‘ಜನರು ಬದಲಾವಣೆ ಬಯಸುತ್ತಾರೆ’ ಮಮತಾ ಬ್ಯಾನರ್ಜಿ ವಿರುದ್ಧ ಜೆಪಿ ನಡ್ಡಾ ವಾಗ್ದಾಳಿ!

ವಿಧಾನಸಭಾ ಚುನಾವಣೆಗೆ ಬಂಗಾಳದಲ್ಲಿ ಭರದ ಪ್ರಚಾರ ಆರಂಭವಾಗಿದ್ದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಂಗಳವಾರ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ನಾಡಿಯಾದಲ್ಲಿ ಪ್ಯಾರಿಬೋರ್ಟನ್ ಯಾತ್ರೆಯನ್ನು ಪ್ರಾರಂಭಿಸಿ ಮಾತನಾಡಿದ ನಡ್ಡಾ, ” ಪಶ್ಚಿಮ ಬಂಗಾಳ ಅಭಿವೃದ್ಧಿ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಆದರೆ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ಮೌಲ್ಯಗಳನ್ನು ನಾಶಪಡಿಸಿದೆ. ಬಂಗಾಳದಲ್ಲಿ ಜನರು ಸಾಕಷ್ಟು ಬದಲಾವಣೆಯನ್ನು ಬಯಸುತ್ತಾರೆ. ನಾಯಕತ್ವದ ಬದಲಾವಣೆಯನ್ನು ಬಯಸುತ್ತಾರೆ” ಎಂದು ಕುಟುಕಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಈಕೆಯ ಅಹಂನಿಂದಾಗಿ ಬಂಗಾಳದ ರೈತರು ಕೇಂದ್ರದ ಯೋಜನೆಗಳ ಲಾಭ ಪಡೆಯಲಾಗುತ್ತಿಲ್ಲ ಎಂದಿದ್ದಾರೆ. “ಮಮತಾ ಜಿ ಅಭಿವೃದ್ಧಿಯನ್ನು ಬಯಸುವುದಿಲ್ಲ” ಎಂದು ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights