ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ : ಕೊನೆಗೂ ನಟಿ ಸಂಜನಾಗೆ ಜಾಮೀನು..!

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಆರೋಪಿದಡಿಯಲ್ಲಿ ಜೈಲುವಾಸ ಅನುಭವಿಸುತ್ತಿದ್ದ ನಟಿ ಸಂಜನಾಗೇ ಜಾಮೀನು ಸಿಕ್ಕಿದೆ. 3 ಲಕ್ಷ ವೈಯಕ್ತಿಕ ಬಾಂಡ್ ಜೊತೆಗೆ ತಿಂಗಳಲ್ಲಿ ಎರಡು ಬಾರಿ ತನಿಖಾಧಿಕಾರಿ ಎದುರು ಹಾಜರಾಗಲು ಷರತ್ತುಬದ್ಧ ಜಾಮೀನು ನೀಡಲಾಗಿದೆ.

ಸರಿಸುಮಾರು ಎರಡುವರೆ ತಿಂಗಳು ಜೈಲಿನಲ್ಲಿ ಕಾಲಕಳೆದ ಸಂಜನಾ ಕೊನೆಗೂ ಜಾಮೀನು ಸಿಕ್ಕಿದೆ. ಅದರ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ, ಸಂಜನಾ ಅವರ ಆರೋಗ್ಯ ತಪಾಸಣೆಗೆ ಅನುಮತಿ ನೀಡಿ, ಅದರ ವರದಿಯನ್ನು ಡಿ.10ರ ಒಳಗೆ ಸಲ್ಲಿಸುವಂತೆ ಸೂಚನೆ ನೀಡಿತ್ತು. ಅದರಂತೆ ಸಂಜನಾ ಅವರನ್ನು ನಗರದ ವಾನಿ ವಿಲಾಸ್​ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆ ಮಾಡಿಸಲಾಗಿತ್ತು.

ಸಂಜನಾ ಗಲ್ರಾನಿ ಅಸ್ತಮಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರಂತೆ. ಚಳಿಗಾಲದಲ್ಲಿ ಇದು ಉಲ್ಬಣವಾಗುವ ಸಾಧ್ಯತೆ ಹೆಚ್ಚಿದೆ. ಹಿಂದೊಮ್ಮೆ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದಾಗಿ ಸಂಜನಾ ಅರ್ಜಿಯಲ್ಲಿ ನಮೂದಿಸಿದ್ದರು.

ಸೆಪ್ಟೆಂಬರ್ 8 ರಂದು ಸಂಜನಾ ಗಲ್ರಾನಿ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಸಂಜನಾ ಗಲ್ರಾನಿಯನ್ನು ವಿಚಾರಣೆಗೆ ಕರೆದು, ನಂತರ ಬಂಧಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights