BJPಯ ಮೇಲೆ RSS ಪಾತ್ರ ದುರ್ಬಲಗೊಂಡಿದೆಯೇ? ಪಕ್ಷದ ಪ್ರಮುಖ ಬದಲಾವಣೆಯಲ್ಲಿ ಸಂಘಕ್ಕಿಲ್ಲ ಪಾತ್ರ!

ಬಿಜಪಿಯು ಪಕ್ಷದೊಳಗೆ ಕೆಲವು ಪ್ರಮುಕ ಸಾಂಸ್ಥಿಕ ಬದಲಾವಣೆಗಳನ್ನು  ಮಾಡಿದೆ. ಸಂಸದೀಯ ಪಕ್ಷ ಮೇಲ್ವಿಚಾರಣೆ ಮತ್ತು ದಲಿತರ ಫಾಲೋಅಪ್‌ಗಾಗಿ ಹೊಸ ಹುದ್ದೆಯನ್ನು ಸೃಷ್ಟಿಸಿದ್ದು, ಅದರ ಸಂಯೋಜಕರಾಗಿ ಜಂಟಿ ಪ್ರಧಾನ ಕಾರ್ಯದರ್ಶಿ ವಿ ಸತೀಶ್ ಅವರನ್ನು ನೇಮಿಸಿದೆ.

ಕಾರ್ಯಕರ್ತರ ಮೇಲೆ ಪರಿಣಾಮ ಬೀರುವಂತಹ ಪಕ್ಷದೊಳಗಿನ ಬದಲಾವಣೆಗಳು, ಆರ್‌ಎಸ್‌ಎಸ್‌ನ ಪಾತ್ರವು ಕಡಿಮೆಯಾಗುತ್ತಿದೆ ಎಂಬುದನ್ನು ಸೂಚಿಸುತ್ತಿದೆ ಎನ್ನಲಾಗಿದೆ. ಆದರೆ ಸತೀಶ್ ಅವರಿಗೆ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ಸಂಸದೀಯ ಪಕ್ಷದ ಮೇಲ್ವಿಚಾರಣೆಯ ಹುದ್ದೆಯು ಹವಲು ಪ್ರಾತ್ರಗಳನ್ನು ನಿರ್ವಹಿಸಲಿದೆ. ಅವರು ಸಂಸದೀಯ ಪಕ್ಷ, ಎಸ್‌ಸಿ ಮೋರ್ಚಾ ಮತ್ತು ಬಿಜೆಪಿಯ ದಲಿತ ವಿಭಾಗದ ಅಭಿಯಾನಗಳೊಂದಿಗೆ ಸಮನ್ವಯ ಸಾಧಿಸಲಿದ್ದಾರೆ.

ಇದನ್ನೂ ಓದಿ: RSS ಕಾರ್ಯಕರ್ತರ ಮೇಲಿನ 46 ಕ್ರಿಮಿನಲ್‌ ಕೇಸ್‌ಗಳನ್ನು ಹಿಂಪಡೆದ ರಾಜ್ಯ ಸರ್ಕಾರ

ಜಂಟಿ ಪ್ರಧಾನ ಕಾರ್ಯದರ್ಶಿ ಸೌದನ್ ಸಿಂಗ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರು ಚಂಡೀಗಢದಲ್ಲಿ ನೆಲೆಸಲಿದ್ದಾರೆ. ಅಲ್ಲದೆ, ಹರಿಯಾಣ, ಪಂಜಾಬ್, ಚಂಡೀಗಢ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಪಕ್ಷದ ಚಟುವಟಿಗಳ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. ರಾಜಕೀಯ ಸವಾಲುಗಳನ್ನು ಎದುರಿಸುತ್ತಿರುವ ಬಿಜೆಪಿಗೆ ಈ ರಾಜ್ಯಗಳು ಮುಖ್ಯವಾಗಿವೆ. ಮತ್ತೊಬ್ಬ ಜಂಟಿ ಪ್ರಧಾನ ಕಾರ್ಯದರ್ಶಿ ಶಿವ ಪ್ರಕಾಶ್ ಅವರ ಕಾರ್ಯಕ್ಷೇತ್ರವನ್ನೂ ವಿಸ್ತರಿಸಲಾಗಿದೆ. ಅವರು ಭೋಪಾಲ್ ಮೂಲದವರಾಗಿದ್ದು, ಮಧ್ಯಪ್ರದೇಶ, ಚತ್ತೀಸ್‌ಘಡ್, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ಬಂಗಾಳ ರಾಜ್ಯಗಳಲ್ಲಿ ಬಿಜೆಪಿಯ ಚಟುವಟಿಗಳನ್ನು ನೋಡಿಕೊಳ್ಳಲಿದ್ದಾರೆ.

ಬಿಜೆಪಿಯ ಮೇಲೆ ಸಾಕಷ್ಟು ಪ್ರಭಾವ ಹೊಂದಿರುವ ಆರ್‌ಎಸ್‌ಎಸ್‌ನ ಪ್ರಾತ್ರ ಈ ಬಡಲಾವಣೆಗಳಲ್ಲಿ  ಕಂಡುಬಂದಿಲ್ಲ. ಆರ್‌ಎಸ್‌ಎಸ್‌ ಪಾತ್ರವನ್ನು ಪಕ್ಷದಲ್ಲಿ ಸಾಧಾರಣಗೊಳಿಸುವ ಬಗ್ಗೆ ಪಿಎಂ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ: BJP ಮತ್ತು RSS ಸಿಖ್‌ ಸಮುದಾಯವನ್ನು ಮುಗಿಸಲು ಯತ್ನಿಸುತ್ತಿದೆ: ಅತ್ಮಹತ್ಯಾ ಟಿಪ್ಪಣಿಯಲ್ಲಿ ಧರ್ಮಗುರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights