ಬೆಂಗಳೂರಿನ ಖೋಡೇಸ್ ಗ್ರೂಪ್ ಗೆ ಐಟಿ ಶಾಕ್ : 15 ಕಡೆ ದಾಳಿ..!
ಇಂದು ಬೆಳಂಬೆಳಿಗ್ಗೆ ಬೆಂಗಳೂರಿನ ಖೋಡೇಸ್ ಗ್ರೂಪ್ ಗೆ ಐಟಿ ಶಾಕ್ ಕೊಟ್ಟಿದೆ. ಮದ್ಯ ಸಾಮ್ರಾಜ್ಯದ ಪ್ರಮುಖ ಕಂಪನಿಯಾದ ಬೆಂಗಳೂರಿನ ಖೋಡೇಸ್ ಗ್ರೂಪ್ ಮೇಲೆ ಐಟಿ ದಾಳಿ ನಡೆದಿದೆ. ಖೋಡೇಸ್ ಗ್ರೂಪ ಮಾಲೀಕರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಲಾಗಿದೆ.
ಖೋಡೇಸ್ ಗ್ರೂಪ್ ನ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ದಾಳಿ ನಡೆದಿದ್ದು, ಶೇಷಾದ್ರಿ ರಸ್ತೆಯಲ್ಲಿರುವ ಮನೆ ಮತ್ತು ಆಫೀಸ್, ಕೋಣನಕುಂಟೆಯ ಫ್ಯಾಕ್ಟರಿ ಸೇರಿದಂತೆ 15 ಕ್ಕೂ ಹೆಚ್ಚು ಕಡೆ ದಾಳಿಗಳನ್ನು ನಡೆದಿವೆ. ಖೋಡೇಸ್ ಬ್ರಿವರೇಜಸ್, ಖೊಡೆ ಆರ್ ಸಿ ಎ, ಖೊಡೆ ಇಂಡಿಯಾ ಫ್ಯಾಕ್ಟರಿಗಳ ಮೇಲೆ ಐಟಿ ದಾಳಿಯಾಗಿದೆ.
ರಾಮಚಂದ್ರ ಖೋಡೆ, ಹರಿ ಖೋಡೆ ಸಹೋದರರ ಮನೆ ಮೇಲೆಯೂ ಐಟಿ ದಾಳಿಗಳು ನಡೆದಿದ್ದು, ಐಟಿ ಅಧಿಕಾರಿಗಳು ತಂಡೋಪತಂಡವಾಗಿ ಪರಿಶೀಲನೆ ನಡೆಸ್ತಿದ್ದಾರೆ.