ವಾಟ್ಸ್‌ಆ್ಯಪ್ ವಿಡಿಯೋ ಕರೆಯಲ್ಲಿ ಅಸಯ್ಯವಾಗಿ ವರ್ತಿಸಿ ಚಲನಚಿತ್ರ ನಟಿಗೆ ಲೈಂಗಿಕ ಕಿರುಕುಳ..!
ಮುಂಬೈನ ಚಲನಚಿತ್ರ ನಟಿಯೊಬ್ಬರು ಅಪರಿಚಿತ ವ್ಯಕ್ತಿಯ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿ ದೂರು ನೀಡಿದ್ದಾರೆ.
ಹೌದು… 32 ವರ್ಷದ ಚಲನಚಿತ್ರ ನಟಿ ಆತ್ಮರಕ್ಷಣಾ ತರಬೇತುದಾರರೂ ಆಗಿದ್ದು ಇವರಿಗೆ ವಾಟ್ಸ್‌ಆ್ಯಪ್ ಮೂಲಕ ಕರೆ ಮಾಡಿದ ವ್ಯಕ್ತಿ ಕ್ಯಾಮೆರಾದಲ್ಲಿ ಹಸ್ತಮೈಥುನ ಮಾಡಿಕೊಂಡಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ. ಆಕೆ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶುಕ್ರವಾರ ಯುಕೆ ಕಂಟ್ರಿ ಕೋಡ್ ಹೊಂದಿರುವ ಸಂಖ್ಯೆಯಿಂದ ವೀಡಿಯೊ ಕರೆಯನ್ನು ಎರಡು ಬಾರಿ ನಿರಾಕರಿಸಿದ್ದೇನೆ ಎಂದು ದೂರಿನಲ್ಲಿ ಆಕೆ ತಿಳಿಸಿದ್ದಾಳೆ. ಮೂರನೇ ಬಾರಿಗೆ ನಟಿ ಆಕಸ್ಮಿಕವಾಗಿ ಕರೆಗೆ ಉತ್ತರಿಸಿದಾಗ ಆ ವ್ಯಕ್ತಿಯು ವೀಡಿಯೊ ಕರೆಯಲ್ಲಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಅವಳು ಬೇಗನೆ ತನ್ನ ಫೋನ್‌ನ ಕ್ಯಾಮೆರಾವನ್ನು ಆನ್ ಮಾಡಿ ಕರೆ ಮಾಡಿದವರ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡಿದ್ದಾಳೆ.
ಬಳಿಕವೂ ಆರೋಪಿ ತನ್ನ ಅಸಯ್ಯ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದನು ಎಂದು ನಟಿ ದೂರಿದ್ದಾಳೆ. ನಟಿ ಟ್ವಿಟರ್ ನಲ್ಲಿ ಆರೋಪಿಯ ಸಂದೇಶಗಳು ಮತ್ತು ವಿಡಿಯೋ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಮಾತ್ರವಲ್ಲದೇ ತಮ್ಮ ಟ್ವೀಟ್‌ರ್ನಲ್ಲಿ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿದಾಗ ತಾನು ತೊಂದರೆಯಲ್ಲಿದ್ದೇನೆಂದು ಅರಿತುಕೊಂಡ ಆರೋಪಿ ಅವಳ ಬಳಿ ಕ್ಷಮೆಯಾಚಿಸಿ ತಾನು 20 ವರ್ಷದ ವಿದ್ಯಾರ್ಥಿ ಎಂದು ಹೇಳಿಕೊಂಡಿದ್ದಾನೆ.
ಸಂದೇಶಗಳು ಮತ್ತು ವಿಡಿಯೋ ಕರೆ ತನ್ನ ಸ್ನೇಹಿತನಿಂದ ಬಂದಿವೆ ಎಂದು ಆರೋಪಿ ಹೇಳಿಕೊಂಡಿದ್ದಾರೆಂದು ನಟಿ ಹೇಳಿದ್ದಾರೆ.