ಕಠಿಣ ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ಸಿಂಥಸೈಜರ್ ನುಡಿಸಿದ 9 ವರ್ಷದ ಬಾಲಕಿ…!

ಸುಲಭವಲ್ಲದ ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ 9 ವರ್ಷದ ಬಾಲಕಿಯೋರ್ವಳು ಸಿಂಥಸೈಜರ್ ನುಡಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

ಹೌದು… ಸೌಮ್ಯ ಎಂಬ ಹೆಸರಿನ ಬಾಲಕಿಗೆ ತಲೆಯಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿ ಅದು ನರಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ದೊಡ್ಡ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗಿತ್ತು. ಆದರೆ ಈ ಶಸ್ತ್ರಚಿಕಿತ್ಸೆ ಅಷ್ಟ ಸುಲಭವಾಗಿರಲಿಲ್ಲ. ಆದ್ದರಿಂದ, ಅವಳ ಶಸ್ತ್ರಚಿಕಿತ್ಸೆಯನ್ನು ‘ಅವೇಕ್ ಕ್ರಾನಿಯೊಟೊಮಿ’ ವಿಧಾನದಲ್ಲಿ ಮಾಡಲಾಗುವುದು ಎಂದು ವೈದ್ಯರು ನಿರ್ಧರಿಸಿದರು.

ಗ್ವಾಲಿಯರ್‌ನ ಬಿಐಎಂಆರ್ ಆಸ್ಪತ್ರೆಯಲ್ಲಿ ಸೌಮ್ಯಾ ಎನ್ನುವ ಬಾಲಕಿಗೆ ಮೆದುಳು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವಳು ಎಚ್ಚರವಾಗಿದ್ದಳು. ವೈದ್ಯರು ಗೆಡ್ಡೆಯನ್ನು ತೆಗೆಯುವ ವೇಳೆ ಸೌಮ್ಯಾ ಎಚ್ಚರವಾಗಿದ್ದು ಸಿಂಥಸೈಜರ್ ನುಡಿಸುತ್ತದ್ದರು.

ಸೌಮ್ಯಕ್ಕೆ ಅನೆಸ್ತೇಸಿಯಾ ನೀಡಲಾಗಿತ್ತಾ?

ಸೌಮ್ಯಾ ಸಿಂಥಸೈಜರ್ ನುಡಿಸುವುದನ್ನು ಆನಂದಿಸುತ್ತಾಳೆ. ಆದ್ದರಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಂಗೀತ ಕೀಬೋರ್ಡ್ ನುಡಿಸಲು ವೈದ್ಯರು ಕೇಳಿಕೊಂಡರು. ಶಸ್ತ್ರಚಿಕಿತ್ಸೆ ನಡೆಸಿದ ಆಕೆಯ ತಲೆಯ ಭಾಗದಲ್ಲಿ ಮಾತ್ರ ಸ್ಥಳೀಯ ಅರಿವಳಿಕೆ ನೀಡಲಾಗಿತ್ತು.

ಸೌಮ್ಯಾ ಚೇತರಿಸಿಕೊಂಡಿದ್ದೀರಾ?

ಶಸ್ತ್ರಚಿಕಿತ್ಸೆ ಸುಮಾರು ಎರಡು ಗಂಟೆಗಳ ಕಾಲ ನಡೆಸಿ ಗೆಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ. ವೈದ್ಯರು ಸೌಮ್ಯ ಅವರನ್ನು ಸ್ವಲ್ಪ ಸಮಯದವರೆಗೆ ಗಮನದಲ್ಲಿರಿಸಿ ಶನಿವಾರ ಸಂಜೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights