ಸ್ಥಗಿತಗೊಳ್ಳಲಿವೆ ಹಳೇ 100 ರೂ ನೋಟುಗಳು; ನೋಟ್‌ ಬ್ಯಾನ್‌ ಅಲ್ಲ ಎಂದ ಆರ್‌ಬಿಐ!

ಹೊಸ ಸೀರಿಸ್‌ನ 100 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಗುತ್ತಿದ್ದು, ಹಳೇ ಸೀರಿಸ್‌ನ 100 ರೂ ನೋಟುಗಳನ್ನು ಹಿಂಪಡೆಯಲು ಆರ್‌ಬಿಐ ನಿರ್ಧರಿಸಿರುವುದಾಗಿ ಆರ್‌ಬಿಐನ ಸಹಾಯಕ ಮಹಾಪ್ರಬಂಧಕ ಬಿ.ಎಂ.ಮಹೇಶ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಬ್ಯಾಂಕಿಂಗ್‌ ಭದ್ರತಾ ಸಮಿತಿ ಸಭೆಯಲ್ಲಿ ಮಾತನಾಡಿರುವ ಅವರು, ಹಳೆಯ ನೋಟುಗಳ ತದ್ರೂಪಿಯಾಗಿರುವ ಖೋಟಾನೋಟುಗಳು ಹೆಚ್ಚಾಗಿರುವುದರಿಂದ ಹಳೇ ಸೀರಿಸ್‌ನ 100 ರೂ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ಆರು ವರ್ಷಗಳಿಂದ ಹಳೇ ಸೀರಿಸ್‌ನ ನೋಟುಗಳು ಮುದ್ರಣವಾಗುತ್ತಿಲ್ಲ. ಆದರೆ, ಅದಕ್ಕೂ ಮೊದಲು ಮುದ್ರಣಗೊಂಡಿದ್ದ ನೋಟುಗಳು ಇನ್ನೂ ಸಾರ್ವಜನಿಕವಾಗಿ ಚಲಾವಣೆಯಲ್ಲಿವೆ. ಅವುಗಳನ್ನು ಹಂತ-ಹಂತವಾಗಿ ಹಿಂಪಡೆಯಾಗುತ್ತದೆ. ಮಾರ್ಚ್‌ ತಿಂಗಳ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಹಳೇ 100 ರೂ ನೋಟುಗಳನ್ನು ಹಿಂಪಡೆಯಲಾಗುತ್ತದೆ ಎಂದು ಮಹೇಶ್‌ ಅವರು ಮಾಹಿತಿ ನೀಡಿದ್ದಾರೆ.

ನೋಟು ಅಮಾನ್ಯೀಕರಣವಲ್ಲ:

500 ರೂ ಹಾಗೂ 1000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡಿದಂತೆ 100 ರೂ ಮುಖಬೆಲೆಯ ಹಳೇ ನೋಟುಗಳ ಅಮಾನ್ಯೀಕರಣ ಮಾಡುವುದಿಲ್ಲ. ನೋಟು ವಾಪಸ್ ಕಾರಣಕ್ಕೆ ಜನರು ಭಯಪಡುವ ಅಗತ್ಯವಿಲ್ಲ. ಹೊಸ ನೋಟುಗಳು ಜನರ ಕೈಗೆ ಸಿಗಬೇಕೆಂಬುದು ಮಾತ್ರ ಇದರ ಉದ್ದೇಶವಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಹೊಸ ಸೀರಿಸ್ ಹೊಂದಿರುವ 100 ರೂ ಮುಖಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿರಬೇಕು. ಬ್ಯಾಂಕ್ ನವರು ಅಂತಹ ನೋಟುಗಳನ್ನು ಇರಿಸಿಕೊಳ್ಳದೆ ಕರೆನ್ಸಿ ಚೆಸ್ಟ್’ಗೆ ಒಪ್ಪಿಸಬೇಕು ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ: ಮುಸ್ಲಿಮರಿಗೆ ಮುಕ್ತ ಅವಕಾಶ;ಮೊದಲ ದಿನವೇ ಹಲವು ಬದಲಾವಣೆ ತಂದ ಜೋ ಬೈಡನ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights