ಜಮ್ಮು-ಕಾಶ್ಮೀರ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಗುಪ್ಕರ್ ಮೈತ್ರಿಕೂಟ; BJPಗೆ ಮುಖಭಂಗ!

ಜಮ್ಮು ಮತ್ತು ಕಾಶ್ಮೀರದ 20 ಜಿಲ್ಲೆಗಳ ಡಿಸ್ಟ್ರಿಕ್ಟ್ ಡೆವಲಪ್‌ಮೆಂಟ್‌ ಕೌನ್ಸಿಲ್(ಡಿಡಿಸಿ)ನ 280 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ  ಫಾರೂಕ್​​ ಅಬ್ದುಲ್ಲಾ ನೇತೃತ್ವದ ’ಗುಪ್ಕರ್’​ ಮೈತ್ರಿಕೂಟವು 110 ಸ್ಥಾನಗಳನ್ನು ಗೆದ್ದಿದ್ದು, ಭರ್ಜರಿ ಗೆಲುವು ಸಾಧಿಸಿದೆ. ಕಾಶ್ಮೀರದಲ್ಲಿ ಹೊಸ ಪರ್ವ ಸೃಷ್ಟಿಸುತ್ತೇವೆ ಎಂದಿದ್ದ ಬಿಜೆಪಿ 74 ಸ್ಥಾನಗಳನ್ನು ಗೆದ್ದದೆ. ಕಾಂಗ್ರೆಸ್ 27 ಸ್ಥಾನಗಳನ್ನೂ, ಸ್ವತಂತ್ರ್ಯ ಅಭ್ಯರ್ಥಿಗಳು 49 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಕಾಶ್ಮೀರ ಪ್ರಾಂತ್ಯದ 10 ಜಿಲ್ಲಾ ಮಂಡಳಿಗಳಲ್ಲಿ 09 ಮಂಡಳಿಗಳ ಅಧಿಕಾರವನ್ನು ಗುಪ್ಕರ್‌ ಮೈತ್ರಿಕೂಡ ಗೆದ್ದುಕೊಂಡಿದೆ. ಜಮ್ಮು ಪ್ರಾಂತ್ಯದ 10 ಜಿಲ್ಲಾ ಮಂಡಳಿಗಳ ಪೈಕಿ 06 ಮಂಡಳಿಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಬಹುದಾದರೂ, ಉಳಿದ ನಾಲ್ಕು ಮಂಡಳಿಗಳಲ್ಲಿ ಯಾರಿಗೂ ಬಹುಮತ ಪಡೆಯಲು ಸಾಧ್ಯವಾಗಿಲ್ಲ.

ಕಳೆದ ವರ್ಷ ಕೇಂದ್ರದ ಬಿಜೆಪಿ ಸರ್ಕಾರವು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ರಾಜ್ಯಕ್ಕೆ ಮತ್ತೆ ವಿಶೇಷ ಸ್ಥಾನಮಾನವನ್ನು ಮರಳಿತರಲು ಅಲ್ಲಿಯ ಸ್ಥಳೀಯ ಏಳು ಪಕ್ಷಗಳು ’ಗುಪ್ಕರ್’ ಮೈತ್ರಿಕೂಟ ರಚಿಸಿ ಹೋರಾಟ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ಬಾರಿ ನಡೆದ ಚುನಾವಣೆಯನ್ನು ಗಂಭಿರವಾಗಿ ಪರಿಗಣಿಸಿದ್ದ ಗುಪ್ಕರ್‌ ಕೂಟ ಹೆಚ್ಚು ಸ್ತಾನಗಳನ್ನು ಗೆದ್ದಿದ್ದು, ಬಿಜೆಪಿಗೆ ಸವಾಲು ಹಾಕಿ ನಿಂತಿದೆ.


ಇದನ್ನೂ ಓದಿ: ಮಂಡ್ಯ ಡಿಸಿಸಿ ಬ್ಯಾಂಕ್‌ ಚುಣಾವಣೆ: ಕಾಂಗ್ರೆಸ್‌ ಸೋಲಿಸಲು BJP ಮೊರೆಹೋದ JDS

Spread the love

Leave a Reply

Your email address will not be published. Required fields are marked *