ರೂಪಾಂತರಗೊಂಡ ಕೊರೊನಾ ಭೀತಿ ಹಿನ್ನೆಲೆ ಶಾಲಾ-ಕಾಲೇಜುಗಳ ಆರಂಭದ ಬಗ್ಗೆ ಪುನ: ಸಭೆ..!

ಮೊನ್ನೆಯಷ್ಟೇ ಜನವರಿ 1ರಿಂದ 9ರಿಂದ12ನೇ ತರಗತಿ ಶಾಲೆಗಳು ಆರಂಭಕ್ಕೆ ಸರ್ಕಾರ ನಿರ್ಧರಿಸಿದೆ. ಆದರೆ ರೂಪಾಂತರ ಕೊರೊನಾ ಹರಡುವ ಭೀತಿಯಿಂದ ಸರ್ಕಾರ ಶಾಲೆ ಆರಂಭದ ಬಗ್ಗೆ ಮತ್ತೊಂದು ಬಾರಿ ಸಭೆ ನಡೆಸಲು ತೀರ್ಮಾನಿಸಿದೆ ಎನ್ನಲಾಗುತ್ತಿದೆ. ಜನವರಿಯಲ್ಲಿ ಶಾಲೆಗಳ ಆರಂಭಕ್ಕೆ ಹಲವಾರು ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಇದರ ನಡುವೆ ಸರ್ಕಾರ ಶಾಲೆಗಳ ಆರಂಭಕ್ಕೆ ತೀರ್ಮಾನಿಸಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ. ಈ ಆತಂಕ ಸದ್ಯ ರಾಜ್ಯ ಸರ್ಕಾರದಲ್ಲಿ ಮನೆ ಮಾಡಿದ್ದು ಶಾಲೆ ಆರಂಭಕ್ಕೆ ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಆದರೆ ಶಾಲಾ ಕಾಲೇಜುಗಳಿಗೆ ಕಡ್ಡಾಯವಾಗಿ ಮಕ್ಕಳು ಆಗಮಿಸಬೇಕೆಂದು ಒತ್ತಾಯವಿಲ್ಲ. ಆನ್ ಲೈನ್ ಶಿಕ್ಷಣ ಪಡೆಯಬಹುದು ಎಂದು ತಿಳಿಸಿತ್ತು. ಆದಷ್ಟು ಬೇಗ ತಾಂತ್ರಿ ತಜ್ಞರ ಜೊತೆಗೆ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಶಾಲೆ ಆರಂಭಕ್ಕೆ ಇನ್ನೂ ಒಂದು ವಾರಗಳ ಕಾಲಾವಕಾಶವಿದ್ದು ಈ ಬಗ್ಗೆ ಕೂಲಂಕುಶವಾಗಿ ಸಭೆ ಮಾಡಲಾಗುವುದು.

ಈ ಹಿಂದೆ ಯಡಿಯೂರಪ್ಪ ಸರ್ಕಾರ ತಜ್ಞರೊಂದಿಗೆ ಸಮಾಲೋಚನೆ ಮಾಡಿ ಜನವರಿ 1ರಿಂದ ಶಾಲಾ ಕಾಲೇಜುಗಳ ಆರಂಭಕ್ಕೆ ಆದೇಶಿಸಿತ್ತು. ಇದಕ್ಕೆ ವಿಪಕ್ಷ ನಾಯಕ ಮತ್ತೊಮ್ಮೆ ಚಿಂತಿಸಿ ತೀರ್ಮಾನ ತೆಗೆದುಕೊಳ್ಳಲು ಸೂಚಿಸಿದರೆ ಕೆಲ ಪೋಷಕರು ಶಾಲೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸದ್ಯ ಸರ್ಕಾರ ಮತ್ತೊಂದು ಸಭೆ ನಡೆಸಿ ತೀರ್ಮಾನಿಸಲು ನಿರ್ಧರಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights