ತಮ್ಮ ಪುಸ್ತಕದಲ್ಲಿ ಮೋದಿ ಬಗ್ಗೆ ಪ್ರಣಬ್‌ ಪ್ರಸ್ತಾಪ: ಹೇಳಿರುವುದೇನು ಓದಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ನಿಧನರಾದ ಬಳಿಕ ಅವರು ಬರೆದಿದ್ದ ಆತ್ಮಕಥನ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ, ಸೋನಿಯಾ ಗಾಂಧಿ ಮತ್ತು ರಾಹುಲ್‌ಗಾಂಧಿಯ ಬಗ್ಗೆ ಅವರು ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿರುವುದು ಚರ್ಚೆಯನ್ನು ಉಂಟು ಮಾಡಿತ್ತು. ಇದೀಗ ಅವರ ಪುಸ್ತಕದಲ್ಲಿ ಪ್ರಧಾನಿ ಮೋದಿಯ ಬಗ್ಗೆಯೂ ಬರೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಿನ್ನಮತೀಯರ ಮಾತುಗಳನ್ನು ಕೇಳಬೇಕು. ಸಂಸತ್ತಿನಲ್ಲಿ ಹೆಚ್ಚೆಚ್ಚು ಮಾತನಾಡಬೇಕು, ವಿರೋಧ ಪಕ್ಷದವರಿಗೆ ಮನದಟ್ಟು ಮಾಡಲು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಲು ಸಂಸತ್ತಿನ ವೇದಿಕೆಯನ್ನು ಅವರು ಸರಿಯಾಗಿ ಬಳಸಿಕೊಂಡು ದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸಬೇಕು ಎಂದು ಬರೆದಿರುವುದಾಗಿ ತಿಳಿದು ಬಂದಿದೆ.

ಪ್ರಧಾನ ಮಂತ್ರಿಗಳು ಭೌತಿಕವಾಗಿ ಸಂಸತ್ತಿನಲ್ಲಿ ಹಾಜರಿದ್ದರೂ ಅದರಿಂದ ಸಾಕಷ್ಟು ಬದಲಾವಣೆಯನ್ನು ತರಬಹುದು, ಅದು ಜವಹರಲಾಲ್ ಆಗಿರಲಿ, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಅಥವಾ ಡಾ ಮನಮೋಹನ್ ಸಿಂಗ್ ಅವರಾಗಿರಲಿ ಪ್ರತಿಯೊಬ್ಬರೂ ಮಾಜಿ ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ತಮ್ಮ ಇರುವಿಕೆಯ ಅಗತ್ಯವನ್ನು ತೋರಿಸಿಕೊಟ್ಟಿದ್ದಾರೆ ಎಂದು ಅವರು ಬರೆದಿದ್ದಾರೆ.

ಪ್ರಧಾನ ಮಂತ್ರಿಯವರು ಈಗ ತಮ್ಮ ಎರಡನೇ ಅವಧಿಯಲ್ಲಿ ತಮ್ಮ ಹಿಂದಿನ ಪ್ರಧಾನ ಮಂತ್ರಿಗಳ ಕಾರ್ಯವೈಖರಿಯಿಂದ ಸ್ಪೂರ್ತಿ ಪಡೆದುಕೊಂಡು ಪ್ರಬಲ ನಾಯಕತ್ವ ನೀಡಿ, ತಮ್ಮ ಇರುವಿಕೆಯನ್ನು ಸಂಸತ್ತಿನಲ್ಲಿ ತೋರಿಸಿಕೊಡುವ ಮೂಲಕ ಮೊದಲ ಅವಧಿಯಲ್ಲಿ ಆದಂತೆ ಸಂಸತ್ತಿನ ಬಿಕ್ಕಟ್ಟು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ಪ್ರಣಬ್ ಮುಖರ್ಜಿಯವರು ತಮ್ಮ ಆತ್ಮಚರಿತ್ರೆ ‘ಪ್ರಸೆಡೆನ್ಷಿಯಲ್ ಇಯರ್ಸ್, 2012-2017’ ಪುಸ್ತಕದಲ್ಲಿ ಬರೆದಿದ್ದಾರೆ.

ರೂಪ ಪಬ್ಲಿಕೇಷನ್ ಬರೆದಿರುವ ಪುಸ್ತಕ ನಿನ್ನೆ ಬಿಡುಗಡೆಯಾಗಿದೆ.


ಇದನ್ನೂ ಓದಿ: 2014ರ ಚನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಸೋನಿಯಾಗಾಂಧಿ ಕಾರಣ; ಆತ್ಮಕತೆಯಲ್ಲಿ ಪ್ರಣಬ್ ಮುಖರ್ಜಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights