ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ 20 ಶ್ವಾನಗಳು : ಬೀದಿ ನಾಯಿಗಳ ಕೂಗಿಗೆ ಬೇಸತ್ತು ಆತ ಮಾಡಿದ್ದೇನು ಗೊತ್ತಾ?

ಬೀದಿ ನಾಯಿಗಳ ಕೂಗಿಗೆ ಬೇಸತ್ತ ವ್ಯಕ್ತಿಯೊಬ್ಬ ಅಮಾನುಷವಾಗಿ ನಡೆದುಕೊಂಡಿದ್ದಾನೆ. ಈತ ಮಾಡಿದ ಕೆಲಸಕ್ಕೆ 20 ಬೀದಿ ನಾಯಿಗಳು ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿವೆ.

ಕಳೆದ ಐದು ದಿನಗಳಲ್ಲಿ ಒಡಿಶಾದ ಕಟಕ್ ಜಿಲ್ಲೆಯಲ್ಲಿ 20 ಬೀದಿ ನಾಯಿಗಳಿಗೆ ವಿಷ ನೀಡಿ ಸಾಯಿಸಿದ ಆರೋಪದ ಮೇಲೆ 24 ವರ್ಷದ ಮಾಂಸ ಮಾರಾಟಗಾರನನ್ನು ಬಂಧಿಸಲಾಗಿದೆ.

ಕಟಕ್ ನಗರದ ತಂಗಿ-ಚೌದ್ವಾರ್ ಬ್ಲಾಕ್‌ನ ಶಂಕರಪುರ ಗ್ರಾಮದ ಮಾರುಕಟ್ಟೆಯ ಸುತ್ತಲೂ ಸುಮಾರು 10ಕ್ಕೂ ಹೆಚ್ಚು ನಾಯಿಗಳ ಮೃತ ದೇಹವನ್ನು ಸ್ಥಳೀಯರು ಪತ್ತೆ ಹಚ್ಚಿದ್ದಾರೆ. ಈ ನಾಯಿಗಳಮೃತದೇಹವನ್ನು ಹತ್ತಿರದ ಹಳ್ಳದಲ್ಲಿ ಎಸೆಯಲಾಗಿತ್ತು. ಸ್ಥಳೀಯನೊಬ್ಬ ಕಾಲು ಜಾರಿ ಹಳ್ಳಕ್ಕೆ ಬಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಮಾಂಸ ಮಾರಾಟಗಾರ ಕೆಲ ದಿನಗಳಿಂದ ಬೀದಿ ನಾಯಿಗಳಿಗೆ ರಾತ್ರಿ ಹೊತ್ತು ವಿಷ ಆಹಾರ ನೀಡುತ್ತಿದ್ದನು. ರಾತ್ರಿಯಿಡಿ ನಾಯಿಗಳು ನರಳಾಡಿ ಪ್ರಾಣ ಬಿಟ್ಟ ಬಳಿಕ ಬೆಳಿಗ್ಗೆ ನಾಯಿಗಳ ದೇಹವನ್ನು ಹಳ್ಳಕ್ಕೆ ಎಸೆಯುತ್ತಿದ್ದ ಎಂದು ತಿಳಿದುಬಂದಿದೆ.

ರಾತ್ರಿಯಲ್ಲಿ ನಾಯಿಗಳು ಕೂಗುವುದು ಮತ್ತು ಅವುಗಳು ಸೃಷ್ಟಿಸುವ ಅವ್ಯವಸ್ಥೆ ಬಗ್ಗೆ ಸಿಟ್ಟಿಗೆದ್ದಿದ್ದದ್ದ ಆರೋಪಿ ನಾಯಿಗಳಿಗೆ ವಿಷ ಬೆರೆಸಿ ಆಹಾರವನ್ನು ನೀಡಿದ್ದಾನೆ. ಪೊಲೀಸ್ ವಿಚಾರಣೆ ವೇಳೆ ಈತ ತಪ್ಪು ಒಪ್ಪಿಕೊಂಡಿದ್ದಾನೆ.

ಭಾರತೀಯ ದಂಡ ಸಂಹಿತೆ ಮತ್ತು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯ ಅಡಿಯಲ್ಲಿ ಈ ವ್ಯಕ್ತಿಯನ್ನು ಬಂಧಿಸಲಾಗಿದೆ. ಮೃತದೇಹಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಕಳುಹಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights