2021ರ ಚುನಾವಣೆಗಳಲ್ಲಿ BJP ಹೀನಾಯವಾಗಿ ಸೋಲುತ್ತದೆ: ಕಾರಣವೇನು ಗೊತ್ತೇ?

ಮುಂಬರುವ 2021ರ ವರ್ಷವು ಬಿಜೆಪಿ ಬಹಳ ಕಠಿಣ ವರ್ಷವಾಗಲಿದೆ. 2019ರ ಲೋಕಸಭಾ ಚುನಾವಣೆಯ ಭರ್ಜರಿ ಗೆಲುವನ್ನು ಹೊರತು ಪಡೆಸಿದರೆ, 2018ರಿಂದ ಈಚೆಗೆ ನಡೆದ 12 ಪ್ರಮುಖ ರಾಜ್ಯಗಳ ಚುನಾವಣೆಗಳಲ್ಲಿ 11 ರಲ್ಲಿ ಬಿಜೆಪಿ ಅಪಮಾನ ಅನುಭವಿಸಿದೆ. ಅದು ಬಿಹಾರದಲ್ಲಿ ಮಾತ್ರ ತಕ್ಕಮಟ್ಟಿಗಿನ ಗೆಲುವು ಸಾಧಿಸಿದೆ. 2021ರಲ್ಲಿಯೂ ಬಿಜೆಪಿ ಅಂತಹ ಅಪಮಾನವನ್ನು ಅನುಭವಿಸಲಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

2021ರ ಆರಂಭದಲ್ಲಿ ಅತ್ಯಂತ ದೊಡ್ಡ ಚುನಾವಣಾ ಯುದ್ದವು ಪಶ್ಚಿಮ ಬಂಗಾಳದಲ್ಲಿ ನಡೆಯಲಿದೆ. 2019ರಲ್ಲಿ ಗೆದ್ದ ಬಿಜೆಪಿ, ಹೆಚ್ಚಿನ ಭರವಸೆಗಳನ್ನು ಬೆಳೆಸಿಕೊಂಡಿದೆ. ಆದರೂ, ಅದು ಸೋಲುತ್ತದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ತನ್ನ ಸ್ಥಳೀಯ ಮಿತ್ರ ಎಐಎಡಿಎಂಕೆ ಜೊತೆ ಸೇರಿ ಚುನಾವಣೆ ಎದುರಿಸಲಿದೆ. ಇದು ಬಿಜೆಪಿಗಷ್ಟೇ ಅಲ್ಲದೆ, ಎಐಎಡಿಎಂಕೆಗೂ ಸೋಲನ್ನು ತಂದೊಡ್ಡಲಿದೆ. ಕೇರಳದಲ್ಲಿಯೂ ಇದು ನಿಶ್ಚಯವಾಗಿದೆ. ಆದರೆ, ಅಸ್ಸಾಂನಲ್ಲಿ ಮಾತ್ರ ಬಿಜೆಪಿಗೆ ಉತ್ತಮವಾದ ವಾತಾವರಣವಿದೆ.

2018ರಿಂದ ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಪ್ರಾಬಲ್ಯ ಕುಗ್ಗುತ್ತಿದೆ. ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಚುನಾವಣೆಯ ನಂತರ ಸರ್ಕಾರಗಳನ್ನು ಉರುಳಿಸಿ, ಅಧಿಕಾರ ಗೆದ್ದುಕೊಂಡಿದೆ. ಇದು ಉಪಚುನಾವಣೆಗಳಲ್ಲಿ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ. ಆದರೆ, ಈ ಅಲ್ಪಾವಧಿಯ ಲಾಭವು 2021ರ ಚುನಾವಣೆಗಳ ಸೋಲಿನಿಂದ ಮತ್ತಷ್ಟು ಕುಗ್ಗಲಿದೆ. ಅಸ್ಸಾಂನಲ್ಲಿ ಮಾತ್ರ ತನ್ನ ವರ್ಚಸ್ಸನ್ನು ಬಿಜೆಪಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಮಿತ್ರ ಪಕ್ಷಕ್ಕೇ ಆಪರೇಷನ್ ಮಾಡಿದ ಬಿಜೆಪಿ: JDU ಪಕ್ಷದ 06 ಶಾಸಕರು BJPಗೆ ಸೇರ್ಪಡೆ!

ದಶಕಗಳಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೈಡ್‌ಲೈನ್‌ ಆಟಗಾರನಂತಿದೆ. 2016ರ ರಾಜ್ಯ ಚುನಾವಣೆಯಲ್ಲಿ ಅದು 17% ಮತಗಳನ್ನು ಮತ್ತು ಎರಡು ಸ್ಥಾನಗಳನ್ನು ಗೆದ್ದುಕೊಂಡಿತು. ಇದು 2019ರ ಲೋಕಸಭಾ ಚುನಾವಣೆಯಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸಿದ್ದು, 40.7% ಮತಗಳನ್ನು ಮತ್ತು 18 ಸ್ಥಾನಗಳನ್ನು ಗೆದ್ದಿದೆ, ತೃಣಮೂಲ ಕಾಂಗ್ರೆಸ್‌ 43.3% ಮತ ಪಾಲು ಮತ್ತು 22 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ.

ಇದು ಮುಂಬರುವ ರಾಜ್ಯ ಚುನಾವಣೆಗೆ ಪಕ್ಷದ ಸಂಘಟನೆ ಕಟ್ಟಲು ಭಾರಿ ಉತ್ಸಾಹದಿಂದ ಮುಂದಾಗಿದೆ. ಆದರೆ, ಎಡಪಂಥೀಯ ಮತ್ತು ಕಾಂಗ್ರೆಸ್ ಚುನಾವಣಾ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದ್ದು, ಬಿಜೆಪಿ ವಿರೋಧಿ ಮತಗಳನ್ನು ಒಗ್ಗೂಡಿಸಲು ಇದು ನೆರವಾಗುತ್ತದೆ.

ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷಕ್ಕಿಂತ ಹೆಚ್ಚು ಜನಪ್ರಿಯರಾಗಿದ್ದಾರೆ. ಆದ್ದರಿಂದ, ಸ್ಥಳೀಯ ಬಿಜೆಪಿಗೆ ಜನಪ್ರಿಯತೆಯ ಕೊರತೆಯಿದೆ. ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಹಿನ್ನಡೆಯನ್ನುಂಟು ಮಾಡುತ್ತದೆ.

ಈ ಕಾರಣದಿಂದಾಗಿ, ಬಿಜೆಪಿಯ ಮತಪಾಲು 2019ರ ಲೋಕಸಭಾ ಚುನಾವಣೆಯ  ಮಟ್ಟಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ, ಬಿಹಾರ ಚುನಾವಣೆಯಲ್ಲಿ 05 ಸ್ಥಾನಗಳನ್ನು ಗೆದ್ದಿರುವ ಒವೈಸಿ ಅವರ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡಿದರೆ, ಅವರು ಮುಸ್ಲಿಂ ಮತವನ್ನು ಗಂಭೀರವಾಗಿ ವಿಭಜಿಸುತ್ತಾರೆ. ಹಾಗಾಗಿ, ಅವರರೊಂದಿಗೆ ಕೆಲವು ಸ್ಥಾನಗಳಲ್ಲಿ ಎಡಪಂಥೀಯ-ಕಾಂಗ್ರೆಸ್ ಅಥವಾ ಟಿಎಂಸಿ ಪಕ್ಷಗಳು ಔಪಚಾರಿಕ ಅಥವಾ ಅನೌಪಚಾರಿಕ ಒಪ್ಪಂದ ಸಾಧ್ಯವಾದರೆ – ಬಿಜೆಪಿಯ ಭವಿಷ್ಯವು ಭೀಕರವಾಗಿ ಕುಸಿಯುತ್ತದೆ.

ಇದನ್ನೂ ಓದಿ: BJP ಆಡಳಿತದಲ್ಲಿ ಇದೂವರೆಗೂ 154 ಪತ್ರಕರ್ತರ ಬಂಧನ; 3 ಹತ್ಯೆ

ತಮಿಳುನಾಡಿನಲ್ಲಿ, ಹತ್ತು ವರ್ಷಗಳ ಆಡಳಿತ ನೀಡಿರುವ ಎಐಎಡಿಎಂಕೆ – ಮುಖ್ಯವಾಗಿ ಜಯಲಲಿತಾ ಇಲ್ಲದೆ ಚುನಾವಣೆಯನ್ನು ಎದುರಿಸಲಿದೆ. ಅಲ್ಲದೆ, ಅದು  ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈಗಾಗಲೇ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಎಐಎಡಿಎಂಕೆಗೆ ಇದು ಮತ್ತಷ್ಟು ಸಂದಿಗ್ಧತೆಯನ್ನು ಉಂಟುಮಾಡಿದೆ. ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ, ಡಿಎಂಕೆ ನೇತೃತ್ವದ ಒಕ್ಕೂಟವು 39 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗಳಿಸಿತು. ಪುದುಚೇರಿಯಲ್ಲಿ ಕಾಂಗ್ರೆಸ್ ಗೆದ್ದಿತು. ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ವರ್ಚಸ್ಸು ಕಟ್ಟಪರಿಸ್ಥಿಯಲ್ಲಿರುವುದರಿಂದ 2021ರಲ್ಲಿ ಇದು ಭಾರೀ ಹೊಡೆತವನ್ನು ಅನುಭವಿಸಲಿದೆ.

ಅಸ್ಸಾಂ ಕತೆ ಏನು?

ದಶಕಗಳ ಕಾಂಗ್ರೆಸ್ ಆಡಳಿತದ ನಂತರ, ಬಿಜೆಪಿ ನೇತೃತ್ವದ ಎನ್‌ಡಿಎ 2016 ರಲ್ಲಿ ಅಧಿಕಾರಕ್ಕೆ ಬಂದಿದೆ. 126 ಸ್ಥಾನಗಳಲ್ಲಿ 86 ಸ್ಥಾನಗಳನ್ನು ಗೆದ್ದಿದೆ. ಈಗಲೂ ಬಿಜೆಪಿಯ ಪ್ರಭಾವ ಅಲ್ಲಿ ಕಡಿಮೆಯಾಗಿಲ್ಲ. ಹಾಗಾಗಿ ಅಸ್ಸಾಂನಲ್ಲಿ ಕಾಂಗ್ರೆಸ್ ಮತ್ತು ಎಐಯುಡಿಎಫ್ ಅನೌಪಚಾರಿಕ ಮೈತ್ರಿಗೆ ಬರಲು ಸಾಧ್ಯವಾದರೆ ಮಾತ್ರ ಅವರಿಗೆ ಅವಕಾಶವಿದೆ. ಇಲ್ಲವಾದಲ್ಲಿ ಬಿಜೆಪಿ ಮತ್ತೊಮ್ಮೆ ಅಸ್ಸಾಂನಲ್ಲಿ ಅಧಿಕಾರಕ್ಕೇರುವ ಸಾಧ್ಯತೆಗಳು ದಟ್ಟವಾಗಿವೆ.


ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ BJPಗೇ ಆಪರೇಷನ್‌; ಎನ್‌ಸಿಪಿ ಸೇರಲಿದೆ ಬಿಜೆಪಿಗರ ದಂಡು: ಅಜಿತ್ ಪವಾರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights