ಬಂಗಾಳ ದಾಳಿ : ನಡ್ಡಾ, ವಿಜಯವರ್ಗಿಯಾ ಜೊತೆ ಪ್ರಧಾನಿ ಮಾತು : ತನಿಖೆಗೆ ಆದೇಶ!

ಗುರುವಾರ ಪಕ್ಷದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಬಂಗಾಳದಲ್ಲಿ ಉಭಯ ನಾಯಕರ ಮೇಲೆ ಹಲ್ಲೆಯ ಬಗ್ಗೆ ಜೆ.ಪಿ.ನಡ್ಡಾ ಮತ್ತು ಕೈಲಾಶ್ ವಿಜಯವರ್ಗಿಯಾ ಅವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.

ಜೆ.ಪಿ.ನಡ್ಡಾ ಮತ್ತು ವಿಜಯವರ್ಗಿಯರ ಮೇಲೆ ಗುರುವಾರ ಬಂಗಾಳದಲ್ಲಿ ದಾಳಿ ಮಾಡಲಾಯಿತು.  ತೃಣಮೂಲ ಕಾಂಗ್ರೆಸ್ ಬೆಂಬಲಿಗರು ತಮ್ಮ ವಾಹನಗಳ ಮೇಲೆ ಕಲ್ಲು ಎಸೆದರು ಎಂದು ಆರೋಪಿಸಲಾಗಿದೆ. ಮಾತ್ರವಲ್ಲದೇ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರು ಜೆಪಿ ನಡ್ಡಾ ಅವರ ಮೇಲೆ ಆದ ದಾಳಿ ವಿಚಾರವಾಗಿ ಬಂಗಾಳದಲ್ಲಿ ಭದ್ರತೆ ಅಸಮರ್ಪಕವಾಗಿದೆ ಎಂದು ಕೇಂದ್ರಕ್ಕೆ ವರದಿ ಕಳುಹಿಸಿದ್ದಾರೆ.

ಘಟನೆಯ ಬಗ್ಗೆ ಸ್ಪಷ್ಟನೆ ಪಡೆಯಲು ಗೃಹ ಸಚಿವಾಲಯ ಡಿಸೆಂಬರ್ 14 ರಂದು ಬಂಗಾಳ ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿಯನ್ನು ಕರೆದಿದೆ. ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಮತ್ತು ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ವೀರೇಂದ್ರ ಅವರನ್ನು ಗೃಹ ಸಚಿವಾಲಯ ಕರೆದಿದೆ.

ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಯನ್ನು ಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆ, ರಾಜಕೀಯ ಹಿಂಸಾಚಾರ ಮತ್ತು ಇತರ ಅಪರಾಧಗಳನ್ನು ತಡೆಗಟ್ಟಲು ಕೈಗೊಂಡ ಕ್ರಮಗಳನ್ನು ವಿವರಿಸಲು ಕೇಳಲಾಗುವುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights