ಜರ್ಮನ್ ಸಾವಿನ ಪ್ರವಾಹ – ಮನೆಗಳು ಕುಸಿದು 128 ಜನ ಮೃತ..!
ಜರ್ಮನಿಯಲ್ಲಿ ಪ್ರವಾಹ ಉಂಟಾಗಿ ಹಲವಾರು ಮನೆಗಳು ಸಂಪೂರ್ಣವಾಗಿ ಕುಸಿದು 128 ಜನ ಸಾವನ್ನಪ್ಪಿದ್ದಾರೆ. ಸಾವಿರಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ.
ಶತಮಾನದ ಪ್ರಳಯದಲ್ಲಿ ಜರ್ಮನ್ ಮುಳುಗಿ ಹೋಗಿದೆ. ಮನೆಗಳು, ರಸ್ತೆಗಳು ಕೊಚ್ಚಿ ಹೋಗಿವೆ. ಬಾಗಿಲು ಕಿಟಕಿ ಸಂದಿಯಿಂದ ಪ್ರವಾಹದ ನೀರು ಮನೆಗೆ ನುಗ್ಗಿದೆ. ಮನೆ ಸುತ್ತಲೂ ಕೆಸರು. ಮನೆಯಿಂದ ಹೊರಬಾರದಂತಾ ಸ್ಥಿತಿ. ಹೆಲಿಕ್ಯಾಪ್ಟರ್ ನಿಂದ ಮನೆ ಛಾವಣಿ ಮೇಲೆ ನಿಂತ ಜನರನ್ನು ರಕ್ಷಣೆ ಮಾಡಲಾಗುತ್ತಿದೆ. ಜನರೇ ಇಲ್ಲದೇ ಪಾಳು ಪ್ರದೇಶದಂತೆ ಪಶ್ಚಿಮ ಜರ್ಮಿನ್ ಕಾಣಿಸುತ್ತಿದೆ. ಪ್ರವಾಹದಿಂದ ರಸ್ತೆಗಳು ನದಿಗಳಾಗಿವೆ.

ಹೌದು… ಪಶ್ಚಿಮ ಜರ್ಮನ್ ಉದ್ದಗಲಕ್ಕೂ ಇಂತದ್ದೇ ದೃಶ್ಯ ಕಾಣಿಸುತ್ತಿವೆ. ಕೆಲ ಕಾರುಗಳ ಚಕ್ರ ನೆಲದಲ್ಲಿ ಮುಳಗಿ ಹೋಗಿದ್ರೆ ಕೆಲವು ಆಕಾಶ ನೋಡುತ್ತಿವೆ. ಇನ್ನೂ ಕೆಲವು ಕೊಚ್ಚ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಂದಿವೆ. ಕೆಲವು ಕೆಸರಿನಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿವೆ. ಹೀಗೆ ಜರ್ಮನ್ ಜಲಪ್ರಳಯ ಪ್ರತೀ ದೃಶ್ಯವೂ ಭೀಕರವಾಗಿವೆ. ಕುಂಭತ್ರೋಣ ಮಳೆಯಿಂದಾಗಿ ಉಂಟಾದ ಪ್ರವಾಹಕ್ಕೆ ಪಶ್ಚಿಮ ಜರ್ಮನ್ ತತ್ತರಿಸಿ ಹೋಗಿದೆ.

ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಅಹ್ರ್ವೀಲರ್, ಸ್ವಿಟ್ಜರ್ಲೆಂಡ್ ಪ್ರದೇಶಗಳಲ್ಲಿ ತೀವ್ರ ಹಾನಿಯಾಗಿದೆ.
ಫ್ಲಾಟ್, ಕಚೇರಿ, ಮನೆಗಳು 15 ನಿಮಿಷ ಎಲ್ಲವೂ ನೀರಿನೊಳಗೆ ಇತ್ತು. ಕಾಣೆಯಾದವರ ಮತ್ತೆ ಕಾರ್ಯ ನಡೆದಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ರೈನ್ಲ್ಯಾಂಡ್-ಪ್ಯಾಲಟಿನೇಟ್ನ ಆಂತರಿಕ ಸಚಿವ ರೋಜರ್ ಲೆವೆಂಟ್ಜ್ ಹೇಳಿದ್ದಾರೆ.

