ಎಸ್ಐಟಿ ವಿರುದ್ಧ ಸಿಡಿ ಲೇಡಿ ಗಂಭೀರ ಆರೋಪ ಸುಳ್ಳು ಎಂದು ಸೌಮೇಂದು ಹೇಳಿಕೆ..!

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿಯ ಲೇಡಿ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದು ಎಸ್ಐಟಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.

ಸಿಡಿ ಯುವತಿ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದು ಅದರಲ್ಲಿ ಸಾಕಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾಳೆ. “ಕಮೀಷ್ನರ್ಗೆ ಹಾಗೂ ಎಸ್ಐಟಿಗೆ ಮಾರ್ಚ್ 12ರಂದು ಮೊದಲನೇ ವಿಡಿಯೋ ಕಳುಹಿಸಿದ್ದೇನೆ. ಆದರೆ ಮರುದಿನ ಮಾರ್ಚ್ 13 ರಂದು ರಮೇಶ್ ಜಾರಕಿಹೊಳಿ ದೂರು ನೀಡಿದ ಮೇಲೆ ನನ್ನ ವಿಡಿಯೋ ಎಸ್ಐಟಿ ರಿಲೀಸ್ ಮಾಡಿದೆ. ಅಂದರೆ ಏನ್ ಅರ್ಥ? ಎಸ್ಐಟಿ ಯಾರ ಪರವಾಗಿ ಕೆಲಸ ಮಾಡುತ್ತಿದೆ ನನಗೆ ಗೊತ್ತಾಗುತ್ತಿಲ್ಲ” ಎಂದು ಆರೋಪಿಸಿದ್ದಾಳೆ.

ಇದಕ್ಕೆ ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಪ್ರತಿಕ್ರಿಯೆ ನೀಡಿದ್ದು, ” ನಮಗೆ ಯುವತಿಯಿಂದ ಯಾವ ವಿಡಿಯೋ ಬಂದಿಲ್ಲ. ಯುವತಿ ಸುಳ್ಳು ಹೇಳುತ್ತಿದ್ದಾಳೆ. ವಿವಿಧ ಮೂಲಕಗಳಿಂದ ಐದು ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಕೊಟ್ಟರೂ ಆಕೆ ಹಾಜರಾಗಿಲ್ಲ” ಎಂದಿದ್ದಾರೆ.

ಜೊತೆಗೆ ಯುವತಿ ವಿಡಿಯೋದಲ್ಲಿ ” ಯಾವಾಗ ನನ್ನ ತಂದೆ ತಾಯಿ ಸೇಫ್ ಆಗಿದ್ದಾರೆ ಎಂದು ನನಗೆ ಗೊತ್ತಾಗುತ್ತದೆಯೋ ಆಗ ನಾನು ಎಸ್ ಐಟಿ ಮುಂದೆ ಹಾಜರಾಗುತ್ತೇನೆ. ಫರ್ದರ್ ಪ್ರೊಸೆಸ್ ನಾನು ಮಾಡುತ್ತೇನೆ. ನಾನು ಸಿದ್ದರಾಮಯ್ಯ, ಡಿಕೆಶಿವಕುಮಾರ್, ರಮೇಶ್ ಕುಮಾರ್ ಹಾಗೂ ಮಹಿಳಾ ಸಂಘಟನೆಗಳಿಗೆ ಇಷ್ಟೇ ಕೇಳಿಕೊಳ್ಳೋದು ನಮ್ಮ ಅಪ್ಪ ಅಮ್ಮನಿಗೆ ರಕ್ಷಣೆ ಕೊಡಿ” ಎಂದು ಮನವಿ ಮಾಡಿಕೊಂಡಿದ್ದಾಳೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights