ಕೊರೊನಾ ವಿಚಾರದ ಯಡವಟ್ಟಿಗೆ ಸುಧಾಕರ್‌ ಕಾರಣ: ಸಚಿವರ ಆರೋಪ

ಕೊರೊನಾ ವಿಚಾರವಾಗಿ ಹಲವು ಬಾರಿ ಆತುರದ ನಿರ್ಧಾರ ಕೈಗೊಂಡು ನಂತರ ಅದರಿಂದ ಹಿಂದೆ ಸರಿಯುವ ಮೂಲಕ ಸರಕಾರದ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ ಎಂದು ಹಲವು ಸಚಿವರು ಅಸಮಾಧಾನ ತೋಡಿಕೊಂಡಿದ್ದಾರೆ.

ಇದಕ್ಕೆ ಆರೋಗ್ಯ ಖಾತೆಯ ಹೊಣೆ ಹೊತ್ತಿರುವ ಸುಧಾಕರ್ ನೇರ ಹೊಣೆ ಎಂಬುದು ಸಂಪುಟದಲ್ಲಿ ಅವರ ಸಹೋದ್ಯೋಗಿಗಳಾಗಿರುವ ಸಚಿವರ ದೂರಾಗಿದೆ.ಕೊರೋನಾ ಶುರುವಾದಗಲಿಂದ ಲಾಗಾಯ್ತು ತಾವೇ ಅದಕ್ಕೆ ಸಂಬಂಧಿಸಿದ ವಕ್ತಾರರು ಎಂಬಂತೆ ವರ್ತಿಸುತ್ತಿರುವ ಸುಧಾಕರ್‍ ಹಲವು ಬಾರಿ ಸಿಎಂ ಅವರನ್ನೂ ದಿಕ್ಕು ತಪ್ಪಿಸಿ ಏಕಪಕ್ಷೀಯ ನಿರ್ಧಾರಗಳಿಗೆ ಕಾರಣರಾಗಿದ್ದಾರೆ.

ಸಿಎಂ ಯಡಿಯೂರಪ್ಪ ಅನೇಕ ಬಾರಿ ಮುಜುಗರಕ್ಕೆ ಈಡಾಗುವಂತಹ ಪರಿಸ್ಥಿತಿ ನಿರ್ಂಸಿದ್ದಕ್ಕಾಗಿ ಸುಧಾಕರ್‍ ಮೇಲೆ ಐವರು ಸಚಿವರು ಮುಗಿಬಿದ್ದಿದ್ದಾರೆ. ವೈದ್ಯಕೀಯ ಸಚಿವರಾಗಿದ್ದರೂ ಆರೋಗ್ಯ ಇಲಾಖೆಯಲ್‌ಇ ಮುಗು ತೂರಿಸಿದ್ದು ಮತ್ತು ಈಗ ಆರೋಗ್ಯ ಸಚಿವರಾಗಿದ್ದರೂ ಶಿಕ್ಷಣ ಇಲಾಖೆಯ ವಿಚಾರದಲ್ಲಿ ಅನಗತ್ಯವಾಗಿ ಬಾಯಿ ಬಿಡುವ ಸುಧಾಕರ್ ವಿರುದ್ಧ ಐವರು ಸಚಿವರು ಕೆಂಡ ಕಾರಿದ್ದಾರೆ.

ಅದರಲ್ಲಿಯೂ ರಾತ್ರಿ ಕರ್ಫ್ಯೂ ವಿಚಾರವಾಗಿ ಕೇವಲ 24 ಗಂಟೆಗಳಲ್ಲಿ ಮೂರು ಬಾರಿ ಮೂರು ರೀತಿ ನಿರ್ಧಾರ ಕೈಗೊಂಡಿದ್ದರು ಬಗ್ಗೆ ಈ ಸಚಿವರು ಕುದ್ದುಹೋಗಿದ್ದಾರೆ. ಇದಕ್ಕೆಲ್ಲ ಸುಧಾಕರ್ ಅವರೇ ಕಾರಣ. ಸಿಂಎಗೆ ಸರಿಯಾದ ಚಿತ್ರಣ ನೀಡದೇ ಅವರಿಂದ ಮಹತ್ವದ ನಿಧಾರಗಳನ್ನು ಪ್ರಕಟಿಸುವ ಗೀಳು ಇವರಿಗೆ ಹತ್ತಿಕೊಂಡಿರುವಂತಿದೆ ಎಂದು ಈ ಸಚಿವರು ಹೇಳಿಕೊಂಡಿದ್ದಾರೆ.

ಡಿಸಿಎಂ ಅಶ್ವತ್ಥ ನಾರಾಯಣ, ಅಶೋಕ, ಸುರೇಶ್ ಕುಮಾರ್, ಶ್ರೀರಾಮುಲು ಮತ್ತು ಬಸವರಾಜ ಬೊಮ್ಮಾಯಿ ನೇರವಾಗಿ ಮುಖ್ಯಮಂತ್ರಿಯ ಬಳಿಯೇ ಸುಧಾಕರ್ ಕುರಿತಾದ ತಮ್ಮ ಅಸಮಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ರಾತ್ರಿ ಕರ್ಫ್ಯೂ ವಿಚಾರವಾಗಿ ಆದ ಗೊಮದಲಗಳ ಬಗ್ಗೆ ಸಚಿವ ಸುಧಾಕರ್ ಸ್ಪಷ್ಟೀಕರಣ ನೀಡುವವರೆಗೆ ಪರಿಸ್ಥಿತಿ ಹೋಗಿದೆ. ನೈಟ್ ಕರ್ಫ್ಯೂ ನಿರ್ಧಾರವನ್ನು ಬಹಳ ವಿವೇಚನೆಯಿಂದಲೇ‌ ಕೈಗೊಳ್ಳಲಾಗಿತ್ತು. ಅದೇನೂ ರಾಜಕೀಯ ನಿರ್ಧಾರ ಅಲ್ಲ ಎಂದು ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರ ಯಾವುದೇ ರಾಜಕೀಯ ತೀರ್ಮಾನ ಕೈಗೊಂಡಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದವರ ಜೊತೆ ಕೂಲಕಂಷವಾಗಿ ಚರ್ಚಿಸಿ ಪ್ರತಿಯೊಂದು ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾತ್ರಿ ಕರ್ಫ್ಯೂ ಕುರಿತು ಕೂಡ ಹಲವಾರು ಬಾರಿ ಚರ್ಚಿಸಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತ ಎನಿಸಿದ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.


Read Also: ಕೃಷಿ ಕಾಯ್ದೆಗೆ ರೈತರು ಅವಕಾಶ ಕೊಡಬೇಕು: ಮೋದಿ ಪರ ಪುಂಗಿ ಊದಿದ ಹೆಚ್‌ಡಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights