ಮದುವೆಯ ಸ್ಥಳಕ್ಕೆ ಹೋಗುವ ಮೊದಲು ನಟ ವರುಣ್ ಧವನ್ ಕಾರು ಅಪಘಾತ!

ಬಾಲಿವುಡ್ ನಟ ವರುಣ್ ಧವನ್ ಮತ್ತು ನತಾಶಾ ದಲಾಲ್ ಅದ್ದೂರಿ ಮದುವೆ ಸಂಭ್ರಮದಲ್ಲಿದ್ದಾರೆ. ಆದರೆ ಹೀಗೊಂದು ಸುದ್ದು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಮದುವೆ ಸಂತಸದಲ್ಲಿ ಕೊಂಚ ಬೇಸರದ ಘಟನೆಯೊಂದು ನಡೆದಿದೆ.

ಹೌದು… ಬಾಲಿವುಡ್ ನಟ ವರುಣ್ ಧವನ್ ಮತ್ತು ನತಾಶಾ ದಲಾಲ್ ಪ್ರತಿಯೊಂದು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಆದರೆ ಈಗ ದೊಡ್ಡ ಮಾಹಿತಿ ಹೊರಬರುತ್ತಿದೆ. ವರುಣ್ ಧವನ್ ಅವರ ಕಾರು ಸಣ್ಣ ಅಪಘಾತವನ್ನು ಎದುರಿಸಿದೆ ಎಂದು ವರದಿಯಾಗಿದೆ. ನಟ ತನ್ನ ಕೆಲವು ಸ್ನೇಹಿತರೊಂದಿಗೆ ಅಲಿಬಾಗ್‌ಗೆ ಬರುವಾಗ ಈ ಘಟನೆ ನಡೆದಿದೆ.

ಈ ಅಪಘಾತದಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ವರದಿಯಾಗಿದೆ. ವರುಣ್ ಧವನ್ ಕೂಡ ತುಂಬಾ ಸುರಕ್ಷಿತವಾಗಿದ್ದಾರೆ. ವಾಹನ ಸಣ್ಣ ಸ್ಕ್ರ್ಯಾಚ್ ಹೊಂದಿದೆ ಎಂದು ಹೇಳಲಾಗುತ್ತದೆ. ಆದರೆ ನಟ ಮತ್ತು ಕಾರಿನಲ್ಲಿ ಕುಳಿತಿರುವ ಇತರ ವ್ಯಕ್ತಿಗಳಿಗೆ ಯಾವುದೇ ಗಾಯಗಳಾಗಿಲ್ಲ. ಶನಿವಾರ ವರುಣ್ ಜುಹುವಿನಿಂದ ಅಲಿಬಾಗ್‌ಗೆ ಹೋದಾಗ ಈ ಘಟನೆ ಸಂಭವಿಸಿದೆ. ಸುಮಾರು ನಾಲ್ಕು ಗಂಟೆಗಳ ಆ ಮಾರ್ಗದಲ್ಲಿ ಸಾಕಷ್ಟು ದಟ್ಟಣೆ ಇತ್ತು ಮತ್ತು ಅದು ಹಾಳಾದ ರಸ್ತೆಗಳಿಂದ ಕೂಡಿತ್ತು ಎನ್ನಲಾಗುತ್ತಿದೆ.

ಈ ಕ್ಷಣದಲ್ಲಿ ವರುಣ್ ಧವನ್ ಅಲಿಬಾಗ್ ತಲುಪಬೇಕಿತ್ತು, ಈ ಸಮಯದಲ್ಲಿ ಸ್ವಲ್ಪ ಆತುರವಿತ್ತು. ಈ ಆತುರದಿಂದಾಗಿ ಅಪಘಾತವಾಗಿದೆ. ಈಗ ವರುಣ್ ತನ್ನ ಮದುವೆ ಮಂಟಪವನ್ನು ತಲುಪಿದ್ದಾರೆ. ತಮ್ಮ ಕಾರಿನಿಂದ ನಿರ್ಗಮಿಸುವ ಅನೇಕ ಚಿತ್ರಗಳು ವೈರಲ್ ಆಗಿವೆ. ಕ್ಯಾಶುಯಲ್ ವೇಯರ್ ಗಳಲ್ಲಿ ವರುಣ್ ಡಿಫೆರೆಮಟ್ ಆಗಿ ಕಾಣುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬ್ಯಾಂಡ್‌ನಿಂದ ಮೆಹಂದಿವರೆಗೆ ಎಲ್ಲಾ ವೀಡಿಯೊಗಳು ಮತ್ತು ಚಿತ್ರಗಳು ಹೊರಬಂದಿವೆ.

Spread the love

Leave a Reply

Your email address will not be published. Required fields are marked *