ಫೆ.14ಕ್ಕೆ ‘ಪೊಗರು’ ಆಡಿಯೋ ರಿಲೀಸ್ : ಒಂದೇ ವೇದಿಕೆಯಲ್ಲಿ ದರ್ಶನ್ ಮತ್ತು ಸುದೀಪ್ !
‘ಪೊಗರು’ ಆಡಿಯೋ ರಿಲೀಸ್ ವೇದಿಕೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚಾ ಸುದೀಪ್ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಹೌದು… ಪ್ರೇಮಿಗಳ ದಿನದ ಅಂಗವಾಗಿ ಫೆ14 ಕ್ಕೆ ದಾವಣಗೆರೆಯಲ್ಲಿ ‘ಪೊಗರು’ ಆಡಿಯೋ ರಿಲೀಸ್ ವೇಳೆ ಸ್ಟಾರ್ ನಟರ ಸಮಾಗಮ ನಡೆಯಲಿದೆ. ಪುನೀತ್, ದರ್ಶನ್, ಸುದೀಪ್ ಮತ್ತು ಯಶ್ ಒಂದೇ ವೇದಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಳು ಒಗ್ಗಟ್ಟಿನ ಮಂತ್ರ ಜಪಿಸಲಿದ್ದಾರೆ.
ಈಗಾಗಲೇ ಪೊಗರು ಆಡಿಯೋ ರಿಲೀಸ್ ಗೆ ಸ್ಟಾರ್ ನಟರಾದ ಯಶ್, ಪುನೀತ್ ರಾಜಕುಮಾರ್, ಸುದೀಪ್, ದರ್ಶನ್ ಗೆ ಆಹ್ವಾನಿಸಲಾಗಿದೆ. ಆದರೆ ಈ ಬಗ್ಗೆ ಸ್ಟಾರ್ ನಟರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದರೂ ಭಾಗವಹಿಸುತ್ತಾರೆನ್ನುವ ಮಾತುಗಳು ಕೇಳಿ ಬರುತ್ತಿವೆ.
ಪ್ರೇಮಿಗಳಿಗೆ ಗಿಫ್ಟ್ ಆಗಿ ದಾವಣಗೆರೆಯಲ್ಲಿ ಈ ಬಾರಿ ಸ್ಯಾಂಡಲ್ ವುಡ್ ಸರ್ ಪ್ರೈಸ್ ಕೊಡಲಿದೆ. ಒಂದು ವೇಳೆ ಅಂದು ಕೊಂಡಂತೆ ಈ ಚಿತ್ರ ಸ್ಟಾರ್ ಗಳ ಸಮಾಗಮಕ್ಕೆ ಸಾಕ್ಷಿಯಾಗಲಿದೆ.
ಕೆಲ ಮನಸ್ತಾಪದಿಂದಾಗಿ ದರ್ಶನ್ ಹಾಗೂ ಸುದೀಪ್ ಒಂದೇ ವೇದಿಯಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದಿವೆ. ಆದರೀಗ ಮತ್ತೆ ಸ್ಟಾರ್ ಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ದಿನ ಫೆ.14 ಆಗಿರುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.