ಮಿತ್ರ ಪಕ್ಷಕ್ಕೇ ಆಪರೇಷನ್ ಮಾಡಿದ ಬಿಜೆಪಿ: JDU ಪಕ್ಷದ 06 ಶಾಸಕರು BJPಗೆ ಸೇರ್ಪಡೆ!

ದೇಶಾದ್ಯಂತ ನಡೆಯುತ್ತಿರುವ ಹಲವು ಚುನಾವಣೆಗಳಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಕೊಳ್ಳುತ್ತಿರುವ ಬಿಜೆಪಿ, ಈಶಾನ್ಯ ರಾಜ್ಯಗಳಲ್ಲೂ ಕೇಸರಿ ಪತಾಕೆ ಹಾರಿಸುತ್ತಿದೆ. ಹಲವು ರಾಜ್ಯಗಳಲ್ಲಿ ಆಪರೇಷನ್‌ ಮಾಡಿ ಅಧಿಕಾರ ಹಿಡಿದಿರುವ ಬಿಜೆಪಿ, ಸ್ವತಃ ಅಧಿಕಾರದಲ್ಲಿರುವ ಅರುಣಾಚಲ ಪ್ರದೇಶದಲ್ಲಿಯೂ ಆಪರೇಷನ್‌ ಮಾಡಿ 07 ಶಾಸಕರನ್ನು ಬಿಜೆಪಿ ಸೇರಿಸಿಕೊಂಡಿದೆ.

ಅರುಣಾಚಲ ಪ್ರದೇಶದ ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಹೊಂದಿದೆ. ಆದರೂ, ಎನ್‌ಡಿಎಯ ಭಾಗವಾಗಿರುವ ಬಿಜೆಪಿಯ ಮಿತ್ರ ಪಕ್ಷ ಜೆಡಿಯು ಇಂದಲೇ 06 ಶಾಸಕರನ್ನು ಆಪರೇಷನ್‌ ಮಾಡಿ ತನ್ನ ಪಾಳಯಕ್ಕೆ ಬಿಜೆಪಿ ಸೇರಿಸಿಕೊಂಡಿದೆ. ಅಲ್ಲದೆ,  ಪೀಪಲ್ಸ್‌ ಪಾರ್ಟಿ ಆಫ್‌ ಅರುಣಾಚಲ ಪಕ್ಷದ ಒಬ್ಬರನ್ನು ಬಿಜೆಪಿ ಕರೆತಂದಿದೆ.

ಅಂದಹಾಗೆ 2019ರ ವಿಧಾನಸಭೆ ಚುನಾವಣೆಯಲ್ಲಿ  41 ಸ್ಥಾನಗಳನ್ನು ಗೆದ್ದು ಬಿಜೆಪಿ ಅಧಿಕಾರಕ್ಕೆ ಏರಿತ್ತು.  ಇದೀಗ ಬಿಜೆಪಿ ಬಲ 48ಕ್ಕೆ ಏರಿದೆ.

7 ಸ್ಥಾನಗಳನ್ನು ಗೆದ್ದಿದ್ದ ಜೆಡಿಯು 2ನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಇದೀಗ ಜಿಡಿಯುನ 6 ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದು, ಜೆಡಿಯು ಶಾಸಕರ ಸಂಖ್ಯೆ 01ಕ್ಕೆ ಕುಸಿದಿದೆ.ಇದೀಗ ಟೇಚಿ ಕಾಸೋ ಜಿಡಿಯುನ ಏಕೈಕ ಶಾಸಕರಾಗಿದ್ದಾರೆ.

ಜಿಡಿಯು ಶಾಸಕರ ಈ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿರುವ ಅರುಣಾಚಲ ಬಿಜಿಪಿ ಘಟಕದ ಅಧ್ಯಕ್ಷ ಬಿಹುರಾಮ್‌ ವಾಹ್ನೆ ಇದು ಪ್ರಧಾನಿ ಮೋದಿ ಹಾಗೂ ಪೇಮಾ ಖಾ೦ಡು ನಾಯಕತ್ವದ ಮೇಲಿನ ಜನರ ನ೦ಬಿಕೆಯ ಪ್ರತೀಕ ಎ೦ದಿದ್ದಾರೆ.

Read Also: ಬೆಂಗಳೂರಿನಲ್ಲಿ 838 ಕೋಟಿ ಮೊತ್ತದ ಭಾರೀ ಹಗರಣ: ಸ್ಥಳೀಯ ಶಾಸಕನ ಮೇಲೆ ದೂರು ದಾಖಲು!

ಸದ್ಯ ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಹಾಗೂ ನ್ಯಾಶನಲ್‌ ಪೀಪಲ್ಸ್‌ ಪಾರ್ಟಿಗೆ ತಲಾ ನಾಲ್ವರು ಸದಸ್ಯರಿದ್ದು, ಮೂವರು ಪಕ್ಷೇತರ ಶಾಸಕರಿದ್ದಾರೆ.

ಎನ್‌ ಡಿಎ ಮಿತ್ರಪಕ್ಷವಾಗಿರುವ ಜೆಡಿಯು ಪಕ್ಷದ ಸದಸ್ಯರನ್ನೇ ಬಿಜಿಪಿ ಸೇರ್ಪಡೆ ಮಾಡಿಕೊಳ್ಳುತ್ತಿರುವುದು ಸಹಜವಾಗಿ ಜಿಡಿಯು ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.

ಜೆಡಿಯು ಪಕ್ಷದ ತಲೇಮ್ ತಬೋಹ್ (ರುಮ್‌ಗಾಂಗ್ ಕ್ಷೇತ್ರ), ಹಯೆಂಗ್ ಮಾಂಗ್ಫಿ (ಚಯಾಂಗ್ ತಾಜೊ ಕ್ಷೇತ್ರ), ಜಿಕ್ಕೆ ಟಕೊ (ತಾಲಿ ಕ್ಷೇತ್ರ), ಡೋರ್ಜಿ ವಾಂಗ್ಡಿ ಖರ್ಮಾ (ಕಲಕ್ಟಾಂಗ್ ಕ್ಷೇತ್ರ), ಡೊಂಗ್ರು ಸಿಯೊಂಗ್ಜು (ಬೊಮ್ಡಿಲ ಕ್ಷೇತ್ರ)  ಮತ್ತು ಕಾಂಗ್‌ಗಾಂಗ್ ಟಕು (ಮರಿಯಾಂಗ್-ಗೆಕು ಕ್ಷೇತ್ರ) ಶಾಸಕರು ಬಿಜೆಪಿ ಸೇರಿದ್ದಾರೆ.


Read Also: ‘ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವವರೆಗೂ ನಿದ್ದೆ ಮಾಡುವುದಿಲ್ಲ’ – ಸುವೆಂದು ಅಧಿಕಾರಿ ಪ್ರತಿಜ್ಞೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights