ರೈತರ ಪ್ರತಿಭಟನೆ : ಕತ್ತಿಯಿಂದ ಪೊಲೀಸ್ ಮೇಲೆ ದಾಳಿ ಮಾಡಿದ ವ್ಯಕ್ತಿ ಸೇರಿ 43 ಜನರ ಬಂಧನ!

ದೆಹಲಿ ಮತ್ತು ಹರಿಯಾಣದ ರೈತರು ಸಿಂಘೂ ಗಡಿಯಲ್ಲಿ ಶುಕ್ರವಾರ ನಡೆದ ಘರ್ಷಣೆಯ ವೇಳೆ ಪೊಲೀಸ್ ಅಧಿಕಾರಿಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ವ್ಯಕ್ತಿ ಸೇರಿದಂತೆ 44 ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಮೊನ್ನೆ ರಾತ್ರಿಯಿಂದ ಪ್ರತಿಭಟನಾ ರೈತರ ಟೆಂಟ್ ಗಳ ಮೇಲೆ ಕಲ್ಲು ತೂರಾಟ ನಡೆದಿದ್ದು ರೈತರು ಹಾಗೂ ಸ್ಥಳೀಯರ ನಡುವೆ ನಿನ್ನೆ ಘರ್ಷಣೆ ಸಂಭವಿಸಿ ಪೊಲೀಸರು ಲಾಠಿಚಾರ್ಜ್ ಹಾಗೂ ಅಶ್ರುವಾಯು ಸಿಡಿಸುವ ಮೂಲಕ ಗಲಭೆಯನ್ನು ಶಾಂತಗೊಳಿಸಿದರು. ಈ ವೇಳೆ ಪೋಲೀಸ್ ಮೇಲೆ ವ್ಯಕ್ತಿಯೊಬ್ಬ ಕತ್ತಿಯಿಂದ ಹಲ್ಲೆಗೆ ಮುಂದಾಗಿದ್ದನು. ಈತನನ್ನು ಸೇರಿದಂತೆ 43 ಜನರನ್ನು ಪೋಲೀಸರು ಬಂಧಿಸಿದ್ದಾರೆ.

ಪ್ರತಿಭಟನಾ ಸ್ಥಳದಿಂದ ಸಾವಿರಾರು ಪ್ರತಿಭಟನಾಕಾರರನ್ನು ವಾಪಾಸ್ಸು ಕಳುಹಿಸುವ ಪ್ರಯತ್ನಗಳು ನಡೆಯುತ್ತಿದ್ದು ಪ್ರತಿಭನಟಾ ನಿರತ ರೈತರು “ತಮ್ಮ ಪ್ರಾಣ ಬೇಕಾದರೂ ಬಿಡುತ್ತೇವೆ ಆದರೆ ಪ್ರತಿಭಟನಾ ಸ್ಥಳದಿಂದ ಕದಡುವುದಿಲ್ಲ” ಎಂದು ಪಟ್ಟು ಹಿಡಿದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights