MSP ಬಗ್ಗೆ ಲಿಖಿತ ಭರವಸೆ ನೀಡಿದ ಕೇಂದ್ರ ಸರ್ಕಾರ; ರೈತ ಹೋರಾಟದ 10 ಮುಖ್ಯಾಂಶಗಳು!

ಕೇಂದ್ರ ಗೃಹ ಸಚಿವ ಅಮಿತ್‌ ಷಾ ಮತ್ತು ರೈತರ ನಡುವೆ ನಡೆದ ನಿನ್ನೆಯ ಸಭೆ ವಿಫಲವಾಗಿದೆ. ಈ ಬಳಿಕ ಸರ್ಕಾರ ರೈತಿರಗೆ ಕೆಲವು ಪ್ರಸ್ತಾಪಗಳನ್ನು ಲಿಖಿತವಾಗಿ ನೀಡಿದ್ದು, ಅದರಲ್ಲಿ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (MSP) ಮುಂದುರೆಯುತ್ತದೆ. ಅದು ಕಸಿದುಕೊಳ್ಳುವುದಿಲ್ಲ ಎಂದು ಹೇಳಿದೆ. ಈ ಬಗ್ಗೆ ಚರ್ಚೆ ನಡೆಸಿರುವ ಹೋರಾಟ ನಿರತ ರೈತ ಸಂಘಟನೆಗಳು ಹೊಸ ನೀತಿಗಳನ್ನು ರದ್ದುಪಡಿಸದೇ, ಬೇರಾವುದೇ ಪ್ರಸ್ತಾಪಗಳಿಗೆ ಒಪ್ಪುವುದಿಲ್ಲ. ಹೊಸ ಕೃಷಿ ನೀತಿಗಳು ರದ್ದಾಗಲೇಬೇಕು ಎಂದು ಹೇಳಿದ್ದಾರೆ. ಇಂದು ನಡೆಯಬೇಕಿದ್ದ ಸರ್ಕಾರ-ರೈತರ ಸಭೆಯನ್ನು ನಿನ್ನೆ ರಾತ್ರಿ ರದ್ದುಮಾಡಲಾಗಿತ್ತು.

ರೈತರ ಪ್ರತಿಭಟನೆಯ ಟಾಪ್ 10 ಅಪ್‌ಡೇಟ್ಸ್‌ ಇಲ್ಲಿವೆ:

  1. ಹೊಸ ಕೃಷಿ ನೀತಿಗಳಿಗೆ ತಿದ್ದುಪಡಿ ಮಾಡಲು ಉದ್ದೇಶಿಸಿರುವ ಪ್ರಸ್ತಾವಗಳನ್ನು ಸರ್ಕಾರ ಲಿಖಿತವಾಗಿ ರೈತ ಮುಖಂಡರಿಗೆ ಕಳುಹಿಸಿದೆ. ಇದರಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕೊನೆಗೊಳ್ಳುವುದಿಲ್ಲ. ಅದು ಮುಂದುವರಿಯುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.
  2. ಕಳೆದ 14 ದಿನಗಳಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಸಿಂಘು ಗಡಿಯಲ್ಲಿ ರೈತರ ಸಭೆ ನಡೆದಿದೆ. “ನಾವು ನಮ್ಮ ಮುಂದಿನ ಕಾರ್ಯತಂತ್ರ ರೂಪಿಸುವ ಮತ್ತು ಕೇಂದ್ರದ ಪ್ರಸ್ತಾಪಗಳನ್ನು ಸಭೆಯಲ್ಲಿ ಚರ್ಚಿಸಿದ್ದೇವೆ. ಇದು ರೈತರ ಸ್ವಾಭಿಮಾನ ಮತ್ತು ಉಳಿವಿನ ಪ್ರಶ್ನೆಯಾಗಿದೆ. ನಾವು ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದಿರುವುದಿಲ್ಲ. ಸರ್ಕಾರ ಮೊಂಡುತನದಿಂದ ಕಾನೂನುಗಳನ್ನು ಹಿಂಪಡೆಯದಿರೇ, ನಾವೂ ಹಿಂದಿರುಗುವುದಿಲ್ಲ” ಎಂದು ಭಾರತೀಯ ಕಿಸಾನ್ ಒಕ್ಕೂಟದ ವಕ್ತಾರ ರಾಕೇಶ್ ಟಿಕೈಟ್ ಹೇಳಿದ್ದಾರೆ.
  3. ಸರ್ಕಾರದ ಪ್ರಸ್ತಾವನೆಯ ಪ್ರಕಾರ, ರೈತರು ತಮ್ಮ ವಿರುದ್ಧವಾಗಿದೆ ಎಂದು ಭಾವಿಸಿರುವ ವಿದ್ಯುತ್ (ತಿದ್ದುಪಡಿ) ಮಸೂದೆ 2020ಅನ್ನು ಜಾರಿಗೊಳಿಸುವುದಿಲ್ಲ. ವಿದ್ಯುತ್‌ ವಿತರಕರ ಮೇಲ್ವಿಚಾರಣೆಯನ್ನಷ್ಟೇ ಸರ್ಕಾರ ಉದ್ದೆಶಿಸಿದೆ ಎಂದು ಹೇಳಿದೆ.
  4. ದೆಹಲಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತರು ಧರಣಿ ಹೋಡಿರುವುದರಿಂದ ಗಡಿ ಕೇಂದ್ರಗಳಾದ ಟಿಕ್ರಿ, ರೋಡಾ ಮತ್ತು ಧನ್ಸಾ ಮೂರು ಮಾರ್ಗಗಳಲ್ಲಿ ಸಂಚಾರ ಬಂದ್‌ ಆಗಿದೆ.
  5. ಪ್ರತಿಭಟನೆ ಪ್ರಾರಂಭವಾದಾಗಿನಿಂದ ಕನಿಷ್ಠ ಐದು ಸಾವುಗಳು ವರದಿಯಾಗಿವೆ. ದೆಹಲಿ-ಹರಿಯಾಣ ಗಡಿ ಬಳಿ ಮಂಗಳವಾರ ಬೆಳಿಗ್ಗೆ 32 ವರ್ಷದ ರೈತರೊಬ್ಬರು ಮೃತಪಟ್ಟಿದ್ದಾರೆ. ಹರಿಯಾಣದ ಸೋನಿಪತ್‌ನ ಅಜಯ್ ಮೋರ್ ಅವರು ಸಿಂಗು ಗಡಿಯಲ್ಲಿ 10 ದಿನಗಳ ಕಾಲ ಪ್ರತಿಭಟನೆ ನಡೆಸುತ್ತಿದ್ದರು. ಹೈಪೋಥೆರಪಿಯಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
  6. 24 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇಂದು ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸಿಪಿಎಂನ ಸೀತಾರಾಮ್ ಯೆಚೂರಿ, ಸಿಪಿಐನ ಡಿ ರಾಜಾ ಮತ್ತು ಟಿಆರ್ ಬಾಲು ಅವರೊಂದಿಗೆ ನಿಯೋಗವು ರಾಷ್ಟ್ರಪತಿ ಭೇಟಿಗೆ ಹೋಗಲಿದೆ.
  7. ಸಂಸತ್ತಿನಲ್ಲಿ ಕೃಷಿ ಕಾನೂನುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷಗಳು ಈ ಹಿಂದೆ ಮಸೂದೆಗಳಿಗೆ ಸಹಿ ಹಾಕದಂತೆ ರಾಷ್ಟ್ರಪತಿಗೆ ಮನವಿ ಮಾಡಿದ್ದವು, ಕೃಷಿ ನೀತಿಗಳನ್ನು ರಾಜ್ಯಸಭೆಯಲ್ಲಿ ಪ್ರಜಾಪ್ರಭುತ್ವ ವಿರೋಧಿ ನಡೆಯಲ್ಲಿ ಅಂಗೀಕರಿಸಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಆದರೆ, ರಾಷ್ಟ್ರಪತಿಗಳು ಈ ಮೂರು ಮಸೂದೆಗಳಿಗೆ ಅನುಮೋದನೆ ನೀಡಿದ್ದರು.
  8. ಅಮಿತ್‌ ಶಾ ಮತ್ತು ರೈತ ಸಂಘಗಳ 13 ನಾಯಕರ ನಡುವಿನ ಕಳೆದ ರಾತ್ರಿ ನಡೆದ ಸಭೆಯಲ್ಲಿ, ಸರ್ಕಾರದ ಮುಂದೆ ಹೌದು ಅಥವಾ ಇಲ್ಲ ಎಂಬ ಆತ್ಕೆಗಳನ್ನು ರೈತ ಮುಖಂಡರು ಇಟ್ಟಿದ್ದರು. ತಿದ್ದುಪಡಿ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಲೇ ಇದ್ದು, ನಿನ್ನೆಯ ಸಭೆಯೂ ಮುರಿದುಬಿದ್ದಿದೆ.
  9. “ಅಮಿತ್ ಶಾ ಅವರು ನಮ್ಮ ಸಮಸ್ಯೆಗಳು ಏನು ಎಂದು ಕೇಳದರು. ನಾವು ಮಾತುಕತೆಯ ಹಂತ ಮುಗಿದಿದೆ, ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಕೇಳಿದ್ದೇವೆ. ನಾವು ಹಿಂದೆ ಪಡೆಯುವುದಿಲ್ಲ – ತಿದ್ದುಪಡಿ ಮಾಡಬಹುದು ಎಂದು ಅವರು ಷರತ್ತು ಹಾಗಿದ್ದಾರೆ. ಆದರೆ, ನಾವು ತಿದ್ದುಪಡಿಗಳನ್ನು ನಿರಾಕರಿಸಿದ್ದೇವೆ ಎಂದು ರೈತ ಮುಖಂಡ ದರ್ಶನ್‌ಪಾಲ್ ತಿಳಿಸಿದ್ದಾರೆ.
  10. ಕೇಂದ್ರ ಸರ್ಕಾರದ ಕೃಷಿ ನೀತಿಗಳು ಕನಿಷ್ಟ ಬೆಂಬಲ ಬೆಲೆ ನೀಡುವ ಕಾನೂನುಗಳನ್ನು ಕಸಿದುಕೊಳ್ಳುತ್ತವೆ ಮತ್ತು ಕಾರ್ಪೊರೇಟ್‌ಗಳ ಕುಣಿಕೆಗೆ ರೈತರನ್ನು ಸಿಕ್ಕಿಸುತ್ತವೆ ಎಂದು ಪ್ರತಿಭಟನಿಸುತ್ತಿರುವ ರೈತರು ಸರ್ಕಾರ ಮತ್ತು ಪೊಲೀಸರು ಪ್ರಯೋಗಿಸ ನೀರಿನ ಫಿರಂಗಿಗಳು, ಅಶ್ರುವಾಯು ಮತ್ತು ಪೊಲೀಸ್ ಬ್ಯಾರಿಕೇಡ್‌ಗಳನ್ನು ಪ್ರತಿಭಟನೆ ನಡೆಸುತ್ತಿದ್ದಾರೆ.

Read Also: ಕರ್ನಾಟಕದ ರೈತ ಹೋರಾಟಗಾರರಿಂದ ಪ್ರಧಾನಿಗೆ ಪತ್ರ: ರೈತರು ಪತ್ರದಲ್ಲಿ ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights