ಬೆಳ್ಳಂಬೆಳಗ್ಗೆ ಅಪಘಾತ: ಬೆಂಗಳೂರಿಗೆ ಹೊರಟ ನಾಲ್ವರು ಮಸಣಕ್ಕೆ

ಭಾನುವಾರ ಮುಂಜಾನೆ ಸಂಭವಿಸಿದ ಭಾರೀ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ ಏಳಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದೆ.

ಚಿತ್ರದುರ್ಗದ ಮೊಳಕಾಲ್ಮೂರು ತಾಲೂಜಿನ ಬಿ.ಜಿ.ಕೆರೆ ಗ್ರಾಮದ ಸಮೀಪ ಬಸ್ – ಕ್ರೂಸರ್ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಮೃತರಾದವರನ್ನು ತಿಮ್ಮಣ್ಣ (40), ರತ್ನಮ್ನ (38), ಮಹೇಶ್ (19), ದುರ್ಗಪ್ಪ (16) ಎಂದು ಗುರುತಿಸಲಾಗಿದೆ.

ರಾಯಚೂರಿನ ಲಿಂಗಸಗೂರಿನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಕ್ರೂಸರ್ ಬೆಂಗಳೂರಿನಿಂದ ಹೊರಟಿದ್ದ ಬಸ್ ಗೆ ಢಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕ್ರೂಸರ್ ನ ಮೇಲ್ಭಾಗ ಕಿತ್ತು ಹೋಗಿದೆ.ಘಟನೆಯಲ್ಲಿ ಏಳಕ್ಕೆ ಹೆಚ್ಚು ಮಂದಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನ ಸ್ಥಳಕ್ಕೆ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೊಳಕಾಲ್ಮೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: ಕರ್ನಾಟಕದಲ್ಲಿ ಬ್ರಿಟನ್‌ ಕೊರೊನಾ ಭೀತಿ: ಆದರೂ ಜ. 1ರಿಂದ ಕಾಲೇಜುಗಳು ಕಡ್ಡಾಯವಾಗಿ ಓಪನ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights