ಖಾಸಗಿ ಶಾಲೆಗಳ ಕಿರಿಕ್ : ಶಿಕ್ಷಣ ಇಲಾಖೆ ವಿರುದ್ಧ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಕಿಡಿ..!

ರಾಜ್ಯ ಸರ್ಕಾರ ಖಾಸಗಿ ಶಾಲೆಗಳ ಶುಲ್ಕದಲ್ಲಿ 30% ಕಡಿತ ಮಾಡಿದ ಬೆನ್ನಲ್ಲೆ ಖಾಸಗಿ ಶಾಲೆಗಳ ಒಕ್ಕೂಟಗಳು ಅಸಮಾಧಾನ ಹೊರಹಾಕಿವೆ.

ನಿನ್ನೆ ಸಚಿವ ಸುರೇಶ್ ಕುಮಾರ್, ಶಾಲಾ ಶುಲ್ಕವನ್ನು 30%ರಷ್ಟು ಕಡಿತ ಮಾಡಿದರು. ಈ ನಿರ್ಧಾರದ ಬಗ್ಗೆ ಸದ್ಯ ಖಾಸಗಿ ಶಾಲೆಗಳ ಒಕ್ಕೂಟ ಕಿಡಿಕಾರಿದೆ. ಸರ್ಕಾರದ ಆದೇಶವನ್ನು ವಿರೋಧಿಸಿದೆ. ಸರ್ಕಾರ ಕೇವಲ ಪೋಷಕರನ್ನು ಗಮನಕ್ಕೆ ತೆಗೆದುಕೊಂಡಿದೆ. ಶಿಕ್ಷಕರನ್ನು ಶಾಲಾ ಆಡಳಿತ ಖರ್ಚು ವೆಚ್ಚಗಳನ್ನು ಗಮನಕ್ಕೆ ತೆಗೆದುಕೊಂಡಿಲ್ಲ. 30% ರಷ್ಟು ಶಾಲಾ ಶುಲ್ಕ ಕಡಿತ ಮಾಡಿದರೆ ನಾವೂ ಶಿಕ್ಷಕರಿಗೂ 70% ರಷ್ಟು ಮಾತ್ರ ಸಂಬಳ ನೀಡಿದರೆ ಇದನ್ನು ಒಪ್ಪುತ್ತಾರಾ..? ಹೀಗಾಗಿ ಶಾಲಾ ಶುಲ್ಕ ಕಡಿಮೆ ಮಾಡಿರುವುದು ಒಪ್ಪುವಂತದ್ದಲ್ಲ ಒಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕಿಡಿ ಕಾರಿದ್ದಾರೆ.

ಇದರ ಬದಲಿಗೆ 15ರಿಂದ 20,25% ಟರ್ಮ್ ಶುಲ್ಕ ಸ್ಪೆಷಲ್ ಶುಲ್ಕದಲ್ಲಿ, ಡೆವಲಪ್ಮೆಂಟ್ ಶುಲ್ಕದಲ್ಲಿ ಇತರೆ ಕಂಪ್ಯೂಟರ್, ಟ್ರಾನ್ಪೋರ್ಟ್ ಚಾರ್ಜ್ ನಲ್ಲಿ ತಗಲುವ ವೆಚ್ಚದಲ್ಲಿ ಕಡಿಮೆ ಮಾಡಲು ಶಿಫಾರಸು ಮಾಡಬಹುದಿತ್ತು. ಆದರೆ ಏಕರೂಪದಲ್ಲಿ ಒಟ್ಟಾರೆ ಕಡಿತ ಮಾಡಿರುವುದು ಸರಿಯಾಲ್ಲ. ಅದು 40%ರಿಂದ50% ಆಗುತ್ತದೆ. ಟೆಕ್ನಕಲ್ ಆಗಿ ಈ ಅಂಶಗಳು ಈಗಾಗಲೇ ಶಿಕ್ಷಣ ಮಂತ್ರಿಗಳಿಗೆ, ಪ್ರಧಾನ ಕಾರ್ಯದರ್ಶಿ, ಹಾಗೂ ಆಯುಕ್ತರಿಗೆ ಗೊತ್ತಿತ್ತು. ಆದರೂ ಸ್ಪಷ್ಟೀಕರಣಣ ಕೊಡದೆ ಏಕಾಏಕಿ ಕಡಿತ ಮಾಡಿದೆ.

ನಾವೂ ಕೂಡ ಶಿಕ್ಷಕರಿಗೆ ಕಡಿಮೆ ಸಂಬಳ ನೀಡಿದರೆ..? ಇದಕ್ಕೆ ಶಿಕ್ಷಣ ಸಚಿವರು ಏನು ಉತ್ತರ ಕೊಡುತ್ತಾರೆ..? ಕಳೆದ ವರ್ಷ ಶುಲ್ಕವನ್ನೇ ಪಾವತಿ ಮಾಡಿಲ್ಲ.ಈ ವರ್ಷದ ದಾಖಲಾತಿ ಮಾಡಿಲ್ಲ. ಈ ಧೋರಣೆಯನ್ನು ಸಂಪೂರ್ಣವಾಗಿ ಒಪ್ಪುವಂತದಲ್ಲ. ಹೀಗಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights