ಭಾರತ VS ಆಸ್ಟ್ರೇಲಿಯಾ: ಹೊಸ ಇತಿಹಾಸ ಬರೆದ ಟೀಮ್ ಇಂಡಿಯಾ; ಸರಣಿ ಗೆದ್ದ ರಹಾನೆ ಪಡೆ!

ಆಸ್ಟ್ರೇಲಿಯಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡಗಳ ನಡುವೆ ಕ್ರಿಕೆಟ್‌ ಟೂರ್ನಿ ನಡೆಯುತ್ತಿದ್ದು, ಟೀಮ್ ಇಂಡಿಯಾ ಮೊದಲ ಬಾರಿಗೆ ಆಸ್ಟ್ರೇಲಿಯಾದ ನೆಲದಲ್ಲಿ ಆಸಿಸ್‌ ತಂಡದ ವಿರುದ್ದ ಟೆಸ್ಟ್‌ ಸರಣಿಯನ್ನು ಗೆದ್ದು ಜಯಭೇರಿ ಬಾರಿಸಿದೆ.

ಕಳೆದ 15 ದಿನಗಳಿಂದ ನಡೆಯುತ್ತಿದ್ದ ಟೆಸ್ಟ್‌ ಸರಣಿಯ ಹಣಾಹಣಿ ಇಂದು (ಮಂಗಳವಾರ) ಮುಕ್ತಾಯಗೊಂಡಿದ್ದು, ಸರಣಿಯ ಗೆಲುವನ್ನು ಭಾರತ ತಂಡ ತನ್ನ ಮುಡಿಗೇರಿಸಿಕೊಂಡಿದೆ.

ಇಂದು ನಡೆದ ಕೊನೆಯ ಟೆಸ್ಟ್‌ನ ಕೊನೆದಿನದ ಆಟದಲ್ಲಿ ಭಾರತ ತಂಡವು ಮೂರು ವಿಕೆಟ್‌ಗಳನ್ನು ಉಳಿಸಿಕೊಂಡು ಗೆಲುವು ಸಾಧಿಸಿದೆ.

ಅಂತಿಮ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ 369 ರನ್‌ ದಾಖಲಿಸಿದರೆ, ಭಾರತ ತಂಡ 336 ರನ್‌ ಗಳಿಸಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ 294 ರನ್‌ ಗಳಿಸಿದರೆ, ಭಾರತ ತಂಡ 07 ವಿಕೆಟ್‌ ಕಳೆದುಕೊಂಡು 329ರನ್‌ಗಳನ್ನು ದಾಖಲಿಸಿ, 03 ವಿಕೆಟ್‌ಗಳನ್ನು ಉಳಿಸಿಕೊಂಡು ಗೆಲುವು ಸಾಧಿಸಿದ್ದು, ಟೆಸ್ಟ್‌ ಸರಣಿಯ ಗೆಲುವನ್ನು ತನ್ನ ಮುಡಿಗೇರಿಸಿಕೊಂಡಿದೆ.

ಟೀಂ ಇಂಡಿಯಾ ಮತ್ತು ಆಸಿಸ್‌ ತಂಡಗಳ ನಡುವೆ ನಡೆದ ಮೊದಲ ಟೆಸ್ಟ್‌ನಲ್ಲಿ ನೀರಸ ಆಟ ಪ್ರದರ್ಶಿಸಿ ಸೋಲುಂಡಿದ್ದ ಭಾರತ ತಂಡ ಎರಡನೇ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಅಂತೆಯೇ ಮೂರನೇ ಟೆಸ್ಟ್‌ಅನ್ನು ಡ್ರಾ ಮಾಡಿಸುವಲ್ಲಿ ಭಾರತ ತಂಡದ ಹನುಮ ವಿಹಾರಿ ಮತ್ತು ಆರ್ ಅಶ್ವಿನ್ ಯಶಸ್ವಿಯಾಗಿದ್ದರು. ಹೀಗಾಗಿ ಟೆಸ್ಟ್‌ ಸರಣಿಯನ್ನು ಭಾರತ ತಂಡ ಗೆದ್ದುಕೊಂಡು, ಜಯದ ನಗೆ ಬೀರಿದೆ.

ಇದನ್ನೂ ಓದಿ: ಕೂಲ್‌ ಕ್ಯಾಪ್ಟನ್‌ ಧೋನಿಯನ್ನೂ ಕಾಡುತ್ತಿದೆ ಹಕ್ಕಿಜ್ವರ; ಧೋನಿಯ ಕನಸು ಭಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights