ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ ಕೆಜಿಎಫ್-2 : ಟೀಸರ್ ಗೆ ಫ್ಯಾನ್ಸ್ ಫಿದಾ!

ಕೊರೊನಾದಿಂದ ಸಪ್ಪೆಯಾಗಿದ್ದ ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಮತ್ತೆ ಜೀವ ಕಳೆ ಬಂದಿದೆ. ಇದಕ್ಕೆ ಸಾಕ್ಷಿಯಾಗಿದ್ದು ಕೆಜಿಎಫ್-2 ಸಿನಿಮಾ. ರಾಖಿ ಬಾಯಿ ಯಶ್ ಅಭಿನಯದ ಕೆಜಿಎಫ್-2 ಸಿನಿಮಾದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಟೀಸರ್ ಗೆ ಫಿದಾ ಆಗಿದ್ದಾರೆ.

ಹೌದು… ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -2 ಟೀಸರ್ ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಬಿಡುಗಡೆಯಾದ 24 ಗಂಟೆಗಳಲ್ಲಿ 78 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ನೂರು ಮಿಲಿಯನ್ ನತ್ತ ಸಾಗಿದೆ.

ಟೀಸರ್ ನೋಡಿದ ಅಭಿಮಾನಿಗಳು ರಾಖಿ ಬಾಯ್ ಸ್ಮೋಕಿಂಗ್ ಸ್ಟೈಲ್ ಗೆ ಮಾರು ಹೋಗಿದ್ದಾರೆ. ಯೂಟ್ಯೂಬ್ ನಲ್ಲಿ ಕೆಜಿಎಫ್ ಚಾಪ್ಟರ್ -2 ಟೀಸರ್ ನದ್ದೇ ಹವಾ ಕ್ರಿಯೇಟ್ ಆಗಿದೆ. ಗುರುವಾರ ರಾತ್ರಿ 9-29ಕ್ಕೆ  ಬಿಡುಗಡೆಯಾದ ಈ ಟೀಸರ್ ಇಲ್ಲಿಯವರೆಗೂ 5, 068, 514 ಲೈಕ್, 3,89,703 ಕಾಮೆಂಟ್ ಗಳೊಂದಿಗೆ 88,274,228 ವೀಕ್ಷಣೆಯನ್ನು ಪಡೆದುಕೊಂಡಿದೆ.

ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆಯಾಗಿದ್ದು ಇದು ಹುಟ್ಟುಹಬ್ಬದ ಭಾರೀ ದೊಡ್ಡ ಉಡುಗೊರೆಯಂದು ಯಶ್ ಹೇಳಿಕೊಮಡಿದ್ದಾರೆ. ಯಶ್ ಸ್ಮೋಕಿಂಗ್ ಸ್ಟೈಲ್ ಟೀಸರ್ ನಲ್ಲಿ ಹೈಲೆಟ್ ಆಗಿದ್ದು ಯೂ ಟ್ಯೂಬ್ ನಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ದಾಖಲೆಗಳನ್ನು ಮಕಾಡೆ ಮಲಗಿಸಿದೆ.

100 ಮಿಲಿಯನ್ ಗಡಿಯತ್ತಾ ಇರುವ ಈ ಟೀಸರ್ ಗೆ ಸ್ಯಾಂಡಲ್ ವುಡ್ ಸೇರಿದಂತೆ ದೇಶ, ವಿದೇಶದ ಚಿತ್ರೋದ್ಯಮದ ಗಣ್ಯರಿಂದ ಪ್ರಶಂಸೆಗೊಳಗಾದ ಟೀಸರ್ ತೆಮಿಳಿನ ಮಾಸ್ಟರ್, ಹಾಲಿವುಡ್ ನ ಅವೆಂಜರ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಮುರುದಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights