ವಿಜಯ ನಗರ: ಕಲುಷಿತ ನೀರು ಕುಡಿದು ಸರಣಿ ಸಾವು; ಜೀವ ಉಳಿಸಿಕೊಳ್ಳಲು ಗ್ರಾಮವನ್ನೇ ತೊರೆದ ಜನರು

ನೂತನವಾಗಿ ಘೋಷಣೆಯಾಗಿರುವ ವಿಜಯ ನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು, ಇದೂವರೆಗೂ 6 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ, ಪ್ರಾಯಭೀತಿಯಲ್ಲಿರುವ ಜನರು ಜೀವ ಉಳಿಸಿಕೊಳ್ಳಲು ಗ್ರಾಮವನ್ನೇ ತೊರೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಗ್ರಾಮದಲ್ಲಿ ಶುದ್ದ ಕುಡಿಯುವ ನೀರು ಸಿಗದ ಕಾರಣ, ಕಲುಷಿತ ನೀರು ಕುಡಿದು ಆರು ಜನರು ಸಾವನ್ನಪ್ಪಿದ್ದಾರೆ. ಅಲ್ಲಿನ ಜನರು ಶುದ್ದಿ ನೀರಿಗಾಗಿ ಹಂಬಲಿಸುತ್ತಿದ್ಧಾರೆ. ಆದರೆ, ಗ್ರಾಮ ಪಂಚಾಯತಿಯೂ ಸೇರಿದಂತೆ ಯಾವ ಜನಪ್ರತಿನಿಧಿಯೂ ಅವರ ಸಮಸ್ಯೆಯನ್ನು ಆಲಿಸದೇ ಇರುವುದರಿಂದ, ಜನರು ಕಂಗಾಲಾಗಿದ್ದಾರೆ.

ಹಲವು ಬಾರಿ ಜಿಲ್ಲಾಡಳಿತಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ್ದರೂ, ಜಿಲ್ಲಾಡಳಿತ ಗ್ರಾಮದತ್ತ ತಲೆಯನ್ನೇ ಹಾಕಿಲ್ಲ. ಹೀಗಾಗಿ, ಗ್ರಾಮದ ಜನರು ಬೇರೆ ದಾರಿ ಕಾರದೇ, ಪ್ರಾಣ ಉಳಿಸಿಕೊಳ್ಳಲು ಕುಟುಂಬ ಸಮೇತ ಊರನ್ನೇ ತೊರೆಯುತ್ತಿದ್ದಾರೆ. ಅಕ್ಕಪಕ್ಕದ ಊರುಗಳಿಗೆ ತೆರಳಿ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಕಲುಷಿತ ನೀರಿನಿಂದ ಅಸ್ವಸ್ಥಗೊಂಡವರನ್ನು ಹುಬ್ಬಳ್ಳಿ, ದಾವಣಗೆರೆ, ಹಾವೇರಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಮಕರಬ್ಬಿ ಗ್ರಾಮದ ಶಾಲೆಗೆ ತಾತ್ಕಾಲಿಕವಾಗಿ ರಜೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಟಿಕೆಟ್‌ ಇಲ್ಲದೆ ರೈಲಿನಲ್ಲಿ ಹಣ್ಣು ಮಾರುತ್ತಿದ್ದ ಕರ್ನಾಟಕದ ಮಹಿಳೆ ಮೇಲೆ RPF ಪೊಲೀಸರಿಂದ ಹಲ್ಲೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights