ಬಂಗಾಳದಲ್ಲಿ ಮುಂದರೆದ ರಾಜೀನಾಮೆ ಪರ್ವ: 2 ಸ್ಥಾನಗಳಿಗೆ TMC ಶಾಸಕ ರಾಜೀನಾಮೆ!

ಪಶ್ಚಿಮ ಬಂಗಾಳದಲ್ಲಿ ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹೊತ್ತಿನಲ್ಲೇ ಆಡಳಿತಾರೂಢ ಟಿಎಂಸಿ ಮುಖಂಡರು, ಶಾಸಕ-ಸಂಸದರು ಪಕ್ಷತೊರೆದಿದ್ದು, ಹಲವರು ಬಿಜೆಪಿ ಸೇರಿದ್ದಾರೆ.

ಇದೀಗ ಇವರ ಪಟ್ಟಿದೆ ಹೊಸದಾಗಿ ಮತ್ತೊಬ್ಬ ಶಾಸಕ ಸೇರಿಕೊಂಡಿದ್ದು, ಉತ್ತರಪರ ಕ್ಷೇತ್ರವನ್ನು ಪ್ರತಿನಿಧಿಸುವ ಟಿಎಂಸಿ ಶಾಸಕ ಪ್ರಬಿರ್ ಘೋಷಾಲ್ ಪಕ್ಷದ ಎರಡು ಸ್ಥಾನಗಳಿಗೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಅವರು, ಟಿಎಂಸಿಯ ಹೂಗ್ಲಿ ಜಿಲ್ಲಾ ಸಮಿತಿ ಹಾಗೂ ಟಿಎಂಸಿ ವಕ್ತಾರ ಎರಡೂ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಶಾಸಕನಾಗಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.

ಈ ಎರಡೂ ಸ್ಥಾನಗಳಿಗೆ ನನ್ನಿಂದ ಬಲವಂತವಾಗಿ ರಾಜೀನಾಮೆ ಕೊಡಿಸಲಾಗಿದೆ. ನನ್ನ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ಅವಕಾಶ ಕೊಡದ ಪಕ್ಷದೊಳಗಿನ ಕೆಲವರ ಲಾಬಿಯಿಂದಾಗಿ ನಾನು ರಾಜೀನಾಮೆ ಕೊಡಬೇಕಾಯಿತು ಎಂದು ಅವರು ಆರೋಪಿಸಿದ್ದಾರೆ.

ಜನರ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು ನಾನು ಶಾಸಕನಾಗಿ ಮುಂದುವರೆಯಲಿದ್ದಾನೆ. ಶಾಸಕ ಸ್ಥಾನವನ್ನು ತೊರೆಯುವುದಿಲ್ಲ ಎಂದು ಪ್ರಬಿರ್ ತಿಳಿಸಿದ್ದಾರೆ.

‘ಏಪ್ರಿಲ್-ಮೇನಲ್ಲಿ ಚುನಾವಣೆಗಳಿರುವುದರಿಂದ ಅದಕ್ಕೂ ಮುನ್ನ ನಾನು ಟಿಎಂಸಿಯಿಂದ ನಿರ್ಗಮಿಸುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights