‘ಸುರೇಶ್ ಗೆ ಮಾತು ವಾಪಸ್ಸು ಪಡೆಯೋ ಖಾಯಿಲೆ ಇದೆ’ – ಹಳ್ಳಿಹಕ್ಕಿ

‘ರೂಪಾಂತರ ಕೊರೊನಾ ಹರಡುವ ಭೀತಿಯ ಹಿನ್ನೆಲೆ ನೈಟ್ ಕರ್ಫ್ಯೂ ಬಗ್ಗೆ ಸರ್ಕಾರ ಮತ್ತೊಮ್ಮ ಚಿಂತನೆ ಮಾಡಬೇಕು. ಜನರಿಗೆ ಇದು ನಗಪಾಟಲೆಯಾಗಿದೆ. 24 ಗಂಟೆಯಲ್ಲಿ ನೈಟ್ ಕರ್ಫ್ಯೂ ಬಗ್ಗೆ 3 ಬಾರಿ ಬದಲಾಯಿಸಿದೆ. ಇದರಿಂದ ಜನರು ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಸಚಿವ ಸುರೇಶ್ ಗೆ ಮಾತು ವಾಪಸ್ಸು ಪಡೆಯೋ ಖಾಯಿಲೆ ಇದೆ. ಹೀಗಾಗಿ ಶಾಲೆ ಆರಂಭದ ಬಗ್ಗೆ ಖಚಿತವಾಗಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ’ ಎಂದು ಹಳ್ಳಿ ಹಕ್ಕಿ ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

ನೈಟ್ ಕರ್ಫ್ಯೂ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಹಳ್ಳಿಹಕ್ಕಿ ಮತ್ತೆ ಸಚಿವ ಸುರೇಶ್ ಕುಮಾರ್ ಅವರನ್ನು ಕೆಣಕಿದ್ದಾರೆ. ನಿನ್ನೆ ಏಕಾಏಕಿ ಸಿಎಂ ಯಡಿಯೂರಪ್ಪ ನೈಟ್ ಕರ್ಫ್ಯೂ ಜಾರಿ ಮಾಡಿದ್ದರು. ಇದರ ಪ್ರಕಾರ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ತುರ್ತು ಸಮಯ ಹೊರತುಪಡೆಸಿ ಯಾರೂ ಕೂಡ ಹೊರಬರುವಂತಿಲ್ಲ. ವಾಹನ ಓಡಾಟ ಸಂಪೂರ್ಣ ಬಂದ್ ಎನ್ನಲಾಗಿತ್ತು. ಆದರೆ ಸಾರಿಗೆ ಬಸ್ ಗಳಿಗೆ ಮಾತ್ರ ರಾತ್ರಿ ಓಡಾಟಕ್ಕೆ ಅನುಮತಿ ಕೊಟ್ಟ ಸರ್ಕಾರದ ಧೋರಣೆಗೆ ಆಟೋ, ಓಲಾ, ಊಬರ್ ಸಂಘಟನ ಮಾಲೀಕರು ವಿರೋಧ ವ್ಯಕ್ತಪಡಿಸಿ ತಾವು ವಾಹನಗಳನ್ನು ಬೀದಿಗಿಳಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದರು.

ಇದರ ಮಧ್ಯೆ ಬಸ್ ಗಳಿಗೆ ಅವಕಾಶ ಇದ್ದರೆ ರಾತ್ರಿ ವೇಳೆ ಸಾರ್ವಜನಿಕರು ನಿಲ್ದಾಣಕ್ಕೆ ಹೋಗುವುದು ಹೇಗೆ? ಸಾರ್ವಜನಿಕರಿಲ್ಲದೇ ಬಸ್ ಓಡಾಡುತ್ತವಾ ಎನ್ನುವ ಮತ್ತೊಂದು ಪ್ರಶ್ನೆ ಎದುರಾಗಿತ್ತು. ಇದರಿಂದ ಸರ್ಕಾರ ಮತ್ತೊಂದು ಆದೇಶ ಹೊರಡಿಸಿ ಎಲ್ಲದಕ್ಕೂ ಅವಕಾಶ ಕಲ್ಪಿಸಿತು. ಆದರೆ ಪ್ರಯಾಣಿಕರು ಬುಕ್ಕಿಂಗ್ ಟಿಕೇಟ್ ತಮ್ಮ ಬಳಿ ಇರಿಸಿಕೊಂಡಿರಬೇಕು ಎಂದು ಹೇಳಿತು.

ಮತ್ತೊಂದೆಡೆ ಶಾಲಾ ಕಾಲೇಜುಗಳು ಜನವರಿ 1ರಿಂದ ಆರಂಭಕ್ಕೆ ಮತ್ತೆ ಸಭೆ ನಡೆಸುವುದಾಗಿ ಹೇಳಲಾಗುತ್ತಿದೆ. ಇದರಿಂದಾಗಿ ಜನ ಸಾಕಷ್ಟು ಗೊಂದಲಕ್ಕೀಡಾಗಿದ್ದಾರೆ. ಇದರಿಂದ ಸುರೇಶ್ ಕುಮಾರ್ ಗೆ ಮಾತನ್ನು ವಾಪಸ್ಸು ಪಡೆಯುವ ಖಾಯಿಲೆ ಇದೆ ಎಂದು ಹಳ್ಳಿ ಹಕ್ಕಿ ವಿಶ್ವನಾಥ್ ವ್ಯಂಗ್ಯವಾಗಿದ್ದಾರೆ.

ಆದರೂ ಸರ್ಕಾರ ಇಂದು ರಾತ್ರಿಯಿಂದ ಕರ್ಫ್ಯೂ ಜಾರಿ ಮಾಡುವುದಾಗಿ ತಿಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “‘ಸುರೇಶ್ ಗೆ ಮಾತು ವಾಪಸ್ಸು ಪಡೆಯೋ ಖಾಯಿಲೆ ಇದೆ’ – ಹಳ್ಳಿಹಕ್ಕಿ

  • December 24, 2020 at 11:59 am
    Permalink

    halli hakkiyalla <VALASE HAKKI YIRABEKU? migrated birds eye view!

    Reply

Leave a Reply

Your email address will not be published.

Verified by MonsterInsights