ಮಹಾರಾಷ್ಟ್ರ: 18 ಕೈ ನಾಯಕರು NCPಗೆ ಸೇರ್ಪಡೆ; ಕಾಂಗ್ರೆಸ್‌ಗೆ ಮುಖಭಂಗ!

ಮಹಾರಾಷ್ಟ್ರದ ಭಿವಾಂಡಿ-ನಿಜಾಂಪುರ ಮುನಿಪಲ್ ಕಾರ್ಪೋರೇಷನ್‌ನ 18 ಕಾಂಗ್ರೆಸ್‌ ಕಾರ್ಪೊರೇಟರ್‌ಗಳು ಪಕ್ಷ ತೊರೆದು ಗುರುವಾರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಗೆ ಸೇರಿದ್ದಾರೆ.

ಇತ್ತೀಚೆಗೆ ದೇಶಾದ್ಯಂತ ನಡೆದ ಹಲವು ಉಪಚುನಾವಣೆಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು, ಎಲ್ಲೆಡೆ ಬೆರಳೆಣಿಯಷ್ಟು ಸ್ಥಾನಗಳನ್ನು ಗೆದಿದ್ದೆ. ಈ ಹಿನ್ನೆಲೆಯಲ್ಲಿ ಭಿವಾಂಡಿ-ನಿಜಾಂಪುರ ಕಾರ್ಪೋರೇಷನ್‌ನ 18 ಕಾಂಗ್ರೆಸ್‌ ಕಾರ್ಪೋರೇಟರ್‌ಗಳು ಎನ್‌ಸಿಪಿ ಸೇರಿದ್ದಾರೆ.

ಭಿವಾಂಡಿ-ನಿಜಾಂಪುರ ಕಾರ್ಪೋರೇಷನ್‌ನ ಉಪ ಮೇಯರ್ ಇಮ್ರಾನ್ ಆಲಿ ಮೊಹಮ್ಮದ್ ಖಾನ್ ಸೇರಿದಂತೆ 18 ಕಾಂಗ್ರೆಸ್‌ ಕಾರ್ಪೊರೇಟರ್‌ಗಳು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಎನ್ ಸಿಪಿ ನಾಯಕ ಅಜಿತ್ ಪವಾರ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ನೇತೃತ್ವದಲ್ಲಿ ಎನ್‌ಸಿಪಿ ಸೇರ್ಪಡೆಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಮಹಾ ವಿಕಾಸ್ ಅಘಾಡ್ ಮೈತ್ರಿಯಲ್ಲಿ ಸರ್ಕಾರ ರಚಿಸಿವೆ. ಮಹಾ ಸರ್ಕಾರದಲ್ಲಿ  ಕಾಂಗ್ರೆಸ್ ಮತ್ತು ಎನ್‌ಸಿಪಿ ಮಿತ್ರ ಪಕ್ಷಗಳಾದ್ದು, ಇದೀಗ ಕಾಂಗ್ರೆಸ್‌ ಮುಖಂಡರು ಎನ್‌ಸಿಪಿ ಸೇರಿದ್ದು, ಇದು ಎರಡೂ ಪಕ್ಷಗಳ ನಡುವೆ ಬಿರುಕು ಮೂಢಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ, ಇದು ಕಾಂಗ್ರೆಸ್‌ ಪಕ್ಷಕ್ಕೆ ಮುಖಭಂಗವೆಂದು ಹೇಳಲಾಗಿದೆ.


ಇದನ್ನೂ ಓದಿ: ಟಿಎಂಸಿಗೆ ಸೇರಿಕೊಂಡ ಪತ್ನಿ ಸುಜಾತಾಗೆ ವಿಚ್ಚೇದನ ಕೊಟ್ಟ ಬಿಜೆಪಿ ಸಂಸದ ಸೌಮಿತ್ರಾ ಖಾನ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights