ಸಿದ್ಧರಾಮಯ್ಯ, ಡಿಕೆ ಶಿವಕುಮಾರ್, ರಮೇಶ್ ಕುಮಾರ್ ಗೆ ಸಿಡಿ ಲೇಡಿ ಮನವಿ!
ರಮೇಶ್ ಜಾರಕಿಹೊಳಿ ಸಿಡಿ ಯುವತಿ ಪತ್ತೆ ಕಾರ್ಯವನ್ನು ಎಸ್ಐಟಿ ನಡೆಯುತ್ತಿರುವಾಗಲೇ ಮತ್ತೊಂದು ವಿಡಿಯೋವನ್ನು ಯುವತಿ ರಿಲೀಸ್ ಮಾಡಿದ್ದು ವಿಪಕ್ಷ ನಾಯಕರುಗಳಿಗೆ ತಂದೆ-ತಾಯಿ ರಕ್ಷಣೆಗಾಗಿ ಮನವಿ ಮಾಡಿದ್ದಾಳೆ.
ವಿಡಿಯೋದಲ್ಲಿ ಮಹಿಳಾ ಸಂಘಟನೆಗಳಿಗೆ, ವಿಪಕ್ಷ ನಾಯಕರುಗಳಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೆಸರನ್ನು ಪ್ರಸ್ತಾಪ ಮಾಡಿ ತಂದೆ-ತಾಯಿಗೆ ರಕ್ಷಣೆ ಕೊಡುವಂತೆ ಯುವತಿ ಮನವಿ ಮಾಡಿದ್ದಾಳೆ. ತಂದೆ-ತಾಯಿ ಸೇಫ್ ಆಗಿದ್ದಾರೆಂದು ನನಗೆ ಗೊತ್ತಾಗುತ್ತಿದ್ದಂತೆ ನಾನು ಎಸ್ಐಟಿ ಮುಂದೆ ನಾನು ಹಾಜರಾಗುತ್ತೇನೆ ಎಂದು ಯುವತಿ ವಿಡಿಯೋದಲ್ಲಿ ಕೇಳಿಕೊಂಡಿದ್ದಾಳೆ.
ಇದಕ್ಕೆ ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ” ತಮ್ಮ ಮೇಲೆ ನಂಬಿಕೆ ಇಟ್ಟು ಯುವತಿ ರಕ್ಷಣೆ ಕೋರಿದ್ದಾಳೆ. ನಾವು ಸಂಪೂರ್ಣವಾಗಿ ಯುವತಿಗೆ ರಕ್ಷಣೆ ಕೊಡುತ್ತೇವೆ. ಆಕೆ ಆತಂಕ ಪಡುವಂತಿಲ್ಲ” ಎಂದು ಭರವಸೆ ನೀಡಿದ್ದಾರೆ.
ಜೊತೆಗೆ ಮಹಿಳಾ ಆಯೋಗದ ಅಧ್ಯಕ್ಷೆ, ಪ್ರಮೀಳಾ ನಾಯ್ಡು ಮಾತನಾಡಿ,” ಈ ಪ್ರಕರಣದಲ್ಲಿ ನಮಗೆ ಯಾರು ಮುಖ್ಯವಾಗುವುದಿಲ್ಲ. ಯುವತಿ ಮುಖ್ಯವಾಗುತ್ತಾಳೆ. ಹೀಗಾಗಿ ಆಕೆಯ ಹೇಳಿಕೆ ಮುಖ್ಯವಾಗುತ್ತದೆ. ಯುವತಿ ಹೆದರುವುದು ಬೇಡ. ನಾವು ಸಂಪೂರ್ಣವಾಗಿ ಆಕೆಗೆ ರಕ್ಷಣೆ ಕೊಡುತ್ತೇವೆ. ಈ ಬಗ್ಗೆ ನಾನು ಗೃಹ ಸಚಿವರಿಗೂ ಪತ್ರ ಬರೆದಿದ್ದೇನೆ” ಎಂದು ಹೇಳಿದ್ದಾರೆ.

