ಹರಿಯಾಣದಲ್ಲಿ BJP ಸೋಲಲು ರಜಾ ದಿನಗಳೇ ಕಾರಣ: ಬಿಜೆಪಿ ನಾಯಕ
ಹರಿಯಾಣದ ಅಂಬಾಲಾದಲ್ಲಿ ಬಿಜೆಪಿ ಸೋಲು ಕಂಡಿದ್ದು, ಮೇಯರ್ ಹುದ್ದೆಯನ್ನು ಕಳೆದುಕೊಂಡಿದೆ. ಇಲ್ಲಿನ ಸೋಲಿಗೆ ಮತದಾರರು ರಜೆಯಲ್ಲಿದ್ದದ್ದೇ ಕಾರಣ ಎಂದು ಬಿಜೆಪಿ ವಕ್ತಾರರೊಬ್ಬರು ಹೇಳಿದ್ದಾರೆ.
ಅಂಬಾಲದ ಪ್ರಮುಖ ಮತದಾರರು ರಜಾದಿನಗಳಲ್ಲಿದ್ದರು. ಅವರು ರಜೆಯಿಂದಾಗಿ ಊರು ಬಿಟ್ಟು ಹೊರಗೆ ಹೋಗಿದ್ದರು. ಹಾಗಾಗಿ ಕಡಿಮೆ ಮತದಾನವಾಗಿದ್ದು, ಪಕ್ಷ ಸೋತಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಸಂಜಯ್ ಶರ್ಮಾ ಹೇಳಿದ್ದಾರೆ.
ಬ್ಯಾಂಕ್ ಅನ್ನು ನಗರ ಪಾಕೆಟ್ಗಳಲ್ಲಿ ರೂಪಿಸುವ ಅನೇಕ ಮತದಾರರು ರಜಾದಿನಗಳಲ್ಲಿ ಹೊರಟರು ಮತ್ತು ಇದು ಕಡಿಮೆ ಮತದಾನವಾಗಿದೆ.
ಅಂಬಾಲಾ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಶೇಕಡಾ 56.3 ರಷ್ಟು ಮತದಾನವಾಗಿದೆ. ಇಲ್ಲಿ 2013 ರಲ್ಲಿ ಶೇ. 67 ರಷ್ಟು ಮತದಾನವಾಗಿತ್ತು ಎಂದು ಅವರು ಹೇಳಿದ್ದಾರೆ.
ದೆಹಲಿ ಮತ್ತು ಹರಿಯಾಣಕ್ಕೆ ಹೊಂದಿರುವ ಗಡಿ ಭಾಗದಲ್ಲಿ ಕೃಷಿ ನೀತಿಗಳ ವಿರುದ್ಧ ನಡೆಯುತ್ತಿರುವ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಂಬಾನಿ ಪರನಿಂತ ಪ್ರಧಾನಿ ಮೋದಿ? ರೈತರ ಬಾಯ್ಕಾಟ್ ಜಿಯೋಗೆ ಪರೋಕ್ಷವಾಗಿ ವಿರೋಧ!
ಈ ಹಿನ್ನಲೆಯಲ್ಲಿ, ಹರಿಯಾಣದಲ್ಲಿ ನಡೆದ ಚುನಾವನೆಯಲ್ಲಿ ಆಡಳಿತಾರೂಢ ಬಿಜೆಪಿ-ಜೆಜೆಪಿ ಮೈತ್ರಿಯು ಒಂದು ಮುನ್ಸಿಪಾಲಿಟಿಯಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಉಳಿದ ಮುನ್ಸಿಪಾಲಿಟಿಗಳಲ್ಲಿ ಹೀನಾಯವಾಗಿ ಸೋತಿದೆ.
ಪಂಚಕುಲದಲ್ಲಿ ಮಾತ್ರ ಬಿಜೆಪಿ ಗೆಲ್ಲಲು ಸಾಧ್ಯವಾದರೆ, ಕಾಂಗ್ರೆಸ್ ಮತ್ತು ಹರಿಯಾಣ ಜಾನ್ ಚೆಟ್ನಾ ಪಕ್ಷ (ಎಚ್ಜೆಸಿಪಿ) ಕ್ರಮವಾಗಿ ಸೋನಿಪತ್ ಮತ್ತು ಅಂಬಾಲಾದಲ್ಲಿ ಮೇಯರ್ ಹುದ್ದೆಗಳನ್ನು ಪಡೆದಿವೆ.
2018 ರಲ್ಲಿ ಹರಿಯಾಣದ ಹಿಸಾರ್, ಕರ್ನಾಲ್, ಪಾಣಿಪತ್, ರೋಹ್ಟಕ್ ಮತ್ತು ಯಮುನಾನಗರ್ ಮುನ್ಸಿಪಾಲಿಟಿಗಳಲ್ಲಿ ಬಿಜೆಪಿಯ ಮೈತ್ರಿ ಗೆಲವು ಸಾಧಿಸಿತ್ತು. ಆದರೆ, ಇದೀಗ ಆಡಳಿತಾರೂಢ ಮೈತ್ರಿ ಹಿನ್ನಡೆ ಅನುಭವಿಸಿದೆ.
ಇದನ್ನೂ ಓದಿ: ಕಪಿಲ್ ಗುಜ್ಜರ್ BJP ಸೇರ್ಪಡೆ ಮತ್ತು ಉಚ್ಚಾಟನೆ; ಬಿಜೆಪಿಯ ಇಂಥದ್ದೇ ಯಡವಟ್ಟುಗಳು ಹೀಗಿವೆ!

