ಸಿಡಿ ಲೇಡಿಯಿಂದ ಮತ್ತೊಂದು ವಿಡಿಯೋ ರಿಲೀಸ್ : ತಂದೆ-ತಾಯಿ ರಕ್ಷಣೆಗಾಗಿ ಮನವಿ!
ರಮೇಶ ಜಾರಕಿಹೊಳಿ ಸಿಡಿ ಲೇಡಿಯಿಂದ ಮತ್ತೊಂದು ವಿಡಿಯೋ ರಿಲೀಸ್ ಆಗಿದೆ. ತನ್ನ ತಂದೆ ತಾಯಿಯ ರಕ್ಷಣೆ ಕೊಡಬೇಕು ಎಂದು ವಿಡಿಯೋ ಮೂಲಕ ಸಿಡಿ ಯುವತಿ ಮನವಿ ಮಾಡಿದ್ದಾಳೆ.
ಹೌದು… ಇಂದು ಸಿಡಿ ಬಿಡುಗಡೆ ಮಾಡಿದ ಯುವತಿ, ” ಯಾವಾಗ ನನ್ನ ತಂದೆ ತಾಯಿ ಸೇಫ್ ಆಗಿದ್ದಾರೆ ಎಂದು ನನಗೆ ಗೊತ್ತಾಗುತ್ತದೆಯೋ ಆಗ ನಾನು ಎಸ್ ಐಟಿ ಮುಂದೆ ಹಾಜರಾಗುತ್ತೇನೆ. ಫರ್ದರ್ ಪ್ರೊಸೆಸ್ ನಾನು ಮಾಡುತ್ತೇನೆ. ನಾನು ಸಿದ್ದರಾಮಯ್ಯ, ಡಿಕೆಶಿ, ರಮೇಶ್, ಮಹಿಳಾ ಸಂಘಟನೆಗಳಿಗೆ ಇಷ್ಟೇ ಕೇಳಿಕೊಳ್ಳೋದು ನಮ್ಮ ಅಪ್ಪ ಅಮ್ಮನಿಗೆ ರಕ್ಷಣೆ ಕೊಡಿ” ಎಂದು ಹೇಳಿದ್ದಾಳೆ.
ಎರಡು ದಿನದಿಂದ ನನಗೆ ಒಂದು ನಂಬಿಕೆ ಇದೆ ನನಗೆ ನ್ಯಾಯ ಸಿಗ್ಗುತ್ತದೆ ಎಂದು ಅನ್ಸುತ್ತದೆ. ಮಾರ್ಚ್ 12 ತಾರೀಖು ನಾನು ಕಮೀಷ್ನರ್, ಎಸ್ಐಟಿ ಗೆ ವೀಡಿಯೋ ಕಳುಹಿಸಿದ್ದೇನೆ. ಆದರೆ ಎಸ್ಐಟಿ 13 ನೇ ತಾರೀಖು ರಮೇಶ್ ಜಾರಕಿಹೊಳಿ ದೂರು ದಾಖಲಿಸಿದ ಮೇಲೆ ಎಸ್ಐಟಿ ನನ್ನ ವೀಡಿಯೋ ರಿಲೀಸ್ ಮಾಡಿದೆ. ಇದರಿಂದ ನನಗೆ ಎಸ್ಐಟಿ ಯಾರ ಪರವಿದೆ ಎಂದು ಗೊತ್ತಾಗುತ್ತಿಲ್ಲ” ಎಂದು ಅನುಮಾನ ವ್ಯಕ್ತಪಡಿಸಿದ್ದಾಳೆ.
ಜೊತೆಗೆ ” ತಂದೆ-ತಾಯಿ ನಾನು ಕಿಡ್ನ್ಯಾಪ್ ಆಗಿದ್ದೇನೆ ಎಂದು ದೂರು ಕೊಟ್ಟಿದ್ದಾರೆಮದು ಹೇಳುತ್ತಾರೆ. ಆದರೆ ನನ್ನ ತಂದೆ ತಾಯಿ ಸ್ವಯಿಚ್ಚೆಯಿಂದ ಕಂಪ್ಲೇಂಟ್ ಕೊಟ್ಟಿಲ್ಲ. ಯಾಕೆಂದರೆ ನನ್ನ ತಂದೆ ತಾಯಿಗೆ ಗೊತ್ತು ನಾನು ತಪ್ಪು ಮಾಡಿಲ್ಲ” ಎಂದು ಹೇಳಿದ್ದಾಳೆ.
“ನಾನು ಸಿದ್ದರಾಮಯ್ಯ, ಡಿಕೆಶಿ, ರಮೇಶ್ ಕುಮಾರ್, ಮಹಿಳಾ ಸಂಘಟನೆಗಳಿಗೆ ಇಷ್ಟೇ ಕೇಳಿಕೊಳ್ಳೋದು ನಮ್ಮ ಅಪ್ಪ ಅಮ್ಮನಿಗೆ ರಕ್ಷಣೆ ಕೊಡಿ” ಎಂದು ಮನವಿ ಮಾಡಿದ್ದಾಳೆ.

