ಕೆಲವೇ ಗಂಟೆಗಳಲ್ಲಿ ಜೈಲಿನಿಂದ ಹೊರಬರಲಿದ್ದಾರೆ ರಾ’ಗಿಣಿ’ : 145 ದಿನಗಳ ಬಳಿಕ ಬಿಡುಗಡೆ ಭಾಗ್ಯ!

ಡ್ರಗ್ಸ್ ಕೇಸ್ ನಲ್ಲಿ ಜೈಲು ವಾಸ ಅನುಭವಿಸುತ್ತಿದ್ದ ನಟಿ ರಾಗಿಣಿ ದ್ವಿವೇದಿಗೆ 145 ದಿನಗಳ ಬಳಿಕೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಇವತ್ತು ಸಂಜೆ 6 ಗಂಟೆಗೆ ಜೈಲಿನಿಂದ ಅವರು ಹೊರಬರಲಿದೆ.

ಸೆಪ್ಟಂಬರ್ 14ರಂದು ರಾಗಿಣಿಗೆ ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿತ್ತು. ಪರಪ್ಪನ ಅಗ್ರಹಾರದಲ್ಲಿರುವ ತುಪ್ಪದ ಹುಡುಗಿಗೆ ಕಳೆದ ಗುರುವಾರವೇ (ಜ.21) ಜಾಮೀನು ಸಿಕ್ಕಿತ್ತು ಆದರೆ ಬಿಡುಗಡೆಯಾಗಿರಲಿಲ್ಲ. ಇದಕ್ಕೆ ಕಾರಣ ಪ್ರಕ್ರಿಯೆಗಳ ವಿಳಂಬ ಮತ್ತು ವಾರಾಂತ್ಯದ ರಜೆಗಳು! ಹೌದು, ಪ್ರಕ್ರಿಯೆಗಳ ವಿಳಂಬ ಮತ್ತು ವಾರಾಂತ್ಯದ ರಜೆಗಳ ಕಾರಣದಿಂದ ಜೈಲಿನಿಂದ ಹೊರಬರಲಾಗದೇ ಮಾದಕವಸ್ತು ಪ್ರಕರಣ ಆರೋಪಿ ರಾಗಿಣಿ ಜೈಲಿನಲ್ಲಿ ಕೈ ಕೈ ಹಿಸುಕಿಕೊಳ್ಳುವಂತಾಗಿತ್ತು.

ಕಾದು ಕಾದು ರಾಗಿಣಿ ಪೋಷಕರು ಬೇಸರದಿಂದ ಹಿಂದಿರುಗಿದ್ದರು. ಅವರಿಗೆ ಜ.21ರಂದು ಜಾಮೀನು ಸಿಕ್ಕಿದೆ. ಆದರೆ ಸುಪ್ರೀಂಕೋರ್ಟ್‌ ಆದೇಶ ಪ್ರತಿಯನ್ನು ಬೆಂಗಳೂರಿನ ಎನ್‌ಡಿಪಿಎಸ್‌ ನ್ಯಾಯಾಲಯಕ್ಕೆ ತಲುಪಿಸಲು ವಿಳಂಬವಾಗಿದೆ. ಶುಕ್ರವಾರದಂದು (ಜ.22) ಆದೇಶ ಪ್ರತಿ ತಲುಪಿದೆ. ಆದರೆ, ಕೋವಿಡ್‌-19 ನಿಯಮಗಳ ಪ್ರಕಾರ ಪ್ರತಿಯನ್ನು ಡಬ್ಬದಲ್ಲಿ ಹಾಕಿ ಸ್ಯಾನಿಟೈಜ್‌ ಮಾಡಬೇಕು. ನಂತರವೇ ನ್ಯಾಯಾಧೀಶರ ಸಮ್ಮುಖದಲ್ಲಿಇರಿಸಲಾಗುತ್ತದೆ. ಈ ಪ್ರಕ್ರಿಯೆಗಳು ಶುಕ್ರವಾರ ಪೂರ್ಣಗೊಂಡಿಲ್ಲ.

ಇನ್ನೂ ಜ.23 ನಾಲ್ಕನೇ ಶನಿವಾರ ಆಗಿದ್ದ ಕಾರಣ ಸರ್ಕಾರಿ ರಜೆ. ನ್ಯಾಯಾಲಯ ಕಾರ್ಯ ನಿರ್ವಹಿಸುವುದಿಲ್ಲ. ಭಾನುವಾರ ಕೂಡ ರಜೆ ಇರುವ ಕಾರಣ ಸೋಮವಾರ ಬೆಳಗ್ಗೆ (ಇಂದು)ನ್ಯಾಯಾಲಯವೂ ಜಾಮೀನು ಆದೇಶ ಪ್ರತಿ ಪರಿಶೀಲಿಸಿ ಬಿಡುಗಡೆ ಮಾಡಲು ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಂತಿಮವಾಗಿ ಕೆಲವೇ ಹೊತ್ತಿನಲ್ಲಿ ರಾಗಿಣಿ ಬಿಡುಗಡೆಯಾಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights