ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಕರಣ್ ಜೋಹರ್‌ಗೆ ಎನ್‌ಸಿಬಿ ನೋಟಿಸ್…!

ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಗುರುವಾರ ನಿರ್ದೇಶಕ-ನಿರ್ಮಾಪಕ ಕರಣ್ ಜೋಹರ್‌ಗೆ ಸಮನ್ಸ್ ಜಾರಿಗೊಳಿಸಿದೆ.

ಹಿಂದಿ ಚಲನಚಿತ್ರೋದ್ಯಮದಲ್ಲಿ ಡ್ರಗ್ಸ್ ಹರಡಿದವರನ್ನು ಎನ್‌ಸಿಬಿ ಹುಡುಕುತ್ತಿದೆ. ಈ ಪ್ರಕರಣದಲ್ಲಿ ನಿರ್ದೇಶಕ-ನಿರ್ಮಾಪಕ ಕರಣ್ ಜೋಹರ್ ಹೆಸರು ಕೂಡ ತಳುಕು ಹಾಕಿಕೊಂಡಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದ್ದು ಇದಕ್ಕಿನ್ನು ದಿನಾಂಕ ನಿಗಧಿಯಾಗಿಲ್ಲ. ಇದಲ್ಲದೆ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಇತರ ಮಾಹಿತಿಯನ್ನು ತನಿಖಾ ಸಂಸ್ಥೆ ಕೇಳಿದೆ.

ಈ ಕ್ರಮ ಕಳೆದ ಎರಡು ತಿಂಗಳುಗಳಿಂದ ಎನ್‌ಸಿಬಿ ತೆರೆದಿಡಲು ಪ್ರಯತ್ನಿಸುತ್ತಿರುವ ಬಾಲಿವುಡ್-ಡ್ರಗ್ಸ್ ಮಾಫಿಯಾ ಲಿಂಕ್ಬಗ್ಗೆ ನಡೆಯುತ್ತಿರುವ ತನಿಖೆಯ ಭಾಗವಾಗಿದೆ. ಈ ವರ್ಷದ ಜೂನ್‌ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ದುರಂತ ಸಾವಿನ ನಂತರ ಬಾಲಿವುಡ್ ನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಏತನ್ಮಧ್ಯೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬುಧವಾರ ನಟ ಅರ್ಜುನ್ ರಾಂಪಾಲ್ ಅವರನ್ನು ವಿಚಾರಣೆಗೆ ಆಹ್ವಾನಿಸಿತ್ತು. ಆದರೆ ನಟ ತಮಗೆ ಒಂದು ವಾರದ ಸಮಯವನ್ನು ನೀಡುವಂತೆ ಕೋರಿದ್ದಾರೆ ಎಂದು ಐಎಎನ್ಎಸ್ ವರದಿ ಮಾಡಿದೆ. ವೈಯುಕ್ತಿಕ ಕಾರಣದಿಂದಾಗಿ ವಾರದ ಕಾಲ ಸಮಯ ಕೇಳಿದ್ದಾರೆ ಎನ್ನಲಾಗಿದೆ.

ಜೂನ್‌ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ದುರಂತ ಸಾವಿನ ನಂತರ ಬಾಲಿವುಡ್-ಡ್ರಗ್ಸ್ ಮಾಫಿಯಾ ತನಿಖೆ ಚುರುಕಾಗಿ ನಡೆಯುತ್ತಿದೆ. ಈ ಬಗ್ಗೆ ನಟ ಅರ್ಜುನ್ ರಾಂಪಾಲ್ ನೋಟೀಸ್ ಕೊಡಲಾಗಿದೆ. ಇದಕ್ಕೂ ಮೊದಲು ಹಾಸ್ಯನಟಿ ಭಾರ್ತಿ ಸಿಂಗ್ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ಅವರ ಪ್ರೊಡಕ್ಷನ್ ಹೌಸ್ ಮತ್ತು ಅವರ ನಿವಾಸದ ಮೇಲೆ ಎನ್‌ಸಿಬಿ ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡ ನಂತರ ಬಂಧಿಸಲಾಗಿತ್ತು. ನಂತರ, ಇಬ್ಬರು ಜಾಮೀನಿನ ಮೇಲೆ ಹೊರಬಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights