೇ ರೈತರಿಗೆ ಬೆಂಬಲ ಘೋಷಿಸಿದ್ದಾರೆ.

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳ ವಿರುದ್ದ ರೈತರು ನಡೆಸುತ್ತಿರುವ ದೆಹಲಿ ಚಲೋ ಆಂದೋಲನಕ್ಕೆ ವಿಶ್ವದಾದ್ಯಂತ ಭಾರಿ ಜನಬೆಂಬಲ ವ್ಯಕ್ತವಾಗಿದೆ. ರೈತರೊಂದಿಗೆ ಕೇಂದ್ರ ಸರ್ಕಾರವು ಇದುವರೆಗೂ ಐದು ಸುತ್ತಿನ ಮಾತುಕತೆ ನಡೆಸಿದೆಯಾದರೂ ಎಲ್ಲವು ವಿಫಲವಾಗಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸದ ಕೇಂದ್ರದ ವಿರುದ್ದ ಇಂದು ದೇಶಾದ್ಯಂತ ಭಾರತ್‌ ಬಂದ್‌ ಮಾಡಲಾಗಿದೆ.


ಇದನ್ನೂ ಓದಿ: ಸಿನಿಮಾ ಸ್ಟಾರ್‌ಗಳಿಗೆ ಚುನಾವಣೆ ಮೇಲಷ್ಟೇ ಪ್ರೀತಿ; ರೈತರ ಮೇಲಿಲ್ಲ: ನಟ ಚೇತನ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights