ಸ್ವಾರ್ಥ-ಹೇಡಿತನದಲ್ಲಿ ಕ್ರಿಕೆಟಿಗರು ಸಿನಿಮಾ ನಟರನ್ನೂ ಮೀರಿಸಿದ್ದಾರೆ: ನಟ ಚೇತನ್

ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡು ಕೇಂದ್ರ ಸರ್ಕಾರದ ಪರವಾಗಿ ಟ್ವೀಟ್‌ ಮಾಡಿದ್ದ ಭಾರತೀಯ ಕ್ರಿಕೆಟ್‌ ಆಡಗಾರರ ವಿರುದ್ಧ ಕನ್ನಡ ಚಿತ್ರರಂಗದ ನಟ ಚೇತನ್ ವಾಗ್ದಾಳಿ ನಡೆಸಿದ್ದಾರೆ. “ಚೆಂಡಿನೊಂದಿಗೆ ಆಟವಾಡಲು ಮಿದುಳು ಅಥವಾ ಹೃದಯದ ಅವಶ್ಯಕತೆ ಹೆಚ್ಚು ಬೇಕಿಲ್ಲ” ಎಂದು ಅವರು ಹೇಳಿದ್ದಾರೆ.

ಅಂತರಾಷ್ಟ್ರೀಯ ಸೆಲೆಬ್ರಟಿಗಳು, ಗಣ್ಯರು ಭಾರತದ ರೈತರ ಹೋರಾಟವನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದರು. ಅವರ ವಿರುದ್ಧ ಭಾರತೀಯ ಕ್ರಿಕೆಟಿಗರು ಮತ್ತು ಬಾಲಿವುಡ್‌ನ ಕೆಲವು ನಟ-ನಟಿಯರು ನಡೆಸಿದ ಟ್ವೀಟ್ ದಾಳಿ ನಡೆಸಿದ್ದರು. ಅವರ ಹೆಸರುಗಳನ್ನು ಉಲ್ಲೇಖಿಸದೇ ಟ್ವೀಟ್‌ ಮಾಡಿರುವ ಚೇತನ್‌, ಸರ್ಕಾರದ ಬಾಲಂಗೋಚಿಗಳಂತೆ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡವರ ವಿರುದ್ದ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಚೇತನ್, “ಅತ್ಯಂತ ಸ್ವಾರ್ಥಿಗಳು, ಬೌದ್ಧಿಕ ದುರ್ಬಲರು ಮತ್ತು ಹೇಡಿತನಕ್ಕೆ ಪ್ರಸಿದ್ದರಾದವರು ಕೇವಲ ಭಾರತೀಯ ಚಲನಚಿತ್ರ ನಟರು ಮಾತ್ರವಲ್ಲ. ಇನ್ನು ಮುಂದೆ ಆ ವಿಭಾಗಗಳಲ್ಲಿ ಭಾರತೀಯ ಕ್ರಿಕೆಟ್ ಆಟಗಾರರು ಮುನ್ನಡೆ ಸಾಧಿಸಲಿದ್ದಾರೆ. ಚೆಂಡಿನೊಂದಿಗೆ ಆಟವಾಡಲು ಮಿದುಳು ಅಥವಾ ಹೃದಯದ ಅವಶ್ಯಕತೆ ಹೆಚ್ಚು ಬೇಕಿಲ್ಲ ಎಂಬುದು ನಮಗೆ ಗೊತ್ತೆ ಇದೆ” ಎಂದು ಬರೆದುಕೊಂಡಿದ್ದಾರೆ.

ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್, ಪಾಪ್ ಸಿಂಗರ್ ರಿಹಾನ್ನ, ಅಮೆರಿಕದ ವಕೀಲೆ ಮೀನಾ ಹ್ಯಾರಿಸ್ ಸೇರಿದಂತೆ ಹತ್ತಾರು ಜಾಗತಿಕ ಸೆಲೆಬ್ರೆಟಿಗಳು ಟ್ವೀಟ್ ಮಾಡಿದ್ದರು.

Read Also: ಅನಿಲ್ ಕುಂಬ್ಳೆಗೆ ನಾಚಿಕೆಯಾಗಬೇಕು ಎಂದ ಕನ್ನಡಿಗರು; ಕುಂಬ್ಳೆ ವಿರುದ್ಧ ಕನ್ನಡಿಗರು ಸಿಡಿದಿದ್ದೇಕೆ?

ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ದೆಹಲಿ ಪೊಲೀಸರು ಘರ್ಷಣೆ ನಡೆಸಿದ ನಂತರ ಅಲ್ಲಿ ಇಂಟರ್ನೆಟ್ ಕಡಿತಗೊಳಿಸಿರುವುದನ್ನು ಉಲ್ಲೇಖಿಸಿ ಸಿಎನ್‌ಎನ್ ಹೋರಾಟದ ಬಗ್ಗೆ ವರದಿ ಮಾಡಿತ್ತು. ಇದನ್ನು ತನ್ನ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದ ಪಾಪ್ ತಾರೆ ರಿಹಾನ್ನಾ “ರೈತ ಹೋರಾಟದ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ” ಎಂದು ಪ್ರಶ್ನಿಸಿದ್ದರು.

ರಿಹಾನ್ನಾ ಟ್ವೀಟ್ ಮಾಡಿದ ನಂತರ ಹೋರಾಟವು ಜಾಗತಿಕವಾಗಿ ಸದ್ದು ಮಾಡಿದ್ದು ಹಲವಾರು, ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ರೈತ ಹೋರಾಟದ ಪರವಾಗಿ ಟ್ವೀಟ್ ಮಾಡಿದ್ದರು.

ಮೀನಾ ಹ್ಯಾರಿಸ್ ರೈತರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ, “ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಿರುವುದು ಕಾಕತಾಳೀಯವಲ್ಲ, ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವವು ಆಕ್ರಮಣಕ್ಕೊಳಗಾಗಿದೆ. ಭಾರತದ ಅಂತರ್ಜಾಲ ಸ್ಥಗಿತಗೊಳಿಸುವಿಕೆ ಮತ್ತು ರೈತ ಪ್ರತಿಭಟನಾಕಾರರ ವಿರುದ್ಧ ಅರೆಸೈನಿಕ ಪಡೆಗಳ ದೌರ್ಜನ್ಯದ ವಿರುದ್ಧ ನಾವೆಲ್ಲರೂ ಆಕ್ರೋಶಗೊಳ್ಳಬೇಕು”ಎಂದು ಅವರು ಟ್ವೀಟ್ ಮಾಡಿದ್ದರು.

ಇವರನ್ನು ಖಂಡಿಸಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಬಾಲಿವುಡ್ ನಟರು ಟ್ವೀಟ್ ಮಾಡಿದ್ದರು. ಇವರಿಬ್ಬರಿಗೂ ಪರೋಕ್ಷವಾಗಿ ಚೇತನ್ ಟಾಂಗ್ ನೀಡಿದ್ದಾರೆ.

Read Also: ಸಚಿನ್‌ ಭಾರತ ರತ್ನ ಪ್ರಶಸ್ತಿಗೆ ಅರ್ಹರಲ್ಲ: ಆರ್‌ಜೆಡಿ ನಾಯಕ ಶಿವಾನಂದ್‌ ತಿವಾರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights