Fact check | ರಾಜ್ಯ ಸರ್ಕಾರ ಅಂಗನವಾಡಿ ಹುದ್ದೆಗಳಿಗೆ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿದೆ ಎಂಬುದು ಸುಳ್ಳು

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ‘ಉರ್ದು ಭಾಷೆ’ ಗೊತ್ತಿರುವುದನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕಡ್ಡಾಯಗೊಳಿಸಿದೆ ಎಂಬ ಸುದ್ದಿಯೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಉರ್ದು ಬಲ್ಲವರಿಗೆ ಮಾತ್ರ ಕೆಲಸ ಕರ್ನಾಟಕದಲ್ಲಿ ಘಾಜ್ವ-ಎ-ಹಿಂದ್‌ ಶುರು” ಎಂಬ ಶೀರ್ಷೆಕೆಯೊಂದಿಗೆ ಸಂವಾದ ಎಂಬ ರೈಟ್‌ವಿಂಗ್ ಸೋಶಿಯಲ್ ಮೀಡಿಯಾ ವಿಡಿಯೋವನ್ನು ಹಂಚಿಕೊಂಡಿದೆ. ಕರ್ನಾಟಕ ಸರ್ಕಾರ ಮುಸ್ಲಿಂ ಓಲೈಕೆಗಾಗಿ ಉರ್ದು ಭಾಷೆಯ ಮೇಲೆ ಪ್ರೀತಿ ಹರಿಸುತ್ತಿದೆ. ಆ ಮೂಲಕ ಸಿದ್ದರಾಮಯ್ಯ ಸರ್ಕಾರ ಕನ್ನಡ ವಿರೋದಿ ಎಂದು ಬಿಂಬಿಸಿ ಪೋಸ್ಟ್‌ ಹಂಚಿಕೊಂಡಿರುವುದನ್ನು ಕಾಣಬಹುದು.

ತುಮಕೂರು ನಗರ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂಬ ಪತ್ರಿಕೆಯ ಪ್ರಕಟಣೆಯೊಂದನ್ನು ಮುಂದಿಟ್ಟುಕೊಂಡು ‘Accidental Bhakth‘ಎಂಬ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಮಹಾನಗರ ಪಾಲಿಕೆ ಮೇಲೆ ಉರ್ದು ಬೋರ್ಡ್ ಇರಲೇ ಬೇಕು, ಕನ್ನಡ ಪರ ಬೋರ್ಡ್ ಹಾಕಿ ಅಂದವರನ್ನು ಒದ್ದು ಒಳಗೆ ಹಾಕಿದ್ದಾಯಿತು, ಕನ್ನಡರಾಮಯ್ಯ ಅಂತ ಅವನಿಗೆ ಮೆರವಣಿಗೆ ಮಾಡಿದ ಹೇಲಾಟಗಾರರ ಆತ್ಮಕ್ಕೆ ಎರಡು ನಿಮಿಷ ಮೌನಾಚರಣೆ ಮಾಡೋಣ ಬ್ರದರ್” ಎಂದು ಬರೆದುಕೊಂಡು ಮೇಲಿನ ಸುದ್ದಿಯ ಪತ್ರಿಕಾ ವರದಿ ಹಂಚಿಕೊಳ್ಳಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ತುಮಕೂರು ಉಪ ನಿರ್ದೇಶಕರ ಕಚೇರಿಯಿಂದ ಇಂತಹ ಪ್ರಕಟಣೆಯನ್ನು ಹೊರಡಿಸಿರುವುದು ನಿಜವೇ? ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆ ಮ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ ಪತ್ರಿಕೆಯಕಟ್ಟಿಂಗ್ಸ್‌ಗಳನ್ನು ಕಾಣಬುದಾಗಿದೆ. ಈ ಸುದ್ದಿಯನ್ನು ಪರಿಶೀಲಿಸಲು ತುಮಕೂರಿನ ಮಹಿಳಾ ಮತ್ತು ಮಕ್ಕಳ ಾಭಿವೃದ್ದಿ ಇಲಾಖೆಯ ಡಿಡಿ ಯವರನ್ನು ಮಾತನಾಡಿಸಿ ವಾಸ್ತವವೇನೆಂದು ತಿಳಿದುಬಂದಿದೆ.

ಸರ್ಕಾರ ಅಥವಾ ತುಮಕೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿಜವಾಗಿಯೂ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿದೆಯಾ? ಎಂಬ ಸತ್ಯವನ್ನು ನಾವು ಹೊರಗೆಳೆದಿದ್ದೇವೆ.

ಉಪ ನಿರ್ದೇಶಕರಾದ ಚಿದಾನಂದ ಅವರು ನೀಡಿದ ಮಾಹಿತಿ ಪ್ರಕಾರ, ಪ್ರಸ್ತುತ ಅಂಗನವಾಡಿ ಹುದ್ದೆಗಳ ಭರ್ತಿಗೆ 2022ರ ಡಿಸೆಂಬರ್ ತಿಂಗಳಲ್ಲಿ ಅಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನೀಡಿದ ಆದೇಶದಂತೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರದ ಆದೇಶದ ಪ್ರಕಾರ ರಾಜ್ಯದ ಯಾವುದೇ ಪ್ರದೇಶದ ಅಂಗನವಾಡಿಗಳಿಗೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ನೇಮಕ ಮಾಡಿಕೊಳ್ಳುವಾಗ, ‘ಆ ಪ್ರದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಜನಸಂಖ್ಯೆಯ ಶೇ.25ರಷ್ಟು ಜನರು ಮಾತನಾಡುವ ಭಾಷೆ’ ಅರ್ಜಿ ಸಲ್ಲಿಸುವವರಿಗೆ ಗೊತ್ತಿರಬೇಕು.

ಮುಸ್ಲಿಮರು ಹೆಚ್ಚಿರುವ ಪ್ರದೇಶಗಳ ಅಂಗನವಾಡಿಗಳಿಗೆ ಕಾರ್ಯಕರ್ತೆಯರನ್ನು ನೇಮಿಸಿಕೊಳ್ಳುವಾಗ ಅವರಿಗೆ ಕನ್ನಡದ ಜೊತೆಗೆ ಉರ್ದು ಭಾಷೆ ಗೊತ್ತಿರಬೇಕು. ಕ್ರೈಸ್ತ ಸಮುದಾಯದ ಜನರು ಹೆಚ್ಚಿರುವ ಪ್ರದೇಶಗಳ ಅಂಗನವಾಡಿಗೆ ನೇಮಿಸಿಕೊಳ್ಳುವುದಾದರೆ ಅವರಿಗೆ ಕ್ರೈಸ್ತರು ಮಾತನಾಡುವ ಕೊಂಕಣಿಯೋ ಇತರ ಯಾವುದೇ ಭಾಷೆ ತಿಳಿದಿರಬೇಕು.

ಇಲ್ಲಿ ಕನ್ನಡದ ಜೊತೆಗೆ ಉರ್ದು ಮಾತ್ರ ಗೊತ್ತಿರಬೇಕು ಎಂದು ಎಲ್ಲೂ ಕಡ್ಡಾಯ ಮಾಡಿಲ್ಲ. ಅಂಗನವಾಡಿ ಇರುವ ಪ್ರದೇಶದ ಜನ ಸಂಖ್ಯೆಯ ಶೇ.25ರಷ್ಟು ಅಲ್ಪ ಸಂಖ್ಯಾತರು ಮಾತನಾಡುವ ಭಾಷೆ ಗೊತ್ತಿರಬೇಕು ಎಂದು ಹೇಳಲಾಗಿದೆ. ಆ ಭಾಷೆ ಉರ್ದು, ಕೊಂಕಣಿ, ಪಂಜಾಬಿ ಇತರ ಯಾವುದೂ ಆಗಿರಬಹುದು. ಇಲ್ಲಿ ಕನ್ನಡ ಗೊತ್ತಿರಬೇಕೆನ್ನುವುದು ಮೊದಲ ಆದ್ಯತೆಯಾಗಿದೆ. ನಂತರ ಇತರ ಭಾಷೆಗಳು ತಿಳಿದಿರಬೇಕು ಎಂದು ಹೇಳಲಾಗಿದೆ.

ತುಮಕೂರಿನಲ್ಲಿ ಕನ್ನಡ ಜೊತೆ ಉರ್ದು ಭಾಷೆಯನ್ನೇ ಯಾಕೆ ಕಡ್ಡಾಯ ಮಾಡಲಾಗಿದೆ?

ತುಮಕೂರು ನಗರ ವ್ಯಾಪ್ತಿಯ 11 ವಾರ್ಡ್‌ಗಳ ವಿವಿಧ ಪ್ರದೇಶಗಳ ಅಂಗನವಾಡಿಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಅರ್ಜಿ ಸಲ್ಲಿಸುವವರಿಗೆ ಕನ್ನಡದ ಜೊತೆ ಉರ್ದು ಭಾಷೆ ತಿಳಿದಿರಬೇಕು ಎಂದು ಹೇಳಲಾಗಿದೆ.

ಚಿದಾನಂದ ಅವರು ನೀಡಿದ ಮಾಹಿತಿ ಪ್ರಕಾರ, ಮೇಲೆ ಅರ್ಜಿ ಆಹ್ವಾನಿಸಿರುವ ತುಮಕೂರಿನ 11 ವಾರ್ಡ್‌ಗಳ ಎಲ್ಲಾ ಅಂಗನವಾಡಿಗಳು ಕೂಡ ಅಲ್ಪಸಂಖ್ಯಾತ ವರ್ಗದ ಮುಸ್ಲಿಂ ಸಮುದಾಯದ ಜನರು ಹೆಚ್ಚಾಗಿ ಇರುವ ಪ್ರದೇಶಗಳದ್ದಾಗಿವೆ. ಮುಸ್ಲಿಮರು ಉರ್ದು ಭಾಷೆ ಮಾತನಾಡುವ ಕಾರಣ, ಸರ್ಕಾರದ ನಿಯಮದಂತೆ ಕನ್ನಡದ ಜೊತೆ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಒಂದು ವೇಳೆ ಕೊಂಕಣಿ ಮಾತನಾಡುವವರು ಹೆಚ್ಚಿದ್ದರೆ, ಕನ್ನಡದ ಜೊತೆ ಅವರ ಭಾಷೆಯನ್ನು ಕಡ್ಡಾಯಗೊಳಿಸಲಾಗುತ್ತಿತ್ತು.

Image

 

ದಿನಾಂಕ 3 ಡಿಸೆಂಬರ್ 2022ರಂದು ಮಹಿಳಾ ಮತ್ತು ಮಕ್ಕಳ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರ ಇಲಾಖೆಯ ಅಂದಿನ ಸರ್ಕಾರದ ಅಧೀನ ಕಾರ್ಯದರ್ಶಿ ನಿರ್ಮಲಾ ಎಸ್‌ ಖಟಾವರ್‌ಕರ್‌ ಅವರ ಹೆಸರಿನಲ್ಲಿ ಹೊರಡಿಸಲಾಗಿದ್ದ ಸುತ್ತೋಲೆಯ ಪ್ರತಿಯನ್ನು ನೋಡಬಹುದು.

Image

ಈ ಎಲ್ಲ ಮಾಹಿತಿ ಆಧಾರದಲ್ಲಿ ಹೇಳುವುದಾದರೆ, ರಾಜ್ಯ ಸರ್ಕಾರದ ಆದೇಶದಂತೆ ತುಮಕೂರು ನಗರ ವ್ಯಾಪ್ತಿಯ 11 ವಾರ್ಡ್‌ ವ್ಯಾಪ್ತಿಯ ಅಂಗನವಾಡಿಗಳಿಗೆ ಕಾರ್ಯರ್ತೆಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಮುಸ್ಲಿಂ ಜನ ಸಂಖ್ಯೆ ಹೆಚ್ಚಿರುವ ಪ್ರದೇಶವಾದ್ದರಿಂದ ಕನ್ನಡದ ಜೊತೆ ಉರ್ದು ಭಾಷೆ ಕಡ್ಡಾಯಗೊಳಿಸಲಾಗಿದೆ. ಇಲ್ಲಿ ಮುಸ್ಲಿಮರನ್ನು ಓಲೈಸುವ ಕಾರಣಕ್ಕೆ ರಾಜ್ಯ ಸರ್ಕಾರ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿದೆ ಎಂಬುದು ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : Fact Check | ಹೌದು! KRS ಅಣೆಕಟ್ಟು ಆರಂಭಿಸಿದ್ದು ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights