ದೇಶದಲ್ಲಿ ಕ್ಷೀಣಿಸಿದ ಕೊರೊನಾ : 11,713 ಹೊಸ ಕೇಸ್ : 95 ಜನ ಸಾವು..!

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 11,713 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು 95 ಜನ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈವರೆಗೆ ದೇಶದಲ್ಲಿ 1,08,14,304 ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ 1,05,10,796 ಜನರು ಚೇತರಿಸಿಕೊಂಡಿದ್ದಾರೆ. ಇನ್ನೂ 1,48,590 ಸಕ್ರಿಯ ಪ್ರಕರಣಗಳಿದ್ದು ಈವರೆಗೆ 1,54,918 ಜನ ಸಾವನ್ನಪ್ಪಿದ್ದಾರೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಫೆಬ್ರವರಿ 5 ರವರೆಗೆ ಒಟ್ಟು 20,06,72,589 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 7,40,794 ಮಾದರಿಗಳನ್ನು ಶುಕ್ರವಾರ ಪರೀಕ್ಷಿಸಲಾಗಿದೆ.

ಭಾರತದಲ್ಲಿ ಕೋವಿಡ್-19 ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ ಮತ್ತು ಸೆಪ್ಟೆಂಬರ್ 5 ರಂದು 40 ಲಕ್ಷ ದಾಟಿತ್ತು. ಇದು ಸೆಪ್ಟೆಂಬರ್ 16 ರಂದು 50 ಲಕ್ಷ, ಸೆಪ್ಟೆಂಬರ್ 28 ರಂದು 60 ಲಕ್ಷ, ಅಕ್ಟೋಬರ್ 11 ರಂದು 70 ಲಕ್ಷ ಮತ್ತು ಅಕ್ಟೋಬರ್ 29 ರಂದು 80 ಲಕ್ಷ ಮತ್ತು ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ದಾಟಿದೆ.

ದೇಶದಲ್ಲಿ ಈವರೆಗೆ ವರದಿಯಾದ ಒಟ್ಟು 1,54,918 ಸಾವುಗಳಲ್ಲಿ ಮಹಾರಾಷ್ಟ್ರದಿಂದ 51,255, ತಮಿಳುನಾಡಿನಿಂದ 12,379, ಕರ್ನಾಟಕದಿಂದ 12,230, ದೆಹಲಿಯಿಂದ 10,873, ಪಶ್ಚಿಮ ಬಂಗಾಳದಿಂದ 10,201, ಉತ್ತರಪ್ರದೇಶದಿಂದ 8,682, ಆಂಧ್ರಪ್ರದೇಶದಿಂದ 7,158, 5,635 ಗುಜರಾತ್‌ನಿಂದ 4,393 ದಾಖಲಾಗಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights