ಭಾರತದ ಶೇ.60 ರಷ್ಟು ಮಹಿಳೆಯರು ಇಂಟರ್‌ನೆಟ್‌ ಬಳಸುತ್ತಿಲ್ಲ: ಸಮೀಕ್ಷೆ

ಭಾರತದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶೇ. 60ರಷ್ಟು ಮಹಿಳೆಯರು ಇಂದಿನವರೆಗೂ ಇಂಟರ್‌ನೆಟ್‌ ಬಳಸಿಲ್ಲ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹೇಳಿದೆ.

ಆಂಧ್ರ ಪ್ರದೇಶ (ಶೇ 21), ಅಸ್ಸಾಂ (ಶೇ28.2), ಬಿಹಾರ (ಶೇ 20.6), ಗುಜರಾತ್‌ (ಶೇ 30.8), ಕರ್ನಾಟಕ (ಶೇ 35), ಮಹಾರಾಷ್ಟ್ರ(ಶೇ 38 ), ಮೇಘಾಲಯ (ಶೇ 34.7), ತೆಲಂಗಾಣ (ಶೇ 26.5), ತ್ರಿ‍ಪುರ ( ಶೇ 22.9), ಪಶ್ಚಿಮ ಬಂಗಾಳ (ಶೇ 25.5), ದಾದ್ರ ಮತ್ತು ನಗರ್‌ಹವೇಲಿ, ದಿಯು ಮತ್ತು ದಮನ್‌ (ಶೇ 36.7), ಅಂಡಮಾನ್‌ ಮತ್ತು ನಿಕೋಬಾರ್‌ (ಶೇ 34.8) ರಷ್ಟು ಮಹಿಳೆಯರು ಇಂಟರ್‌ನೆಂಟ್‌ ಬಳಸುತ್ತಿದ್ದು, ದೇಶದ ಒಟ್ಟು ಮಹಿಳೆಯರಲ್ಲಿ ಶೇಕಡಾ 40ಕ್ಕಿಂತ ಕಡಿಮೆ ಮಹಿಳೆಯರು ಇಂಟರ್‌ನೆಟ್‌ ಬಳಸುತ್ತಿದ್ದಾರೆ ಎಂದು ಸಮೀಕ್ಷೆತಿಳಿಸಿದೆ.

ಮಹಿಳೆಯರಿಗೆ ಹೋಲಿಸಿದರೆ ಪುರುಷರು ಇಂಟರ್‌ನೆಟ್‌ ಅನ್ನು ಹೆಚ್ಚಾಗಿ ಬಳಸುತ್ತಾರೆ. ಆಂಧ್ರಪ್ರದೇಶ (ಶೇ 48.8) ಅಸ್ಸಾಂ (ಶೇ 42.3) ಬಿಹಾರ(ಶೇ 43.6) ಮೇಘಾಲಯ (ಶೇ 42.1) ತ್ರಿಪುರ (ಶೇ 45.7) ಪಶ್ಚಿಮ ಬಂಗಾಳ (ಶೇ 46.7) ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ (ಶೇ 46.5) ರಷ್ಟು ಪುರುಷರು ಇಂಟರ್‌ನೆಟ್‌ ಬಳಸುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

ದೇಶದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗಿತ್ತು.


ಇದನ್ನೂ ಓದಿ: ನಿಲ್ಲದ ಹೆಣ್ಣು ಭ್ರೂಣ ಹತ್ಯೆ: ಬಲವಂತದ ಗರ್ಭಪಾತದಿಂದ ಮಹಿಳೆ ಸಾವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights