ಕೇರಳ ಅಸೆಂಬ್ಲಿ ಚುನಾವಣೆ; ಎಡರಂಗ ಮತ್ತು ಯುಡಿಎಫ್ ಮಧ್ಯೆ ಫೈಟ್‌; BJP ಕತೆಯೇನು ಗೊತ್ತೇ?

ಕೇರಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಎಡರಂಗ ಎಲ್‌ಡಿಎಫ್‌ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಎರಡನೇ ಸ್ಥಾನ ಪಡೆದುಕೊಂಡಿದೆ. ಈ ಚುನಾವಣೆಯು 2021ರ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲಿವೆ ಎಂದು ಹೇಳಲಾಗಿದೆ. ಸ್ಥಳೀಯ ಸಂಸ್ಥೆಗಳು ಚುನಾವಣೆಗಳು ಅಸೆಂಬ್ಲಿ ಚುನಾವಣೆಗೆ ಮುಂಚಿತಾಗಿ ನಡೆಯುವ ಸೆಮಿಫೈನಲ್‌ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ಕೇರಳ ಚುನಾವಣೆಯು ಎಲ್‌ಡಿಎಫ್‌ ಮತ್ತು ಯುಡಿಎಫ್‌ಗಳ ನಡುವೆ ಭಾರೀ ಸ್ಪರ್ಧೆಯನ್ನು ಏರ್ಪಡಿಸಲಿದ್ದು, ಬಿಜೆಪಿ ಎಕ್ಸ್ಟ್ರಾ ಪ್ಲಯರ್‌ನಂತೆ ಕಣಕ್ಕಿಯಲಿದೆ ಎಂದು ರಾಜಕೀಯ ತಜ್ಷರು ಅಭಿಪ್ರಾಯ ಪಟ್ಟಿದ್ದಾರೆ.

ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟವು ಒಟ್ಟು 941ರಲ್ಲಿ 514 ಗ್ರಾಮ ಪಂಚಾಯಿತಿಗಳನ್ನು, ಯುಡಿಎಫ್‌ 375 ಗ್ರಾಮ ಪಂಚಾಯಿತಿಗಳನ್ನು ಗೆದ್ದಿದ್ದು, ಇದು ಭಾರೀ ಸ್ಪರ್ಧೆಯಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಕೇವಲ 23 ಗ್ರಾಂ ಪಂಚಾಯಿತಿಗಳನ್ನು ಮಾತ್ರ ಗೆಲ್ಲುವಲ್ಲಿ ಸಫಲವಾಗಿದೆ.

ವಿರೋಧ ಪಕ್ಷಗಳ ಆರೋಪಗಳ ಮಧ್ಯೆಯೂ ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್‌ ಸರ್ಕಾರ ಜನಮನ್ನಣೆ ಪಡೆಯಲು ಯಶಸ್ವಿಯಾಗಿದೆ.

ಎಲ್ಲರಿಗೂ ಸುರಕ್ಷಿತ ವಸತಿ ಒದಗಿಸುವ ಗುರಿಯನ್ನು ಹೊಂದಿರುವ ವಸತಿ ಯೋಜನೆ, ಲೈಫ್ ಮಿಷನ್ ಸೇರಿದಂತೆ ರಾಜ್ಯ ಸರ್ಕಾರದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಹಳಿ ತಪ್ಪಿಸಲು ಯುಡಿಎಫ್ ಮತ್ತು ಎನ್‌ಡಿಎ ಪ್ರಯತ್ನಿಸಿದ್ದವು. ಆದಾಗ್ಯೂ, ಎಲ್‌ಡಿಎಫ್‌ ಅಭಿವೃದ್ಧಿ ಚಟುವಟಿಕೆಗಳತ್ತ ಗಮನ ಹರಿಸಿದ್ದು, ಅದು ಯಶಸ್ವಿ ಕಂಡಿದೆ.

ಬಿಜೆಪಿ ನೀಡಬಲ್ಲುದೇ ಪೈಪೋಟಿ:

ಮೇಲ್ನೋಟಕ್ಕೆ ಎಲ್‌ಡಿಎಫ್‌ ಮತ್ತು ಬಿಜೆಪಿ ನಡುವೆ ಹೋರಾಟ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದರೂ, ಕೇರಳದಲ್ಲಿ ಬಿಜೆಪಿ ಅಂತಹ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಸ್ಥಳೀಯ ಚುನಾವಣೆಯಲ್ಲಿ ಎಲ್‌ಡಿಎಫ್‌ನಿಂದ ಅಧಿಕಾರ ಕಿತ್ತುಕೊಳ್ಳಲು ಮುಂದಾಗಿದ್ದ ಬಿಜೆಪಿ ಉನ್ನತ ನಾಯಕರನ್ನೇ ಕಣಕ್ಕಿಳಿಸಿತ್ತು. ಅದರೂ, 2015ಕ್ಕಿಂತ ಸ್ವಲ್ಪ ಪ್ರಾಮಾಣದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದರೂ, ಪೈಪೋಟಿ ನೀಡಲು ಸಾಧ್ಯವಾಗಿಲ್ಲ. ಕೇವಲ 23 ಗ್ರಾಮ ಪಂಚಾಯತಿಗಳನ್ನು ಗೆದ್ದರೂ, ಯಾವುದೇ ಬ್ಲಾಕ್ ಪಂಚಾಯತ್, ಜಿಲ್ಲಾ ಪಂಚಾಯತಿಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

Read Also: ಉತ್ತಮ ಆಡಳಿತದಲ್ಲಿ ನಂ.1 ರಾಜ್ಯ ಕೇರಳ: ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶ!

ಕೇವಲ ಒಂದು ಪುರಸಭೆ (ಪಾಲಕ್ಕಾಡ್)ಯನ್ನು ಗೆದ್ದಿರುವ ಎನ್‌ಡಿಎ, ಪಂಡಲಂನಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ. ಇನ್ನೆಲ್ಲಿಯೂ ತೀವ್ರ ಪೈಪೋಟಿಯನ್ನು ನೀಡಿಲ್ಲ. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿರೋದ್ಧ ಜನರನ್ನು ಸಂಘಟಿಸುತ್ತಿದ್ದ ಬಿಜೆಪಿ/ಆರ್‌ಎಸ್‌ಎಸ್‌ ಸಂಘಟನೆಗಳು 2018ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಂತರ ಪಥನಮತ್ತಟ್ಟ ಜಿಲ್ಲೆಯ ಪಂಡಲಂನಲ್ಲಿಯೂ ತಮ್ಮ ನೆಲೆಯನ್ನು ಕಳೆದುಕೊಂಡಿದೆ.

ಎಲ್‌ಡಿಎಫ್‌ನಿಂದ ಅಧಿಕಾರ ಕಿತ್ತುಕೊಳ್ಳಲು ಬಿಜೆಪಿ ತನ್ನ ರಾಜ್ಯ ನಾಯಕರನ್ನೇ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿದ್ದ ತಿರುವನಂತಪುರಂ ಕಾರ್ಪೊರೇಶನ್‌ನಲ್ಲಿ, ಈ ಹಿಂದೆ ಪಡೆದಿದ್ದಷ್ಟೂ ಸ್ಥಾನಗಳನ್ನೂ ಕೂಡ ಉಳಿಸಿಕೊಳ್ಳಲಷ್ಟೇ ಸೀಮಿತವಾಗಿದೆ. ತಿರುವನಂತಪುರಂ ಪಾಲಿಕೆಯ 100 ಸ್ಥಾನಗಳಲ್ಲಿ ಎಲ್‌ಡಿಎಫ್‌ 51 ಸ್ಥಾನಗಳನ್ನು ಪಡೆದರೆ, ಎನ್‌ಡಿಎ 34, ಯುಡಿಎಫ್ 10 ಮತ್ತು ಇತರರು 5 ಸ್ಥಾನಗಳನ್ನು ಗೆದ್ದಿದ್ದಾರೆ. 2015 ರಲ್ಲಿ ಎಲ್‌ಡಿಎಫ್ 42 ವಾರ್ಡ್‌ಗಳನ್ನು ಗೆದ್ದಿತ್ತು ಮತ್ತು ಆಗ ಬಿಜೆಪಿ ಮೈತ್ರಿಕೂಟವು ಅದೇ 34 ಸ್ಥಾನಗಳನ್ನು ಹೊಂದಿತ್ತು.

ಆದಾಗ್ಯೂ, ಫಲಿತಾಂಶಗಳು ಬಿಜೆಪಿ ಮತ್ತು ಯುಡಿಎಫ್ ನಡುವಿನ ಹೋರಾಟವನ್ನು ಪ್ರತಿಬಿಂಬಿಸುತ್ತವೆ, ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಮತ್ತು ಯುಡಿಎಫ್‌ ಎರಡೂ ಮೈತ್ರಿಕೂಟಗಳು ಎಲ್‌ಡಿಎಫ್‌ ವಿರುದ್ಧ ಪ್ರಚಾರ ಮಾಡಿದರೂ, ಅವುಗಳು ಎಲ್‌ಡಿಎಫ್‌ನ ಸ್ಥಾನಗಳನ್ನ ಕಸಿದುಕೊಳ್ಳಲು ಅಂತಹ ಸಫಲತೆ ಕಂಡಿಲ್ಲ. ಬದಲಾಗಿದೆ, ಈ ಎರಡು ಮೈತ್ರಿಕೂಟಗಳ ಸ್ಥಾನಗಳೇ ಚದುರಿವೆ.


Read Also: ಕೇರಳ ಚುನಾವಣೆ: LDF & UDFಗೆ ಭರ್ಜರಿ ಗೆಲುವು; ಬಿಜೆಪಿಗೆ ಮುಖಭಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights