ವೇಗದ ತಂತ್ರಜ್ಞಾನ ವಾತಾವರಣದಲ್ಲಿ ವಿಶ್ವದಲ್ಲಿಯೇ ಬೆಂಗಳೂರಿಗೆ ನಂ.1 ಪಟ್ಟ!

ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎನಿಸಿಕೊಂಡಿರುವ ಕರ್ನಾಟಕದ ಬೆಂಗಳೂರಿಗೆ ಮತ್ತೊಂದು ಹಿರಿಮೆಯ ಗರಿ ಸೇರಿದೆ. ವಿಶ್ವದಲ್ಲೇ ಅತ್ಯಂತ ವೇಗದ ಪ್ರಬುದ್ಧ ತಂತ್ರಜ್ಞಾನ ವಾತಾವರಣ ಹೊಂದಿರುವ ನಂ.1 ನಗರಿ ಎಂಬ ಹಿರಿಮೆ ನಮ್ಮ ಬೆಂಗಳೂರಿಗೆ ದೊರಕಿದೆ. ಬ್ರಿಟನ್‌ ರಾಜಧಾನಿ ಲಂಡನ್‌ 2ನೇ ಸ್ಥಾನದಲ್ಲಿದ್ದರೆ, ಭಾರತದ ವಾಣಿಜ್ಯ ರಾಜಧಾನಿ ಮುಂಬೈ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಡೀಲ್‌ರೂಂ.ಕೋ ಸಂಸ್ಥೆಯ ದತ್ತಾಂಶವನ್ನು ಲಂಡನ್‌ ಮೇಯರ್‌ ಅವರ ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಹೂಡಿಕೆ ಸಂಸ್ಥೆಯಾದ ಲಂಡನ್‌ ಆಯಂಡ್‌ ಪಾರ್ಟನ​ರ್ಸ್‌ ವಿಶ್ಲೇಷಣೆಗೊಳಪಡಿಸಿದ್ದು, ಅದರ ಆಧಾರದಲ್ಲಿ ಬೆಂಗಳೂರಿಗೆ ನಂ.1 ಪಟ್ಟ ನೀಡಲಾಗಿದೆ. 2016ರಲ್ಲಿ ಬೆಂಗಳೂರಿಗೆ 9500 ಕೋಟಿ ಬಂಡವಾಳ ಹರಿದುಬಂದಿತ್ತು. 2020ರ ವೇಳೆಗೆ ಇದು 52 ಸಾವಿರ ಕೋಟಿಗೆ ಏರಿಕೆಯಾಗಿದೆ. ನಾಲ್ಕೇ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಹೂಡಿಕೆ ಪ್ರಮಾಣ 5.4 ಪಟ್ಟು ಏರಿಕೆಯಾಗಿದೆ. ವಿಶ್ವದ ಎಲ್ಲೂ ಹೂಡಿಕೆಯಲ್ಲಿ ಇಷ್ಟುಪಟ್ಟು ಏರಿಕೆಯಾಗದ ಕಾರಣ ಬೆಂಗಳೂರು ನಂ.1 ಸ್ಥಾನ ಅಲಂಕರಿಸಿದೆ.

ಇದನ್ನೂ ಓದಿ: ವಾಯುಮಾಲಿನ್ಯದಲ್ಲಿ ಭಾರತವೇ ನಂ.1 : ಅಕಾಲಿಕ ಮರಣಕ್ಕೂ ಅಶುದ್ಧ ಗಾಳಿಯೇ ಕಾರಣ!

2ನೇ ಸ್ಥಾನದಲ್ಲಿರುವ ಲಂಡನ್‌ನಲ್ಲಿ ಇದೇ ಅವಧಿಯಲ್ಲಿ ಮೂರು ಪಟ್ಟು ಹೂಡಿಕೆ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಬೆಂಗಳೂರು, ಲಂಡನ್‌ ನಂತರದ ಸ್ಥಾನದಲ್ಲಿ ಜರ್ಮನಿಯ ಮ್ಯೂನಿಚ್‌ ಹಾಗೂ ಬರ್ಲಿನ್‌, ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ ಸ್ಥಾನ ಪಡೆದಿವೆ. ಈ ಮೂರು ನಗರಗಳಲ್ಲಿ 2016- 2020ರ ಅವಧಿಯಲ್ಲಿ ಹೂಡಿಕೆ ಪ್ರಮಾಣ ಡಬಲ್‌ ಆಗಿದೆ.


ಇದನ್ನೂ ಓದಿ: ಉತ್ತಮ ಆಡಳಿತದಲ್ಲಿ ನಂ.1 ರಾಜ್ಯ ಕೇರಳ: ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights