ಪೊಂಗಲ್ ಗಿಫ್ಟ್ ಹ್ಯಾಂಪರ್‌ಗಳಿಗೆ 5600 ಕೋಟಿ ರೂ. ಮಂಜೂರು ಮಾಡಿದ ತಮಿಳುನಾಡು ಸರ್ಕಾರ!

ರಾಜ್ಯದ ಎಲ್ಲಾ ಅಕ್ಕಿ ಪಡಿತರ ಚೀಟಿದಾರರಿಗೆ ಪೊಂಗಲ್ ಉಡುಗೊರೆ ವಿತರಿಸಲು ತಮಿಳುನಾಡು ರಾಜ್ಯ ಸರ್ಕಾರ ಸೋಮವಾರ 5,604.84 ಕೋಟಿ ರೂ.ಗಳನ್ನು ಮಂಜೂರು ಮಾಡುವ ಸರ್ಕಾರಿ ಆದೇಶವನ್ನು ಹೊರಡಿಸಿದೆ. ಪೊಂಗಲ್ ಗಿಫ್ಟ್ ಹ್ಯಾಂಪರ್‌ನಲ್ಲಿ 2,500 ರೂ. ನಗದು, ಒಂದು ಕಿಲೋಗ್ರಾಂ ಅಕ್ಕಿ ಮತ್ತು ಸಕ್ಕರೆ, ಒಂದು ಪೂರ್ಣ ಕಬ್ಬು (ಅಂದಾಜು 5 ಅಡಿ), 20 ಗ್ರಾಂ ಗೋಡಂಬಿ, 20 ಗ್ರಾಂ ಸಂಗ್ರಹ ಮತ್ತು 5 ಗ್ರಾಂ ಏಲಕ್ಕಿ ಹೊಂದಿರುತ್ತದೆ.

ಎಲ್ಲಾ ಪಡಿತರ ಚೀಟಿ ಹೊಂದಿರುವವರಿಗೆ 2,500 ರೂ.ಗಳನ್ನು ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಘೋಷಿಸಿದ್ದರು. ಆದರೆ ಈಗ ರಾಜ್ಯ ಸರ್ಕಾರ ಜಿಒನಲ್ಲಿ ಶ್ರೀಲಂಕಾದ ನಿರಾಶ್ರಿತರನ್ನು ಪಟ್ಟಿಯಲ್ಲಿ ಸೇರಿಸಿಕೊಂಡಿದೆ. 2.06 ಕೋಟಿ ಪಡಿತರ ಚೀಟಿಗಳ ಜೊತೆಗೆ, 18,923 ಶ್ರೀಲಂಕಾದ ನಿರಾಶ್ರಿತರ ಕುಟುಂಬಗಳು ಮತ್ತು ಸಕ್ಕರೆ ಕಾರ್ಡ್‌ಗಳಿಂದ ಅಕ್ಕಿ ಕಾರ್ಡ್‌ಗಳಾಗಿ ಪರಿವರ್ತಿಸಲ್ಪಟ್ಟ 3.75 ಲಕ್ಷ ಪಡಿತರ ಚೀಟಿಗಳು ಸಹ ಪೊಂಗಲ್ ಉಡುಗೊರೆಗೆ ನೀಡಲಾಗುತ್ತದೆ.

ಪೊಂಗಲ್ ಉಡುಗೊರೆಯಲ್ಲಿ ಪಟ್ಟಿ ಮಾಡಲಾದ ಸಾಕಷ್ಟು ಸಂಗ್ರಹವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಸಂಬಂಧಪಟ್ಟ ಎಲ್ಲಾ ಸಹಕಾರಿ ಸಂಘಗಳಿಗೆ ಸೂಚನೆಗಳನ್ನು ನೀಡಿತ್ತು. ಮುಖ್ಯಮಂತ್ರಿ ಸೋಮವಾರ ಸಂಜೆಯಿಂದ ಪೊಂಗಲ್ ಉಡುಗೊರೆ ವಿತರಣೆಯನ್ನು ಪ್ರಾರಂಭಿಸಲಿದ್ದಾರೆ. ಪ್ರತಿ ವರ್ಷವೂ ಪೊಂಗಲ್ ಹಬ್ಬವನ್ನು ಆಚರಿಸಲು ತಮಿಳುನಾಡು ರಾಜ್ಯ ಸರ್ಕಾರ ಪಡಿತರ ಚೀಟಿ ಹೊಂದಿರುವವರಿಗೆ ಪೊಂಗಲ್ ಗಿಫ್ಟ್ ಹ್ಯಾಂಪರ್ ವಿತರಿಸುತ್ತದೆ. ಈ ವರ್ಷ ಸತತ ಎರಡು ಚಂಡಮಾರುತಗಳಾದ ನಿವಾರ್ ಮತ್ತು ಬುರೆವಿ ಕೋವಿಡ್ ಪ್ರೇರಿತ ಲಾಕ್‌ಡೌನ್‌ನಿಂದ ಜನರು ಆರ್ಥಿಕ ಸಂಕಷ್ಟವನ್ನು ಎಂದುರಿಸುವಂತಾಯಿತು. ಸರ್ಕಾರ ಎಲ್ಲರಿಗೂ ಸಹಾಯ ಮಾಡುವ ಉದ್ದೇಶದಿಂದ ಈ ಹಣವನ್ನು 2500 ರೂಗಳಿಗೆ ಹೆಚ್ಚಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights