ಮದುವೆ ಸಂಭ್ರಮದಲ್ಲಿ ವರುಣ್ ಧವನ್-ನತಾಶಾ ದಲಾಲ್ : ಲವ್ ಸ್ಟೋರಿ ಇಲ್ಲಿದೆ…

ವರುಣ್ ಧವನ್ ಮತ್ತು ನತಾಶಾ ದಲಾಲ್ ಮದುವೆ ಸಂಭ್ರಮದಲ್ಲಿದ್ದು ಜನವರಿ 24 ರಂದು ಅಲಿಬಾಗ್‌ನಲ್ಲಿ ಹಸಮಣೆ ಏರಲಿದ್ದಾರೆ. ಬೀಚ್ ರೆಸಾರ್ಟ್, ದಿ ಮ್ಯಾನ್ಷನ್ ಹೌಸ್ ಅನ್ನು ಡಿ-ಡೇಗಾಗಿ ಅಲಂಕರಿಸಲಾಗುತ್ತಿರುವುದರಿಂದ ವಿವಾಹದ ಸಿದ್ಧತೆಗಳು ಭರದಿಂದ ಸಾಗಿವೆ.

ನಿನ್ನೆ ವಿವಾಹದ ಸ್ಥಳದಿಂದ ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು ಖಾಸಗಿ ವ್ಯಕ್ತಿಗಳಿಂದ ಫೋಟೋ ತೆಗೆಯದಂತೆ ನೋಡಿಕೊಳ್ಳಲಾಗುತ್ತಿದೆ. ವರುಣ್ ಧವನ್ ಮತ್ತು ನತಾಶಾ ದಲಾಲ್ ಅವರ ವಿವಾಹಕ್ಕೆ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಮಾತ್ರ ಆಹ್ವಾನಿಸಲಾಗಿದೆ. ಜೊತೆಗೆ ಮದುವೆಯನ್ನು ರಹಸ್ಯವಾಗಿಡಲು ಮದುವೆಯ ದಿನಾಂಕದ ಕೆಲವೇ ದಿನಗಳ ಹಿಂದೆ ಅತಿಥಿಗಳಿಗೆ ಆಹ್ವಾನಿಸಲಾಗಿದೆ. ಭಾನುವಾರ ವಿವಾಹ ಮೂಹೂರ್ತ ನೆರವೇರಲಿದ್ದು ಆಪ್ತರು ಮಾತ್ರ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಅಂದಹಾಗೆ ವರುಣ್-ನತಾಶಾ ಪರಸ್ಪರ ಪ್ರೀತಿಸಿ ವಿವಾಹವಾಗುತ್ತಿದ್ದಾರೆ.

ವರುಣ್-ನತಾಶಾ ಅವರ ಪ್ರೀತಿಯ ಕಥೆ
ವರುಣ್ ಧವನ್ ಮತ್ತು ನತಾಶಾ ಧವನ್ ಅವರು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಅವರು ಶಾಲೆಯಿಂದಲೂ ಒಬ್ಬರಿಗೊಬ್ಬರು ತಿಳಿದಿದ್ದರು. ಇಬ್ಬರಿಗೂ ಸಂಗೀತ ಅಂದರೆ ತುಂಬಾನೇ ಇಷ್ಟ ಹೀಗಾಗಿ ಶಾಲೆಯ ನಂತರ ಮ್ಯೂಸಿಕ್ ಕ್ಲಾಸ್ ನಲ್ಲಿ ಇಬ್ಬರು ಭೇಟಿಯಾಗ್ತಾಯಿದ್ದರು. ಮ್ಯೂಸಿಕ್ ಕ್ಲಾಸ್ ಇಬ್ಬರ ಸಂಬಂಧ ಗಟ್ಟಿಗೊಳಿಸಿತ್ತು. ಮ್ಯೂಸಿಕ್ ಕ್ಲಾಸ್ ಬಳಿಕ ಇಬ್ಬರು ಪರಸ್ಪರ ಮಾತನಾಡುವುದು ಒಟ್ಟಿಗೆ ಹೊರಗೆ ಹೋಗುತ್ತಿದ್ದರು. ಈ ವೇಳೇ ಪ್ರೀತಿ ಅರಳಿದೆ. ನತಾಶಾ ನಾಚಿಕೆ ಸ್ವಭಾವದ ಹುಡುಗಿಯಾಗಿದ್ದರಿಂದ ಸಾರ್ವಜನಿಕರ ಗಮನಕ್ಕೆ ಪ್ರೀತಿ ವಿಚಾರ ತರಲು ಇಷ್ಟಪಟ್ಟಿರಲಿಲ್ಲ. ಆದ್ದರಿಂದ ದಂಪತಿಗಳು ತಮ್ಮ ಸಂಬಂಧವನ್ನು ಗುಪ್ತವಾಗಿಟ್ಟಿದ್ದರು.

ಕರಣ್ ಜೋಹರ್ ಅವರ ಕಾಫಿ ವಿಥ್ ಕರಣ್ ಸೀಸನ್ 6 ಎಪಿಸೋಡ್‌ನಲ್ಲಿ ವರುಣ್ ಧವನ್ ಮೊದಲ ಬಾರಿಗೆ ನತಾಶಾ ದಲಾಲ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದರು. ಅವರು ಗಂಭೀರವಾಗಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಅವರು ಹೇಳಿದ್ದರು. ಅಂದಿನಿಂದ ಅವರ ವಿವಾಹದ ಸುದ್ದಿ ಪ್ರತಿದಿನವೂ ಮುಖ್ಯಾಂಶದಲ್ಲಿತ್ತು. ಈಗ ಅಂತಿಮವಾಗಿ ಲವ್ ಬರ್ಡ್ಸ್ ಗಂಡ ಮತ್ತು ಹೆಂಡತಿಯಾಗಲಿದ್ದಾರೆ.

ಅವರ ಕುಟುಂಬ ಸದಸ್ಯರು ಆಯ್ದ ಅತಿಥಿಗಳಿಗೆ ಇ-ಆಹ್ವಾನಗಳನ್ನು ಕಳುಹಿಸಲು ಪ್ರಾರಂಭಿಸಿದಾಗ ವರುಣ್ ಧವನ್ ಮತ್ತು ನತಾಶಾ ದಲಾಲ್ ಅವರ ವಿವಾಹದ ಸುದ್ದಿಬಾಲಿವುಡ್ ನಲ್ಲಿ ಭಾರೀ ಚರ್ಚೆಯಲ್ಲಿದೆ. ಜನವರಿ 22 ರಿಂದ ಜನವರಿ 24 ರವರೆಗೆ ನಡೆಯುವ ಮದುವೆ ಸಮಾರಂಭಕ್ಕೆ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರಂತಹ ಪ್ರಸಿದ್ಧ ವ್ಯಕ್ತಿಗಳನ್ನುಮದುವೆಗೆ ಆಹ್ವಾನಿಸಲಾಗಿದೆ.  ಕೋವಿಡ್ -19 ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ಅಲಿಬಾಗ್‌ನ ರೆಸಾರ್ಟ್‌ನಲ್ಲಿ ವಿವಾಹ ನಡೆಯಲಿದೆ ಎಂದು ಅತಿಥಿಗಳಿಗೆ ತಿಳಿಸಲಾಯಿತು.

 

Spread the love

Leave a Reply

Your email address will not be published. Required fields are marked *