ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ಅಪರಾಧ ಎಂದು ಘೋಷಿಸಿತಾ ನೇಪಾಳ ಸುಪ್ರೀಂ..?

ಈ ತಿಂಗಳ ಆರಂಭದಲ್ಲಿ ನೇಪಾಳವನ್ನು ಹಿಂದೂ ರಾಜ್ಯವೆಂದು ಘೋಷಿಸಬೇಕೆಂದು ಒತ್ತಾಯಿಸಿ ನೂರಾರು ಜನರು ಕಠ್ಮಂಡುವಿನ ಬೀದಿಗಿಳಿದು ಹೋರಾಟ ಮಾಡಿದ್ರು. ಇದರ ಬೆನ್ನಲ್ಲೇ  ಸೋಶಿಯಲ್ ಮೀಡಿಯಾದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದು ಕ್ರಿಮಿನಲ್ ಅಪರಾಧ ಎಂದು ನೇಪಾಳದ ಸುಪ್ರೀಂ ಕೋರ್ಟ್ ಘೋಷಿಸಿದೆ ಎನ್ನುವ ವಿಚಾರ ಹರಿದಾಡುತ್ತಿದೆ.

ಆದರೆ ಈ ಹೇಳಿಕೆ ತಪ್ಪು ಎನ್ನುವ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ನೇಪಾಳದ ಸುಪ್ರೀಂ ಕೋರ್ಟ್ ತಾತ್ಕಾಲಿಕ ಆದೇಶದಲ್ಲಿ ಮಸೀದಿಗಳಿಗೆ ‘ಅಜಾನ್’ ಪರಿಮಾಣದ ಮಿತಿಯನ್ನು ಕಾಯ್ದುಕೊಳ್ಳುವಂತೆ ಕೇಳಿಕೊಂಡಿತ್ತು. ಆದರೆ ಡಿಸೆಂಬರ್ 23 ರ ಸಂಜೆ ತನಕ ಅದು ಪರಿಮಾಣದ ಮಿತಿಯನ್ನು ನಿರ್ದಿಷ್ಟಪಡಿಸಿಲ್ಲ ಅಥವಾ ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಿಲ್ಲ.

ಮಾತ್ರವಲ್ಲದೇ ನೇಪಾಳದ ಸುಪ್ರೀಂ ಕೋರ್ಟ್ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸಿದೆ ಎಂದು ಹೇಳುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಯನ್ನು ಕಂಡುಹಿಡಿಯಲಾಗಲಿಲ್ಲ. ಧ್ವನಿವರ್ಧಕಗಳ ಬಳಕೆಯನ್ನು ಅಪರಾಧೀಕರಿಸುವ ಆದೇಶದ ಬಗ್ಗೆ ನೇಪಾಳದ ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಯಾವುದೇ ವಿವರಗಳಿಲ್ಲ. ವೈರಲ್ ಹೇಳಿಕೆ ಸುಳ್ಳು ಎಂದು  ನೇಪಾಳದ ಸುಪ್ರೀಂ ಕೋರ್ಟ್‌ನ ವಕ್ತಾರ ಭದ್ರಕಲಿ ಪೋಖರೆಲ್ ಅವರು ದೃಢಪಡಿಸಿದ್ದಾರೆ.

“ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನೇಪಾಳ ಸುಪ್ರೀಂ ಕೋರ್ಟ್ ಅಪರಾಧೀಕರಿಸಿದೆ ಎಂಬ ಹೇಳಿಕೆ ಸುಳ್ಳು. ಧ್ವನಿವರ್ಧಕಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಅರ್ಜಿಗಳಿವೆ. ಆದಾಗ್ಯೂ ಸುಪ್ರೀಂ ಕೋರ್ಟ್ ಇನ್ನೂ ಅವುಗಳನ್ನು ನಿಷೇಧಿಸಿಲ್ಲ” ಎಂದು ಪೋಖರೆಲ್ ಹೇಳಿದ್ದಾರೆ.

“ನವೆಂಬರ್ನಲ್ಲಿ ಹೊರಡಿಸಿದ ಸುಪ್ರೀಂ ಕೋರ್ಟ್ನ ತಾತ್ಕಾಲಿಕ ಆದೇಶ ನೇಪಾಳದ ಮಸೀದಿಗಳಿಗೆ ಅಜಾನ್ ಪ್ರಮಾಣಕ್ಕೆ ಮಿತಿಯನ್ನು ಕಾಯ್ದುಕೊಳ್ಳುವಂತೆ ಕೇಳಿಕೊಂಡಿತ್ತು.  ಈ ಆದೇಶದಲ್ಲಿ ಮಿತಿ ಏನು ಎಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನೇಪಾಳ ಅಪರಾಧ ಎಂದು ಘೋಷಿಸಿಲ್ಲ ಎಂದು ಮಾಡಿಲ್ಲ, “ನೇಪಾಳದ ಮುಸ್ಲಿಂ ಆಯೋಗದ ಅಧ್ಯಕ್ಷ ಸಮೀಮ್ ಮಿಯಾ ಅನ್ಸಾರಿ ಹೇಳಿದ್ದಾರೆ.

ಆದ್ದರಿಂದ ನೇಪಾಳದ ಸುಪ್ರೀಂ ಕೋರ್ಟ್ ತಾತ್ಕಾಲಿಕ ಆದೇಶದಲ್ಲಿ ಮಸೀದಿಗಳಿಗೆ ಧ್ವನಿವರ್ಧಕಗಳ ಪ್ರಮಾಣವನ್ನು ಮಿತಿಗೊಳಿಸುವಂತೆ ಕೇಳಿಕೊಂಡಿದ್ದರೂ ದೇಶದ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಪರಾಧೀಕರಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights