BJP ಆಡಳಿತದಲ್ಲಿ ಹೆಚ್ಚುತ್ತಿದೆ ಪತ್ರಕರ್ತರ ಮೇಲೆ ದಾಳಿ: ಇದೂವರೆಗೂ 154 ಪತ್ರಕರ್ತರ ಬಂಧನ; 3ಹತ್ಯೆ
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಮಾಧ್ಯಮಗಳನ್ನು ತನ್ನಿಷ್ಟಕ್ಕೆ ತಕ್ಕಂತೆ ಸರ್ಕಾರ ನಿಯಂತ್ರಿಸುತ್ತಿದೆ. ಬಿಜೆಪಿ ಆಡಳಿತದ ವಿರುದ್ಧ ಪ್ರಶ್ನೆ ಮಾಡುವವರನ್ನು ಸದೆಬಡಿಯಲಾಗುತ್ತಿದೆ. ಪ್ರಶ್ನಿಸುವ ಪತ್ರಕರ್ತರ ಮೇಲೆ ದಾಳಿ ನಡೆಸಿ, ಅವರನ್ನು ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿಸುವ ಯತ್ನ ಹೆಗ್ಗಿಲ್ಲದೆ ನಡೆಯುತ್ತಿವೆ. ಹಾಗಾಗಿಯೇ ಮಾಧ್ಯಮಗಳು ಬಿಜೆಪಿಯ ಬಾಲಂಗೋಚಿಗಳಂತೆ ಬಿಜೆಪಿಗೆ ಉಗೇ ಎನ್ನುತ್ತಿವೆ.
ಬಿಜೆಪಿಯ ಧೋರಣಗೆ ಬಗ್ಗೆ, ವೃತ್ತಿನಿಷ್ಟವಾಗಿ ದುಡಿಯುತ್ತಿರುವ ಪತ್ರಕರ್ತರೂ ಇದ್ದಾರೆ. ಅವರ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಹೀಗಾಗಿಯೇ, ಕಳೆದ ಒಂದು ದಶಕದಲ್ಲಿ, ಭಾರತದಲ್ಲಿ 154 ಪತ್ರಕರ್ತರನ್ನು “ಅವರ ಪತ್ರಿಕಾ ವೃತ್ತಿಯ ಕಾರಣ”ಕ್ಕಾಗಿಯೇ ಬಂಧಿಸಲಾಗಿದೆ, ವಿಚಾರಣೆ ನಡೆಸಲಾಗಿದೆ ಎಂದು ಫ್ರೀ ಸ್ಪೀಚ್ ಕಲೆಕ್ಟಿವ್ ಇತ್ತೀಚೆಗೆ ವರದಿ ಮಾಡಿದೆ. ಈ 154 ಪತ್ರಕರ್ತರ ಪೈಕಿ 67 ಪತ್ರಕರ್ತರನ್ನು 2020ರ ಒಂದೇ ವರ್ಷದಲ್ಲಿ ಬಂಧಿಸಲಾಗಿದೆ ಮತ್ತು ವಿಚಾರಣೆ ನಡೆಸಲಾಗಿದೆ.
ಬಂಧಿಸಲ್ಪಟ್ಟ ಪರ್ತಕರ್ತರಲ್ಲಿ ಬಹುತೇಕರು ಇಂಗ್ಲಿಷ್ ಮೀಡಿಯಾ ಅಲ್ಲದ ಫ್ರೀಲಾನ್ಸರ್ಗಳು ಅಥವಾ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ. 154 ಪ್ರಕರಣಗಳಲ್ಲಿ 73 ಪ್ರಕರಣಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಾಳಲಾಗಿವೆ. ಅಲ್ಲದೆ, ಉತ್ತರ ಪ್ರದೇಶ ಒಂದರಲ್ಲೇ 29 ಪ್ರಕರಣಗಳು ಪತ್ರಕರ್ತರ ವಿರುದ್ಧ ದಾಖಲಾಗಿವೆ. ಇದರಿಂದರೊಂದಿಗೆ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ.
“ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸುವ ಗುರಿ”ಯನ್ನು ಹೊಂದಿದ್ದ ಮೂವರು ಪತ್ರಕರ್ತರು ಅವರ ವೃತ್ತಿಯ ಕಾರಣಕ್ಕಾಗಿಯೇ 2020ರಲ್ಲಿ ಹತ್ಯೆಯಾಗಿದ್ದಾರೆ. ಇವರಲ್ಲಿ ಉತ್ತರ ಪ್ರದೇಶದ ರಾಕೇಶ್ ಸಿಂಗ್ ಮತ್ತು ಶುಭಮ್ ಮಣಿ ತ್ರಿಪಾಠಿ ಹಾಗೂ ತಮಿಳುನಾಡಿನ ಇಸ್ರೇವೆಲ್ ಮೋಸೆಸ್ ಹತ್ಯೆಗೀಡಾದವರು. ಅಲ್ಲದೆ, ಅಸ್ಸಾಂನಲ್ಲಿ ಪತ್ರಕರ್ತ ಪರಾಗ್ ಭುಯಾನ್ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರ ಮೇಲೆ ಮಾರಣಾಂತಿಕ ಹಲ್ಲೆ (ಅಫಘಾತ) ನಡೆದಿದೆ. ಅವರ ಮೇಲಿನ ದಾಳಿಗೆ ಅವರ ವೃತ್ತಿಪರತೆಯೇ ಕಾರಣವೇ ಎಂಬುದಕ್ಕೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪ್ರತ್ಯೇಕ ದಾಳಿಯಲ್ಲಿ ತಮಿಳುನಾಡು ಮತ್ತು ಮಧ್ಯಪ್ರದೇಶದ ಇಬ್ಬರು ಪತ್ರಕರ್ತರ ಅಮಾನುಷ ಹತ್ಯೆ!
2010 ರಿಂದ ಮೇ 2014 ರವೆರೆಗೆ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ, ಪತ್ರಕರ್ತರನ್ನು ಬಂಧಿಸಿ, ವಿಚಾರಣೆ ನಡೆಸಿರುವ ಪ್ರಕರಣಗಳು ಕೇಲವ 19 ಎಂದು ಫ್ರೀ ಸ್ಪೀಚ್ ಕಲೆಕ್ಟಿವ್ ವರದಿಯಲ್ಲಿ ಹೇಳಿದೆ. ಅಲ್ಲದೆ, 2017ರ ನಂತರ ಪತ್ರಕರ್ತರ ಮೇಲಿನ ಪ್ರಕರಣಗಳು ಮತ್ತು ವಿಚಾರಣೆಗಳು ದ್ವಿಗುಣಗೊಂಡಿವೆ ಎಂದು ಹೇಳಿದೆ.
ಕಳೆದ ಒಂದು ದಶಕದಲ್ಲಿ, 56 ಪತ್ರಕರ್ತರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಕನಿಷ್ಠ 13 ಪತ್ರಕರ್ತರು ನಿರೀಕ್ಷಿತ ಜಾಮೀನು ಪಡೆದಿದ್ದಾರೆ. ಅಷ್ಟೇ ಸಂಖ್ಯೆ ಪತ್ರಕರ್ತರು ಪೊಲೀಸರ ವಶದಲ್ಲಿದ್ದಾರೆ. ಇತರ 45 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಕಳೆದ ಒಂದು ದಶಕದಲ್ಲಿ ಕೇವಲ 14 ಪತ್ರಕರ್ತರು “ನ್ಯಾಯಾಲಯದಲ್ಲಿ ತಮ್ಮ ಮೇಲಿನ ಪ್ರಕರಣಗಳ ವಿರುದ್ದ ಹೋರಾಟಲು ಮತ್ತು ತಮ್ಮ ಮೇಲಿನ ಪ್ರಕರಣಗಳಿಂದ ಖುಲಾಸೆಗೊಳ್ಳಲು ಸಾಧ್ಯವಾಗಿದೆ.
ಪತ್ರಕರ್ತರ ಮೇಲೆ ಮುಖ್ಯವಾಗಿ ಕಾನೂನುಬಾಹಿರ ಚಟುವಟಿಕೆಗಳನ್ನು (ತಡೆಗಟ್ಟುವಿಕೆ) ಕಾಯ್ದೆ ಮತ್ತು ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. “ಜಮ್ಮು ಮತ್ತು ಕಾಶ್ಮೀರದಂತಹ ಸಂಘರ್ಷದ ಪ್ರದೇಶಗಳಿಂದ ವರದಿ ಮಾಡುವ ಪತ್ರಕರ್ತರು ಮತ್ತು ಸುದ್ದಿ ವರದಿಗಳ ಮೇಲೆ ಪೊಲೀಸರು ಅಥವಾ ಆಡಳಿತ ಮಂಡಳಿಯಿಂದ ನಿರಂತರ ಕಣ್ಗಾವಲು ಮತ್ತು ಸಮನ್ಸ್ ನೀಡುವುದು ವಾಡಿಕೆಯಾಗಿದೆ. ಪತ್ರಕರ್ತರು ಹೆಚ್ಚು ಆಳವಾಗಿ ಪ್ರಶ್ನಿಸುವುದನ್ನು ಮುಂದುವರಿಸಿದರೆ ಅವರ ವಿರುದ್ದ ಪ್ರಕರಣಗಳನ್ನು ದಾಖಲಿಸುವ ಬೆದರಿಕೆಗೆ ಒಳಗಾಗುತ್ತಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಕಳೆದ ಒಂದು ದಶಕದಲ್ಲಿ ಪತ್ರಕರ್ತರ ಮೇಲಿನ ದೈಹಿಕ ದಾಳಿಯ ಸಂಖ್ಯೆಗಳೂ ಹೆಚ್ಚಾಗಿವೆ. 2014 ರಿಂದ 2019 ರ ನಡುವೆ ಕನಿಷ್ಠ 198 “ಗಂಭೀರ ದಾಳಿಗಳು” ನಡೆದಿವೆ ಎಂದು ವರದಿಯಾಗಿದೆ. 2019 ರಲ್ಲಿಯೇ ಪತ್ರಕರ್ತರ ಮೇಲಿನ ದಾಳಿಯ 36 ಪ್ರಕರಣಗಳು ದಾಖಲಾಗಿವೆ.
ಇದು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪತ್ರಕರ್ತರನ್ನು ಅಧಿಕಾರದಿಂದ ನಿಯಂತ್ರಿಸಲಾಗುತ್ತಿದೆ. ಬಿಜೆಪಿಯ ಆಡಳಿತವನ್ನು, ಧೋರಣೆಗಳನ್ನು ಪ್ರಶ್ನಿಸುವ, ಟೀಕಿಸುವ, ಬಿಜೆಪಿಯ ದುರಾಡಳಿತವನ್ನು ಬಯಲಿಗೆಳೆಯುವ ಪತ್ರಕರ್ತರ ಮೇಲೆ ಹಿಂಸೆ, ಹಲ್ಲೆ, ದೂರು, ಪ್ರಕರಣಗಳನ್ನು ದಾಖಲಿಸಿ, ಅವರನ್ನು ನಿಯಂತ್ರಿಸುವ ಪ್ರಯತ್ನ ಹೆಗ್ಗಿಲ್ಲದೇ ಸಾಗಿದೆ ಎಂಬುದಕ್ಕೆ ನಿದರ್ಶನವಾಗಿದೆ.
ಇದನ್ನೂ ಓದಿ: ಭಾರತದ ಮಾಧ್ಯಮಗಳು ದ್ವೇಷಬಿತ್ತುವ ಟ್ರೋಲ್ ಫ್ಯಾಕ್ಟರಿಗಳು: ಬ್ರಿಟನ್ ಸಂಸದ

