ಅಮೇರಿಕಾ ಸೇನೆ ಪರ ಕೆಲಸ ಮಾಡಿದ ವ್ಯಕ್ತಿಗೆ ಉಗ್ರ ಶಿಕ್ಷೆ : ತಾಲಿಬಾನಿಗಳಿಂದ ಬೆಚ್ಚಿ ಬೀಳಿಸುವ ಕೃತ್ಯ!
ಅಮೇರಿಕಾ ಸೇನೆ ಕಾಬೂಲ್ ವಿಮಾನ ನಿಲ್ದಾಣ ತೊರೆಯುತ್ತಿದ್ದಂತೆ ತಾಲಿಬಾನಿಗಳು ವಿಕೃತಿ ಮೆರೆದಿದ್ದಾರೆ. ನೀವೆಂದು ನೋಡಿರದ ಬೆಚ್ಚಿ ಬೀಳಿಸುವ ಕೃತ್ಯವನ್ನು ತಾಲಿಬಾನಿಗಳು ಎಸಗಿದ್ದಾರೆ.
ಹೌದು… ಅಮೇರಿಕ ಸೇನೆ ಕಾಬೂಲ್ ತೊರೆಯುತ್ತಿದ್ದಂತೆ ಅಮೇರಿಕ ಸೇನೆಗೆ ಭಾಷಾಂತರಿಯಾಗಿ ಕೆಲಸ ಮಾಡುತ್ತಿದ್ದ ಆಫ್ಘಾನ್ ವ್ಯಕ್ತಿಯನ್ನು ತಾಲಿಬಾನಿಗಳು ಹೆಲಿಕಾಪ್ಟರ್ ಗೆ ನೇಣು ಹಾಕಿದ್ದಾರೆ. ಈ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ವಿರುದ್ಧ ಕೆಲಸ ಮಾಡುವವರಿಗೂ ಇದೇ ಗತಿ ಎಂದು ಬಿಂಬಿಸುವಂತೆ ತಾಲಿಬಾನಿಗಳು ಅಮೇರಿಕ ಸೇನೆ ಪರ ಕೆಲಸ ಮಾಡಿದ ವ್ಯಕ್ತಿಗೆ ಉಗ್ರ ಶಿಕ್ಷೆ ನೀಡಿದೆ. ತಾಲಿಬಾನ್ ಉಗ್ರರ ರಕ್ಕಸ ರೂಪ ಕಂಡು ಇಡೀ ಜಗತ್ತೇ ಬೆಚ್ಚಿಬಿದ್ದಿದೆ.
ಅಮೇರಿಕ ಸೇನೆಗೆ ಆಫ್ಘಾನ್ ಭಾಷೆಯನ್ನು ಅರ್ಥೈಯಿಸುವ ಮೂಲಕ ಭಾಷಾಂತರಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ತಾಲಿಬಾನಿಗಳು ಕ್ರೂರವಾಗಿ ಶಿಕ್ಷೆ ನೀಡಿದೆ. ಹೆಲಿಕಾಪ್ಟರ್ ಗೆ ಭಾಷಾಂತರಿಯನ್ನು ನೇಣು ಹಾಕಿ ಹಾರಾಡಿಸಿದ ತಾಲಿಬಾನಿಗಳು ಈ ಹಿಂದೆ ತಮ್ಮ ವಿರುದ್ಧ ಮಾಹಿತಿ ನೀಡುವವರಿಗೆ ಕ್ಷಮಾಧಾನ ನೀಡುವುದಾಗಿ ಹೇಳಿತ್ತು. ಆದರೀಗ ತಾಲಿಬಾನಿಗಳು ಮತ್ತದೇ ಹಳೆಯ ಕ್ರೌರ್ಯ್ಯತೆ ಮರೆದಿದ್ದಾರೆ.
ಈಗಾಗಲೇ ತಮ್ಮ ಬಗ್ಗೆ ಮಾಹಿತಿ ನೀಡುವ, ತಮ್ಮ ವಿರುದ್ಧ ಕೆಲಸ ಮಾಡುವವರನ್ನು ತಾಲಿಬಾನಿಗಳು ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ. ಅದೆಲ್ಲದಕ್ಕಿಂತ ಈ ಘಟನೆ ಮಾತ್ರ ಘನಘೋರವಾಗಿದ್ದು ಇಡೀ ಜಗತ್ತೇ ತಾಲಿಬಾನಿಗಳ ಕೃತ್ಯಕ್ಕೆ ಬೆಚ್ಚಿಬಿದ್ದಿದೆ.
If this is what it looks like… the Taliban hanging somebody from an American Blackhawk… I could vomit. Joe Biden is responsible.
— Liz Wheeler (@Liz_Wheeler) August 30, 2021