Fact Check: ಕೇರಳದಲ್ಲಿ ಜಿಯೋ ಇಂಟರ್ನೆಟ್ ಸೇವೆ ನಿಷೇಧ..?

ದೆಹಲಿ ಗಡಿ ಭಾಗದಲ್ಲಿ ರೈತರ ಆಂದೋಲನದ ಮಧ್ಯೆ ಕೇರಳ ವಿಧಾನಸಭೆಯು ಡಿಸೆಂಬರ್ 31 ರ ಗುರುವಾರ ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದೆ.

ಜೊತೆಗೆ ಕೇರಳ ಸರ್ಕಾರ 2021 ರಿಂದ ರಾಜ್ಯದಲ್ಲಿ ರಿಲಯನ್ಸ್ ಜಿಯೋ ಕಾರ್ಯಾಚರಣೆಯನ್ನು ನಿಷೇಧಿಸಲು ನಿರ್ಧರಿಸಿದೆ ಎಂಬ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪಿನಾರೈ ವಿಜಯನ್ ಸರ್ಕಾರ ಮೊಬೈಲ್ ಫೋನ್‌ಗಳಿಗೆ ಜಿಯೋ ಬೆಲೆಯ ಅರ್ಧದಷ್ಟು ಸರ್ಕಾರಿ ಸ್ವಾಮ್ಯದ ನೆಟ್‌ವರ್ಕ್ ಒದಗಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ.

ಆದರೆ ವೈರಲ್ ಆದ ಈ ಹೇಳಿಕೆ ತಪ್ಪಾಗಿ ಹಂಚಿಕೊಳ್ಳಲಾಗಿದ್ದು, ಕೇರಳ ಸರ್ಕಾರ ಜಿಯೋವನ್ನು ನಿಷೇಧಿಸಿಲ್ಲ ಅಥವಾ ಸರ್ಕಾರಿ ಸ್ವಾಮ್ಯದ ಇಂಟರ್ನೆಟ್ ಸೇವೆಯನ್ನು ಪ್ರಾರಂಭಿಸಿಲ್ಲ. ಕೇರಳದ ಪ್ರಮುಖ ಮಾಧ್ಯಮ ಸಂಸ್ಥೆಗಳಿಂದಲೂ ಅಂತಹ ಯಾವುದೇ ವರದಿ ಕಂಡುಬಂದಿಲ್ಲ.

ನವೆಂಬರ್ 2, 2020 ರಂದು “ಮಿಂಟ್” ಪ್ರಕಟಿಸಿದ ವರದಿಯ ಪ್ರಕಾರ, ಕೇರಳ ಸರ್ಕಾರ ತನ್ನ ಯೋಜನೆ ‘ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್’ (ಕೆಎಫ್‌ಒಎನ್) ಮೂಲಕ ಸರ್ಕಾರಿ ಸಂಸ್ಥೆಗಳಿಗೆ ಮತ್ತು ಬಡತನ ರೇಖೆಗಿಂತ ಕೆಳಗಿರುವ ಎರಡು ದಶಲಕ್ಷ ಕುಟುಂಬಗಳಿಗೆ ಉಚಿತ ಇಂಟರ್ನೆಟ್ ಒದಗಿಸಲು ಯೋಜಿಸಿದೆ.

ಕೆಎಫ್‌ಒಎನ್ ಭಾರತ ಸರ್ಕಾರದ ‘ಭಾರತ್‌ನೆಟ್’ ಯೋಜನೆಗೆ ಹೋಲುತ್ತದೆ. ಆದರೆ ಕೇರಳ ಸರ್ಕಾರಿ ಸ್ವಾಮ್ಯದ ನೆಟ್‌ವರ್ಕ್ ಸೇವೆಯನ್ನು ಪ್ರಾರಂಭಿಸುವ ಕುರಿತು ಯಾವುದೇ ವರದಿ ಕಂಡುಬಂದಿಲ್ಲ.

“ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್” ನ ವರದಿ ಪ್ರಕಾರ ಕೇರಳದಲ್ಲಿ ತಡೆರಹಿತ ಬ್ಯಾಂಡ್‌ವಿಡ್ತ್ ಸಂಪರ್ಕವನ್ನು ಒದಗಿಸಲು ಖಾಸಗಿ ಇಂಟರ್ನೆಟ್ ಸೇವಾ ಪೂರೈಕೆದಾರರಾದ (ಐಎಸ್‌ಪಿ) ರಿಲಯನ್ಸ್ ಜಿಯೋ, ಬಿಎಸ್‌ಎನ್‌ಎಲ್ ಮತ್ತು ಏರ್‌ಟೆಲ್‌ಗಳೊಂದಿಗೆ ಪಾಲುದಾರಿಕೆ ಹೊಂದುವ ನಿರೀಕ್ಷೆಯಿದೆ.

ಈ ವಿಷಯದ ಬಗ್ಗೆ ಹೆಚ್ಚಿನ ಸ್ಪಷ್ಟತೆಗಾಗಿ  ಕೇರಳದ ಐಟಿ ಕಾರ್ಯದರ್ಶಿ ಮೊಹಮ್ಮದ್ ವೈ ಸಫಿರುಲ್ಲಾ ಅವರನ್ನು ಸಂಪರ್ಕಿಸಿದಾಗ, “ರಾಜ್ಯ ಸರ್ಕಾರಗಳು ಯಾವುದೇ ಟೆಲಿಕಾಂ ನೆಟ್ವರ್ಕ್ ಅನ್ನು ನಿಷೇಧಿಸಲು ಸಾಧ್ಯವಿಲ್ಲ. ಎಲ್ಲಾ ಟೆಲಿಕಾಂ ಪೂರೈಕೆದಾರರು ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಕೆಎಫ್‌ಒಎನ್ ಕೇವಲ ಕೇರಳ ಸರ್ಕಾರದ ಯೋಜನೆಯಾಗಿದ್ದು, ರಾಜ್ಯದಾದ್ಯಂತ ಆಪ್ಟಿಕಲ್ ಫೈಬರ್ ಸಂಪರ್ಕವನ್ನು ಒದಗಿಸುತ್ತದೆ. ಇದು ಖಾಸಗಿ ನೆಟ್‌ವರ್ಕ್ ಪೂರೈಕೆದಾರರಿಗೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ”ಎಂದು ಹೇಳಿದ್ದಾರೆ.

ಆದ್ದರಿಂದ ಕೇರಳ ಸರ್ಕಾರ ರಾಜ್ಯದಲ್ಲಿ ಜಿಯೋ ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಿದೆ ಎಂಬ ವೈರಲ್ ಹೇಳಿಕೆ ಸುಳ್ಳು ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಕೇರಳ ಸರ್ಕಾರಿ ಸ್ವಾಮ್ಯದ ಇಂಟರ್ನೆಟ್ ಸಂಪರ್ಕ ಅಥವಾ ಮೊಬೈಲ್ ಫೋನ್‌ಗಳನ್ನು ನೀಡುತ್ತಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights