ಹೊಸ ವರ್ಷದ ಆಚರಣೆಗೆ ಬ್ರೇಕ್ : ಭಾನುವಾರದೊಳಗೆ ನಿರ್ಬಂಧಗಳ ಮಾರ್ಗಸೂಚಿ ಪ್ರಕಟ!

ಬ್ರಿಟನ್ ರೂಪಾಂತರಿ ಕೊರೊನಾ ಆವಂತರ ಸೃಷ್ಟಿಯಾಗುವ ಸಾಧ್ಯತೆ ಹಿನ್ನೆಲೆ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಗುಂಪು ಸೇರಿ ಕ್ರಿಸ್ಮಸ್ ಆಚರಣೆಗೆ ನಿರ್ಬಂಧ ಹೇರಿ ಈ ಹಿಂದೆ ರಾತ್ರಿ ಕರ್ಫ್ಯೂ ಜಾರಿಗೆ ತಂದಿತ್ತು. ಆತುರಾತುರವಾಗಿ ಜಾರಿಗೆ ತಂದ ಕರ್ಫ್ಯೂ ಒಂದೇ ದಿನದಲ್ಲಿ ಮೂರನಾಲ್ಕು ಬಾರಿ ಬದಲಾವಣೆಗೊಂಡು ಜನರಿಗೆ ಕಾಮಿಡಿ ಕರ್ಫ್ಯೂ ಆಗಿತ್ತು. ಹೀಗಾಗಿ ಅದನ್ನ ರಾಜ್ಯ ಸರ್ಕಾರ ಮರು ದಿನವೇ ವಾಪಸ್ ಪಡೆದುಕೊಂಡಿದೆ.

ಸದ್ಯ ಹೊಸ ವರ್ಷದ ಆಚರಣೆಗೂ ನಿರ್ಬಂಧ ಹೇರುವ ಸಾಧ್ಯತೆ ದಟ್ಟವಾಗಿದೆ. ಬ್ರಿಟನ್ ನಿಂದ ಭಾರತಕ್ಕೆ ಬಂದ ಸಾವಿರಕ್ಕೂ ಹೆಚ್ಚು ಪ್ರಯಾಣಿಕರನ್ನು ಈಗಾಗಲೇ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರ ವರದಿಯನ್ನು ಕೇಂದ್ರವೇ ನಾಳೆ ಬಿಡುಗಡೆ ಮಾಡಲಿದೆ. ಬಳಿಕವಷ್ಟೇ ರೂಪಾಂತರ ಕೊರೊನಾ ರಾಜ್ಯಕ್ಕೆ ಕಾಲಿಟ್ಟಿದಿಯಾ ಅನ್ನೋ ವಿಚಾರ ಬಯಲಾಗಲಿದೆ. ಹೀಗಾಗಿ ರಾಜ್ಯದಲ್ಲಿ ಗುಂಪು ಸೇರುವ ಆಚರಣೆಗಳಿಗೆ ಬಹುತೇಕ ತಡೆವೊಡ್ಡಲು ಸರ್ಕಾರ ಚಿಂತಿಸುತ್ತಿದೆ.

ಸದ್ಯ ಹೀಗೆ ಗುಂಪು ಸೇರಿ ಆಚರಿಸಲ್ಪಡುವ ಹೊಸ ವರ್ಷ ಸಂಭ್ರಮಕ್ಕೆ ಪೊಲೀಸರ ಕಣ್ಗಾವಲು ಇರಲಿದೆ. ಮುಂದಿನ ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಹೆಚ್ಚಿನ ನಿರ್ಬಂಧಗಳ ಕುರಿತು ಮಾರ್ಗಸೂಚಿಗಳನ್ನು ನೀಡುವ ನಿರ್ದೇಶನಗಳು ಗೃಹ ಸಚಿವರಲ್ಲದೆ ಬೇರೆ ಯಾರಿಂದಲೂ ಬಂದಿಲ್ಲ. ಆದರೆ ನಗರ ಪೊಲೀಸರು ಡಿಸೆಂಬರ್ 31ಕ್ಕೆ ಯಾವ ರೀತಿಯ ಮಾರ್ಗ ಸೂಚಿಗಳು ಬಂದರು ಅನುಸರಿಸಲು ಕಾಯುತ್ತಿದ್ದಾರೆ.

ಮುಂದಿನ ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಹೆಚ್ಚಿನ ನಿರ್ಬಂಧಗಳ ಕುರಿತು ಮಾರ್ಗಸೂಚಿಗಳನ್ನು ನೀಡುವ ನಿರ್ದೇಶನಗಳು ಗೃಹ ಸಚಿವರಲ್ಲದೆ ಬೇರೆ ಯಾರಿಂದಲೂ ಬಂದಿಲ್ಲ. ಆದರೆ ನಗರ ಪೊಲೀಸರು ಡಿಸೆಂಬರ್ 31 ಕ್ಕೆ ಹತ್ತಿರವಾಗುವವರೆಗೆ ಕಾಯುತ್ತಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆಗೆ ಭಾನುವಾರದೊಳಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ನಿರ್ಬಂಧಗಳ ಕುರಿತು ಮಾರ್ಗಸೂಚಿ ನೀಡಲಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿರುವ ನಿರ್ದಿಷ್ಟ ರಸ್ತೆಗಳು ಅಥವಾ ಸ್ಥಳಗಳಲ್ಲಿ ಹೆಚ್ಚಿನ ನಿರ್ಬಂಧಗಳನ್ನು ಹೇರುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮೈ ಶುಕ್ರವಾರ ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights